ETV Bharat / briefs

4 ದಿನಕ್ಕೆ ಬರೀ 8 ಕೊಡ ನೀರ್‌ರೀ.. ತೊಳಿಯಾಕ್‌, ಬಳಿಯಾಕ್‌ ಏನ್ಮಾಡ್ಬೇಕ್ರೀ ಅಂತಾರೆ ಜಗಳೂರು ಜನ - undefined

ಜಗಳೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನರಂತೂ ನೀರು ಸಿಗದೇ ಪರದಾಡುತ್ತಿದ್ದಾರೆ. ಸೊಕ್ಕೆ ಗ್ರಾಮಸ್ಥರ ಸ್ಥಿತಿಯಂತೂ ಹೇಳತೀರದು. ನಾಲ್ಕು ದಿನಕ್ಕೊಮ್ಮೆ ಎಂಟು ಬಿಂದಿಗೆ ನೀರು ಮಾತ್ರವೇ ಪೂರೈಸಲಾಗುತ್ತಿದೆ.

ನೀರಿಗಾಗಿ ಹಾಹಾಕಾರ
author img

By

Published : Jun 8, 2019, 9:49 AM IST

ದಾವಣಗೆರೆ: ಭೀಕರ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನರಂತೂ ನೀರು ಸಿಗದೇ ಪರದಾಡುತ್ತಿದ್ದಾರೆ. ಸೊಕ್ಕೆ ಗ್ರಾಮಸ್ಥರ ಸ್ಥಿತಿಯಂತೂ ಹೇಳತೀರದು. ನಾಲ್ಕು ದಿನಕ್ಕೊಮ್ಮೆ ಎಂಟು ಬಿಂದಿಗೆ ನೀರು ಮಾತ್ರ ಪೂರೈಸಲಾಗುತ್ತಿದೆ.

ನೀರಿಗಾಗಿ ಹಾಹಾಕಾರ

ಸೊಕ್ಕೆ ಸುತ್ತಮುತ್ತಲಿನ 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲ ಸಂಪೂರ್ಣ ಕುಸಿದಿದೆ. ಸೊಕ್ಕೆ ಗ್ರಾಮ ಪಂಚಾಯತ್ ವತಿಯಿಂದ ಹಲವೆಡೆ ಬೋರ್‌ವೆಲ್​ಗಳನ್ನು ಕೊರೆಸಲಾಗಿದ್ರೂ ನೀರು ಮಾತ್ರ ಸಿಗುತ್ತಿಲ್ಲ. 1200 ಅಡಿ ಆಳಕ್ಕೆ ಕೊರೆಸಿದ್ರೂ ನೀರಿನ ಸೆಲೆ ಸಿಗ್ತಿಲ್ಲ. ನೀರು ಬಿಡುವ ದಿನ ಬೆಳಗ್ಗೆ 6 ರಿಂದ 10ಗಂಟೆಯೊಳಗೆ ಇದ್ರೇ ಸಿಗುತ್ತೆ. 4 ಗಂಟೆಗಳ ಕಾಲ ಕಾದು ನೀರು ಹಿಡಿದುಕೊಳ್ಳಬೇಕು. ಇಲ್ಲದಿದ್ರೇ ಮತ್ತೆ ನಾಲ್ಕುದಿನ ಕಾಲ ಕಾಯಬೇಕಾದ ಸ್ಥಿತಿಯಿದೆ. ಕೇವಲ 8 ಕೊಡ ನೀರು 4 ದಿನಕ್ಕೊಮ್ಮೆ ಸಿಗುತ್ತಿರುವುದರಿಂದ ಜಾನುವಾರುಗಳ ಸ್ಥಿತಿಯಂತೂ ಹೇಳತೀರದಾಗಿದೆ ಎನ್ನುತ್ತಾರೆ ಗ್ರಾಮದ ಅಂಜಿನಪ್ಪ.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿಗೆ ನೀರು ತರುತ್ತೇವೆ. 22 ಕೆರೆ ತುಂಬಿಸಿ ಸಮಸ್ಯೆ ಬಗೆಹರಿಸುತ್ತೇವೆ ಎನ್ನುವ ರಾಜಕೀಯ ಮುಖಂಡರು ಈ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಕೇವಲ ಭರವಸೆ ಕೊಟ್ಟು ಹೋಗುತ್ತಾರೆ. ಮತ್ತೆ ಇತ್ತ ಕಡೆಗೆ ತಲೆ ಹಾಕುವುದಿಲ್ಲ ಎಂದು ಸೊಕ್ಕೆ ಗ್ರಾಮಸ್ಥರು ಆರೋಪಿಸುತ್ತಾರೆ.

