ETV Bharat / briefs

ಔಟಾಗಿದ್ದಕ್ಕೆ ಫ್ರಸ್ಟ್ರೇಷನ್‌.. ಬ್ಯಾಟ್​ನಿಂದ ಸ್ಟಂಪ್​ ಎಗರಿಸಿದ ರೋಹಿತ್.. ಮುಂಬೈಕರ್‌ಗೆ ಶೇ.15 ದಂಡ!

ರೋಹಿತ್​ ​ಐಪಿಎಲ್‌ನ ಕೋಡ್ ಆಫ್ ಕಂಡಕ್ಟ್ 2.2 ನಿಯಮವನ್ನು ಉಲ್ಲಂಘನೆ ಮಾಡಿ ಮೈದಾನದಲ್ಲಿ ಅನುಚಿತ ವರ್ತನೆ ತೋರಿದ್ದರಿಂದ, ಪಂದ್ಯದ ಸಂಭಾವನೆಯಲ್ಲಿ ಶೇ.15ರಷ್ಟನ್ನು ದಂಡವನ್ನಾಗಿ ವಿಧಿಸಲಾಗಿದೆ.

ರೋಹಿತ್​ ಶರ್ಮಾ
author img

By

Published : Apr 29, 2019, 5:01 PM IST

ಕೋಲ್ಕತಾ : ನಿನ್ನೆ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಬಾಲ್​ ಸೈಡ್‌ಪಿಚ್​ನಲ್ಲಿ ಬಿದ್ದಿತ್ತು. ಡಿಆರ್​ಎಸ್‌​ ನಿಯಮದ ಪ್ರಕಾರ ಮೈದಾನದ ಅಂಪೈರ್​ ನೀಡಿದ್ದ ತೀರ್ಪನ್ನು ಪರಿಗಣನೆಗೆ ತೆಗೆದುಕೊಂಡು ರೋಹಿತ್​ ಶರ್ಮಾರನ್ನು ಔಟ್ ಎಂದು ಘೋಷಿಸಿದ್ದರು.​ ಇದರಿಂದ ಹತಾಶೆಗೊಂಡ ರೋಹಿತ್​ ಶರ್ಮಾ ನಾನ್​ ಸ್ಟ್ರೈಕರ್‌ನ ಸ್ಟಂಪ್​ಗಳನ್ನು ತಮ್ಮ ಬ್ಯಾಟ್​ಗಳಿಂದ ಎಗರಿಸಿದ್ದರು. ಈಗ ಅದೇ ಕಾರಣಕ್ಕೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ನಿನ್ನೆ ಕೋಲ್ಕತಾದ ಈಡನ್​ ಗಾರ್ಡನ್​ನಲ್ಲಿ ನಡೆದ ಪಂದ್ಯದಲ್ಲಿ ಪ್ಲೇಆಫ್​ಗೆ ತಲುಪಲು ಇದೇ ಕೊನೆಯ ಅವಕಾಶವಾಗಿದ್ದ ಕೆಕೆಆರ್​ ಮೊದಲು ಬ್ಯಾಟಿಂಗ್​ ನಡೆಸಿ 232 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿತ್ತು.

233 ರನ್​ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್​ 2ನೇ ಓವರ್​ನಲ್ಲಿ ಡಿಕಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿತ್ತು. 4ನೇ ಓವರ್​ನಲ್ಲಿ ರೋಹಿತ್‌ ಎಲ್​ಬಿ ಬಲೆಗೆ ಬಿದ್ದರು. ರೋಹಿತ್​ ಡಿಆರ್​ಎಸ್​ ಮೊರೆ ಹೋದರು. ಇದರಲ್ಲಿ ಬೌಲರ್​ ಎಸೆದ ಬಾಲ್​ ಸೈಡ್​​ಪಿಚ್​ ಆಗಿತ್ತು. ಆದರೆ, ಆನ್​ಫೀಲ್ಡ್​ ಅಂಪೈರ್ ಔಟ್​ ನೀಡಿದ್ದರಿಂದ ರೋಹಿತ್ ಔಟಾದರು. ಇದರಿಂದ ಕೋಪಗೊಂಡ ರೋಹಿತ್​ ಪೆವಿಲಿಯನ್​ಗೆ ತೆರಳುವ ಮುನ್ನ ನಾನ್​ಸ್ಟ್ರೈಕರ್​ ಸ್ಟಂಪ್​ಗಳನ್ನು ತಮ್ಮ ಬ್ಯಾಟ್​ನಿಂದ ಗುದ್ದಿ ಹೋದರು.

ರೋಹಿತ್​ ​ಐಪಿಎಲ್ ಕೋಡ್ ಆಫ್ ಕಂಡಕ್ಟ್ 2.2 ನಿಯಮವನ್ನು ಉಲ್ಲಂಘನೆ ಮಾಡಿ ಮೈದಾನದಲ್ಲಿ ಅನುಚಿತ ವರ್ತನೆ ತೋರಿದ್ದರಿಂದ, ಪಂದ್ಯದ ಸಂಭಾವನೆಯಲ್ಲಿ ಶೇ.15ರಷ್ಟನ್ನು ದಂಡವಾಗಿ ವಿಧಿಸಲಾಗಿದೆ.

ಒಂದು ಕಡೆ ಸೋಲು ಕಂಡು ಬೇಸರದಲ್ಲಿದ್ದ ರೋಹಿತ್​ ರೆಫ್ರಿ ದಂಡ ವಿಧಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದರೆ, ಈ ಸೋಲು ಮುಂಬೈ ಇಂಡಿಯನ್ಸ್​ಗೆ ದೊಡ್ಡ ನಷ್ಟವನ್ನೇನು ಉಂಟು ಮಾಡಿಲ್ಲ. ಇನ್ನೂ 2 ಪಂದ್ಯಗಳಿದ್ದು, ಅದರಲ್ಲಿ ಒಂದು ಪಂದ್ಯ ಗೆದ್ದರೆ ಪ್ಲೇ ಆಫ್​ ಹಂತಕ್ಕೆ ತಲುಪುವುದು ಖಚಿತವಾಗಲಿದೆ.
  • Rohit Sharma fans should stop talking about Virat Kohli's on field behavior for at least a week now after what Rohit did today after getting out. #KKRvMI

    — R! (@WeirdlyProbable) April 28, 2019 " class="align-text-top noRightClick twitterSection" data=" ">

233ರನ್ ಟಾರ್ಗೆಟ್ ಪಡೆದ ಮುಂಬೈ 58ಕ್ಕೆ 4ವಿಕೆಟ್​ ಕಳೆದುಕೊಂಡು ಹೀನಾಯ ಸೋಲು ಕಾಣಬಹುದೆಂದು ಚಿಂತಿಸಲಾಗಿತ್ತು. ಆದರೆ, ಹಾರ್ದಿಕ್​ ಪಾಂಡ್ಯ ಕೆಚ್ಚೆದೆಯ ಆಟವಾಡಿ ಕೇವಲ 34 ಎಸೆತಗಳಲ್ಲಿ 91 ರನ್​ ಸಿಡಿಸಿ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದರು. ಪಾಂಡ್ಯ ಅಬ್ಬರದ ಇನ್ನಿಂಗ್ಸ್​ನಲ್ಲಿ 6 ಬೌಂಡರಿ 9 ಸಿಕ್ಸರ್​ ಒಳಗೊಂಡಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.