ETV Bharat / briefs

ಪ್ಲೇ ಆಫ್​ ಕನಸಿನೊಡನೆ ಕಣಕ್ಕಿಳಿಯುತ್ತಿವೆ ರಾಜಸ್ಥಾನ್​-ಹೈದರಾಬಾದ್​... ಆರ್​ಸಿಬಿಗೂ ಕೂಡ ಬಹುಮುಖ್ಯ ಈ ಪಂದ್ಯ! - ಸನ್​ರೈಸರ್ಸ್​ ಹೈದರಾಬಾದ್​

ಅಂಕಪಟ್ಟಿಯಲ್ಲಿ 4 ನೇಸ್ಥಾನದಲ್ಲಿರುವ ಹೈದರಾಬಾದ್​ ಹಾಗೂ 7 ನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡಗಳಿಗೆ ಈ ಗೆಲುವು ಅನಿವಾರ್ಯವಾಗಿದೆ. ಮೊದಲ ಮೂರು ಸ್ಥಾನದಲ್ಲಿ ಚೆನ್ನೈ, ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳು ಬಹುತೇಕ ಖಚಿತವಾಗಿರುವ ಹಿನ್ನಲೆಯಲ್ಲಿ ಕೊನೆಯ ತಂಡವಾಗಿ ಪ್ಲೇ ಆಫ್​ ತಲುಪಲು ಉಳಿದ 5 ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ.

srh
author img

By

Published : Apr 27, 2019, 1:15 PM IST

Updated : Apr 27, 2019, 3:04 PM IST

ಜೈಪುರ: ಪ್ಲೇ ಆಫ್​ ಮೇಲೆ ಕಣ್ಣಿಟ್ಟಿರುವ ಸನ್​ರೈಸರ್ಸ್​ ಹಾಗೂ ರಾಜಸ್ಥಾನಗಳು ಇಂದು ಜೈಪುರದ ಸವಾಯ್​ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.

ಅಂಕಪಟ್ಟಿಯಲ್ಲಿ 4 ನೇಸ್ಥಾನದಲ್ಲಿರುವ ಹೈದರಾಬಾದ್​ ಹಾಗೂ 7 ನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡಗಳಿಗೆ ಈ ಗೆಲುವು ಅನಿವಾರ್ಯವಾಗಿದೆ. ಮೊದಲ ಮೂರು ಸ್ಥಾನದಲ್ಲಿ ಚೆನ್ನೈ, ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳು ಬಹುತೇಕ ಖಚಿತವಾಗಿರುವ ಹಿನ್ನಲೆಯಲ್ಲಿ ಕೊನೆಯ ತಂಡವಾಗಿ ಪ್ಲೇ ಆಫ್​ ತಲುಪಲು ಉಳಿದ 5 ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ.

ರಾಜಸ್ಥಾನ ರಾಯಲ್ಸ್​ 11 ಪಂದ್ಯಗಳಲ್ಲಿ 4 ಗೆಲುವು,7 ಸೋಲು ಕಂಡಿದೆ. ಈ ಪಂದ್ಯದಲ್ಲಿ ಸೋಲನುಭವಿಸಿದರೆ ತನ್ನ ಪ್ಲೇ ಆಫ್​ ಕನಸಿನ ಜೊತೆಗೆ, ಪಂಜಾಬ್, ಕೆಕೆಆರ್​ ಹಾಗೂ ಬೆಂಗಳೂರು ತಂಡದ ಪ್ಲೇ ಆಫ್​ ಕನಸು ಬಹುತೇಕ ನುಚ್ಚುನೂರು ಮಾಡಲಿದೆ. ಈ ಪಂದ್ಯವನ್ನು ರಾಯಲ್ಸ್​ ಗೆದ್ದರೆ ಮುಂದಿನ ಕೆಲವು ಪಂದ್ಯಗಳು ರೋಚಕವಾಗಿರುತ್ತವೆ.

ಆದರೆ ರಾಜಸ್ಥಾನಕ್ಕೆ ಗೆಲುವು ಸುಲಭವಲ್ಲ, ಏಕೆಂದರೆ ತಂಡದ ಬೆನ್ನೆಲುಬಾಗಿದ್ದ ಜೋಫ್ರಾ ಆರ್ಚರ್​ ರಾಷ್ಟ್ರೀಯ ತಂಡದಿಂದ ಕರೆ ಬಂದಿರುವ ಕಾರಣ ಐಪಿಎಲ್​ನಿಂದ ನಿರ್ಗಮಿಸಿದ್ದಾರೆ. ಇವರ ಜೊತೆಗೆ ಬೆನ್​ಸ್ಟೋಕ್ಸ್​ ಕೂಡ ತವರಿಗೆ ಮರಳಿದ್ದಾರೆ. ಹೀಗಾಗಿ ರಾಯಲ್ಸ್​ಗೆ ಬೌಲಿಂಗ್​ನಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಆರ್ಚರ್​ ಬೌಲಿಂಗ್​ ಜೊತೆಗೆ ಕೆಲವು ಪಂದ್ಯಗಳಲ್ಲಿ ಫೀನಿಶರ್​ ರೋಲ್​ ಕೂಡ ನಿರ್ವಹಿಸಿದ್ದರು.