ಕಳೆದ ಎರಡು ವರ್ಷಗಳಿಂದ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇತ್ತ ಮಳೆಯೂ ಇಲ್ಲ, ಅತ್ತ ಬೆಳೆಯೂ ಇಲ್ಲ. ಸಿಗುವ ನೀರನ್ನು ಎಷ್ಟು ಮಿತವಾಗಿ ಬಳಸಿದರೂ ಸಾಕಾಗುತ್ತಿಲ್ಲ. ಗ್ರಾಮವನ್ನೇ ಬಿಟ್ಟು ಹೋಗುವಂಥ ವಾತಾವರಣ ಇಲ್ಲಿದೆ ಅಂತಾರೆ ಇಲ್ಲಿನ ಮಹಿಳೆಯರು. ಜಿಲ್ಲಾಡಳಿತ ಇನ್ನಾದರೂ ಈ ಊರಿನ ಸ್ಥಿತಿ ಅರಿತು ಕುಡಿಯೋ ನೀರು ಸಮರ್ಪಕವಾಗಿ ಪೂರೈಸಬೇಕಾಗಿದೆ.

Intro:KN_DVG_02_07_BARA BHEEKARA_SCRIPT_YOGARAJ_7203307

REPORTER : YOGARAJ

ಜಗಳೂರು ತಾಲೂಕಿನಲ್ಲಿ ರಣಭೀಕರ ಬರಗಾಲ... ನಾಲ್ಕು ದಿನಕ್ಕೆ ಈ ಗ್ರಾಮದಲ್ಲಿ ಸಿಗುವುದು ಕೇವಲ 8 ಕೊಡ ನೀರು ಮಾತ್ರ...!

ದಾವಣಗೆರೆ : ರಣಭೀಕರ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನರಂತೂ ನೀರು ಸಿಗದೇ
ಪರದಾಡ್ತಿದ್ದಾರೆ. ಇನ್ನು ಸೊಕ್ಕೆ ಗ್ರಾಮಸ್ಥರ ಸ್ಥಿತಿಯಂತೂ ಹೇಳತೀರದು. ನಾಲ್ಕು ದಿನಕ್ಕೊಮ್ಮೆ ಎಂಟು ಕೊಡ ಮಾತ್ರ ನೀರು ಪೂರೈಸಲಾಗುತ್ತಿದೆ. ಸೊಕ್ಕೆ ಸುತ್ತಮುತ್ತಲಿನ 8 ಕಿಲೋ
ಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲ ಸಂಪೂರ್ಣ ಕುಸಿದು ಹೋಗಿದೆ.

ಸೊಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಹಲವೆಡೆ ಬೋರ್ ವೆಲ್ ಗಳನ್ನು ಕೊರೆಸಲಾಗಿದ್ದರೂ ನೀರು ಮಾತ್ರ ಸಿಗುತ್ತಿಲ್ಲ. ಒಂದು ಸಾವಿರದ ಇನ್ನೂರು ಅಡಿ ಕೊರೆಸಿದರೂ ಪ್ರಯೋಜನ
ಮಾತ್ರ ಶೂನ್ಯ. ನಾಲ್ಕು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆಯಾದರೂ ಅದು ಸಿಗುವುದು ಸ್ವಲ್ಪವೇ ಸ್ವಲ್ಪ. ನೀರು ಬಿಡುವ ದಿನ ಬೆಳಿಗ್ಗೆ ಆರು ಗಂಟೆಗೆ ಎದ್ದು ಬಂದು ಕ್ಯೂನಲ್ಲಿ ಕೊಡಗಳನ್ನು
ಇಡಬೇಕು. ಆಗ ಸಿಕ್ಕರೆ ಸಿಕ್ತು. ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ನೀರು ಬಿಡಲಾಗುತ್ತದೆ. ನಾಲ್ಕು ಗಂಟೆಗಳ ಕಾಲ ಕಾದು ನೀರು ಹಿಡಿದುಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ನಾಲ್ಕು
ದಿನಗಳ ಕಾಲ ಕಾಯಬೇಕಾದ ದುಃಸ್ಥಿತಿ ಎದುರಾಗಿದೆ.

