ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾನುವಾರಂದು ಪೋಸ್ಟ್ ಮಾಡಿದ ಹೊಸ ಚಿತ್ರ ಎಲ್ಲರ ಮನಗೆದ್ದಿದೆ.
ಮತ್ಸ್ಯಕನ್ಯೆಯ ರೀತಿಯಲ್ಲಿ ನೀರಿನಲ್ಲಿ ಓಡಾಡುವ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ನಟಿಯು ನಿಯಾನ್ ಗ್ರೀನ್ ಬಣ್ಣದ ಉಡುಪು ತೊಟ್ಟು ನೀರಿನಲ್ಲಿ ತೇಲಾಡುತ್ತಿದ್ದಾರೆ. ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚಿದ್ದಾರೆ.
ಇನ್ನು ಕಿಯಾರಾ ಕೊನೆಯ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಂಡಿದ್ದು, ಇಂದೂ ಕಿ ಜವಾನಿ ಚಿತ್ರದಲ್ಲಿ. ಇನ್ನು ಮುಂಬರುವ ದಿನದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಜತೆ ಶೆರ್ಶಾ, ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭೂಲೈಯಾ 2 ಮತ್ತು ಅನಿಲ್ ಕಪೂರ್, ನೀತು ಕಪೂರ್ ಮತ್ತು ವರುಣ್ ಧವನ್ ಜೊತೆಯಾಗಿ ನಟಿಸಿರುವ ಜಗ್ ಜಗ್ ಜೀಯೋ ಸಿನಿಮಾದಲ್ಲಿ ನಟಿಸಲಿದ್ದಾರೆ.