ಇನ್ನು ಹೈದರಾಬಾದ್​ 10 ಪಂದ್ಯಗಳಲ್ಲಿ ತಲಾ 5 ಗೆಲವು-ಸೋಲು ಕಂಡಿದೆ. ಈ ಪಂದ್ಯ ಗೆದ್ದರೆ ಪ್ಲೇ ಆಫ್​ ಗೆ ಹತ್ತಿರವಾಗಲಿದೆ. ಕೆಕೆಆರ್​,ಆರ್​ಸಿಬಿ ಹಾಗೂ ರಾಜಸ್ಥಾನ ತಂಡಗಳು ಕೊನೆಯ ಮೂರು ಪಂದ್ಯ ಗೆದ್ದರೂ 14 ಅಂಕ ಪಡೆಯಲಿವೆ ಒಂದು ಈ ಪಂದ್ಯ ಹೈದರಾಬಾದ್ ಗೆದ್ದರೆ 12 ಅಂಕವಾಗಲಿದ್ದು, ಉಳಿದ 3 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದರು ಪ್ಲೇ ಅಫ್​ ಸ್ಥಾನ ಖಚಿತವಾಗಲಿದೆ.

ರಾಜಸ್ಥಾನದಂತೆ ಹೈದರಾಬಾದಿಗೂ ಬೈರ್ಸ್ಟೋವ್​ ಇಲ್ಲದಿರುವುದು ಬಹುದೊಡ್ಡ ನಷ್ಟವಾಗಿದೆ. ಟೂರ್ನಿಯಲ್ಲಿ ಹಾಗೂ ಹೈದರಾಬಾದ್​ ತಂಡದ ಗೆಲುವಿನಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಬೈರ್ಸ್ಟೋವ್​ ಇಂಗ್ಲೆಂಡ್​ ತಂಡಕ್ಕೆ ವಾಪಾಸ್​ ಆಗಿದ್ದಾರೆ. ಹೀಗಾಗಿ ಹೊಸ ಆರಂಭಿಕ ಗಪ್ಟಿಲ್​ರೊಡನೆ ವಾರ್ನರ್​ ಕಣಕ್ಕಿಳಿಯಬೇಕಾಗಿದೆ. ಕೇನ್​ ವಿಲಿಯಮ್ಸನ್​ ತಂಡ ಸೇರ್ಪಡೆಗೊಂಡಿರುವುದೆ ಸನ್​ರೈರ್ಸ್​ಗೆ ಸಮಧಾನದ ಸಂಗತಿಯಾಗಿದೆ.

ಮುಖಾಮುಖಿ:

ಎರಡು ತಂಡಗಳು ಐಪಿಎಲ್​ನಲ್ಲಿ ಇಲ್ಲಿಯವರೆಗೆ 10 ಬಾರಿ ಮುಖಾಮುಖಿಯಾಗಿದ್ದು, 6 ಬಾರಿ ಸನ್​ರೈಸರ್ಸ್​ ಗೆದ್ದಿದ್ದರೆ,4 ಬಾರಿ ಹೈದರಾಬಾದ್​ ಗೆಲುವು ಸಾಧಿಸಿದೆ. ಜೈಪುರದಲ್ಲಿ ನಡೆದಿರುವ 2 ಪಂದ್ಯಗಳಲ್ಲಿ ಇತ್ತಂಡಗಳು ತಲಾ ಒಂದು ಬಾರಿ ಜಯದ ದಾಖಲೆ ಹೊಂದಿವೆ.

2018ರಲ್ಲಿ ಮುಖಾಮುಖಿಯಾಗಿದ್ದ 2 ಪಂದ್ಯಗಳಲ್ಲೂ ಹಾಗೂ 2019ರ ಮೊದಲ ಪಂದ್ಯಲ್ಲಿ ಹೈದರಾಬಾದ್​ ಗೆಲುವುಸಾಧಿಸಿದೆ

ರಾಜಸ್ಥಾನ್​ ರಾಯಲ್ಸ್​:

ಅಜಿಂಕ್ಯ ರಹಾನೆ, ಸ್ಟಿವ್​ ಸ್ಮಿತ್(ನಾಯಕ), ಆಶ್ಟನ್​ ಟರ್ನರ್​​, ​​, ಸಂಜು ಸ್ಯಾಮ್ಸನ್​, ಶ್ರೇಯಸ್​ ಗೋಪಾಲ್​, ಜಯದೇವ್​ ಉನಾದ್ಕಟ್​, ದವಳ್​ ಕುಲಕರ್ಣಿ/ವರುಣ್​ ಆ್ಯರೋನ್​, ಸ್ಟುವರ್ಟ್​ ಬಿನ್ನಿ​, ರಿಯಾನ್​ ಪರಾಗ್​, ಒಸಾನೆ ಥಾಮಸ್​/ಇಶ್​ ಸೋಧಿ, ಲೈಮ್​ ಲಿವಿಂಗ್​ಸ್ಟೋನ್

ಸನ್​ರೈಸರ್ಸ್​ ಹೈದರಾಬಾದ್​:

ಡೇವಿಡ್​ ವಾರ್ನರ್​,ಕೇನ್​ ವಿಲಿಯಮ್ಸನ್(ನಾಯಕ) , ವಿಜಯ್​ ಶಂಕರ್​, ಯೂಸಫ್​ ಪಠಾಣ್​, ಭುವನೇಶ್ವರ್​ ಕುಮಾರ್​, ರಶೀದ್​ ಖಾನ್​, ಮನೀಷ್​ ಪಾಂಡೆ/ಸಿದ್ದಾರ್ಥ್​​ ಕೌಲ್, ಸಂದೀಪ್​ ಶರ್ಮಾ, ಶಹ್ಬಾಜ್​ ನದೀಮ್​,ಖಲೀಲ್​ ಅಹ್ಮದ್,ಮಾರ್ಟಿನ್​ ಗಪ್ಟಿಲ್​​

Intro:Body:Conclusion:
Last Updated : Apr 27, 2019, 3:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.