ಕೇವಲ ಎಂಟು ಕೊಡ ನಾಲ್ಕು ದಿನಕ್ಕೊಮ್ಮೆ ಸಿಗುತ್ತಿರುವುದರಿಂದ ಜಾನುವಾರುಗಳ ಸ್ಥಿತಿಯಂತೂ ಹೇಳತೀರದ್ದು. ಅಕ್ಕ ಪಕ್ಕದವರ ಬಳಿ ನೀರು ತೆಗೆದುಕೊಂಡು ದನ ಕರುಗಳಿಗೆ ನೀರುಣಿಸುವ
ದಾರುಣ ಪರಿಸ್ಥಿತಿ ಎದುರಾಗಿದೆ. ಜನರಂತೂ ಸಾಲು ಸಾಲಾಗಿ ಕೊಡಗಳನ್ನು ಇಟ್ಟಿರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಮತ್ತೆ ಕೆಲವರಂತೂ ನೀರು ನಾಳೆ ಬಿಡುತ್ತಾರೆ ಅಂದರೆ ರಾತ್ರಿಯಿಂದಲೇ
ಕಾಯುತ್ತಿದ್ದಾರೆ ಅಂದರೆ ಇಲ್ಲಿ ಸಮಸ್ಯೆಯ ತೀವ್ರತೆ ಗೊತ್ತಾಗುತ್ತದೆ.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿಗೆ ನೀರು ತರುತ್ತೇವೆ, 22 ಕೆರೆ ತುಂಬಿಸಿ ಸಮಸ್ಯೆ ಬಗೆಹರಿಸುತ್ತೇವೆ ಎನ್ನುವ ರಾಜಕೀಯ ಮುಖಂಡರು ಈ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಿದರೆ
ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಕೇವಲ ಭರವಸೆ ಕೊಟ್ಟು ಹೋಗುತ್ತಾರೆ. ಮತ್ತೆ ಇತ್ತ ತಲೆ ಹಾಕುವುದಿಲ್ಲ ಎಂದು ಸೊಕ್ಕೆ ಗ್ರಾಮಸ್ಥರು ಆರೋಪಿಸುತ್ತಾರೆ.

ಕಳೆದ ಎರಡು ವರ್ಷಗಳಿಂದ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇತ್ತ ಮಳೆಯೂ ಇಲ್ಲ, ಅತ್ತ ಬೆಳೆಯೂ ಇಲ್ಲ. ಇನ್ನು ಸಿಗುವ ನೀರನ್ನು ಎಷ್ಟು ಮಿತವಾಗಿ ಬಳಸಿದರೂ ಸಾಕಾಗುತ್ತಿಲ್ಲ.
ಗ್ರಾಮವನ್ನೇ ಬಿಟ್ಟು ಹೋಗುವಂಥ ವಾತಾವರಣ ಇಲ್ಲಿದೆ ಅಂತಾರೆ ಗ್ರಾಮದ ಮಹಿಳೆಯರು. ಒಟ್ಟಿನಲ್ಲಿ ಸೊಕ್ಕೆ ಗ್ರಾಮಸ್ಥರ ಸ್ಥಿತಿಯಂತೂ ಹೇಳತೀರದ್ದು. ಈಗಲಾದರೂ ಎಚ್ಚೆತ್ತು ಜಿಲ್ಲಾಡಳಿತ
ಗ್ರಾಮದ ಜನರಿಗೆ ನೀರು ಪೂರೈಸುವ ಕೆಲಸ ಮಾಡಬೇಕು. ಅಧಿಕಾರಿಗಳು ನಿದ್ರೆಯ ಮಂಪರಿನಿಂದ ಎದ್ದು ಒಮ್ಮೆ ಇಲ್ಲಿಗೆ ಬಂದು ಭೇಟಿ ನೀಡಿದರೆ ನಮ್ಮ ಸಮಸ್ಯೆ ಗೊತ್ತಾಗುತ್ತದೆ ಅಂತಾರೆ
ಗ್ರಾಮಸ್ಥರು.

ಬೈಟ್ - 01 ನಾಗರಾಜ್, ಸೊಕ್ಕೆ ಗ್ರಾಮದ ಯುವಕ

ಬೈಟ್- 02 ಆಂಜಿನಪ್ಪ, ಸೊಕ್ಕೆ ಗ್ರಾಮದ ಮುಖಂಡ
Body:KN_DVG_02_07_BARA BHEEKARA_SCRIPT_YOGARAJ_7203307

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.