ETV Bharat / briefs

ವಿಜಯಪುರ ಸ್ಥಳೀಯ ಚುನಾವಣೆ: ಶೇಕಡಾ 71.20 ರಷ್ಟು ಮತದಾನ - undefined

ಕಳೆದೊಂದು ತಿಂಗಳಿನಿಂದ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ವಿಜಯಪುರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ. 71.20 ರಷ್ಟು ಮತದಾನವಾಗಿದೆ.

ವಿಜಯಪುರ ಸ್ಥಳೀಯ ಚುನಾವಣೆ ನಡೆಯಿತು.
author img

By

Published : May 29, 2019, 10:24 PM IST

ವಿಜಯಪುರ: ಕಳೆದೊಂದು ತಿಂಗಳಿನಿಂದ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ವಿಜಯಪುರ ಸ್ಥಳೀಯ ಸಂಸ್ಥೆಗಳ ಚುನಾವಣೆ ಶೇ. 71.20 ರಷ್ಟು ಮತದಾನವಾಗುವ ಮೂಲಕ ಚುನಾವಣೆಗೆ ತೆರೆ ಬಿದ್ದಿದೆ.

ವಿಜಯಪುರ ಸ್ಥಳೀಯ ಚುನಾವಣೆ ನಡೆಯಿತು.

ಜಿಲ್ಲೆಯ ಇಂಡಿ, ಬಸವನಬಾಗೇವಾಡಿ ಮತ್ತು ತಾಳಿಕೋಟೆ ಪುರಸಭೆಗಳಿಗೆ ಬುಧವಾರ ಬೆಳಗ್ಗೆ 7 ರಿಂದ ಸಂಜೆ 5 ವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಒಟ್ಟು 69 ಸ್ಥಾನಗಳ ಪೈಕಿ 64 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ. ಐದು ಸ್ಥಾನಗಳಿಗೆ ಮೊದಲೇ ಅವಿರೋಧ ಆಯ್ಕೆ ನಡೆದಿತ್ತು. ಕಣದಲ್ಲಿದ್ದ ಒಟ್ಟು 225 ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರರು ಅದನ್ನು ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರವಾಗಿರಿಸಿದ್ದಾರೆ.

ಇಂಡಿ - 35, ತಾಳಿಕೋಟಿ -28 ಮತ್ತು ಬಸವನಬಾಗೇವಾಡಿ- 28 ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಸಾಂಗವಾಗಿ ಮತದಾನ ಪ್ರಕ್ರಿಯೆ ನೆರವೇರಿದೆ. ಬಸವನಬಾಗೇವಾಡಿ ಪುರಸಭೆಗೆ ಅತೀ ಹೆಚ್ಚು (ಶೇ.75.63) ಮತದಾನವಾಗಿದೆ. ನಂತರ ಇಂಡಿ (ಶೇ.70.11) ಮತ್ತು ತಾಳಿಕೋಟೆ (ಶೇ.67.67) ಕ್ರಮವಾಗಿ ಮತಪ್ರಮಾಣ ದಾಖಲಿಸಿವೆ.

ಬಸವನಬಾಗೇವಾಡಿ: ಒಟ್ಟು 22 ವಾರ್ಡ್‌ಗಳಿಗೆ ಮತದಾನ ನಡೆದಿದ್ದು ಒಟ್ಟು 25,263 ಮತದಾರರ ಪೈಕಿ 19,106 (ಪುರುಷ-9764, ಮಹಿಳೆಯರು-9342) ಮತದಾರರು ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ಇತ್ತು. ಬೆಳಗ್ಗೆ 7 ರಿಂದ ಸಂಜೆ 5 ರ ವೇಳೆಗೆ ಒಟ್ಟು 75.63 ಮತ ಪ್ರಮಾಣ ದಾಖಲಾಯಿತು.

ಇಂಡಿ ಪುರಸಭೆ: ಪಟ್ಟಣದ 23 ವಾರ್ಡ್‌ಗಳಿಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 32,385 ಮತದಾರರ ಪೈಕಿ 22706 (ಪುರುಷ-11938, ಮಹಿಳೆ-10767, ಇತರೆ-1) ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆಯಿಂದಲೇ ಮತದಾನ ಪ್ರಮಾಣ ಚುರುಕಾಗಿತ್ತು. ಒಟ್ಟು 70.11 ರಷ್ಟು ವೋಟಿಂಗ್​ ಆಗಿದೆ.

ತಾಳಿಕೋಟೆ: ಇಲ್ಲಿನ 23 ವಾರ್ಡ್‌ಗಳ ಪೈಕಿ 4 ವಾರ್ಡ್‌ಗಳಿಗೆ ಮೊದಲೇ ಅವಿರೋಧ ಆಯ್ಕೆ ಆಗಿದೆ. ಇನ್ನುಳಿದ 19 ವಾರ್ಡ್‌ಗಳಿಗೆ ಬುಧವಾರ ಶಾಂತಿಯುತ ಮತದಾನ ನಡೆದಿದೆ. ಒಟ್ಟು 21,669 ಮತದಾರರ ಪೈಕಿ 14663 (ಪುರುಷ-7435, ಮಹಿಳೆ-7228) ಮತದಾರರು ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಾಗಿತ್ತು. ಒಟ್ಟು 67.67 ರಷ್ಟು ಮತದಾನವಾಗಿದೆ. ಒಟ್ಟಾರೆ ಜಿಲ್ಲೆಯ ಮೂರು ಪುರಸಭೆಗೆ ಶೇ. 71.20 ರಷ್ಟು ಮತದಾನವಾಗಿದೆ.

Intro:ವಿಜಯಪುರ Body:ವಿಜಯಪುರ:
ಕಳೆದೊಂದು ತಿಂಗಳಿಂದ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಮೂರು ಪುರಸಭೆಗಳಿಗೆ ಶೇ. 71.20 ರಷ್ಟು ಮತದಾನವಾಗುವ ಮೂಲಕ ಚುನಾವಣೆಗೆ ತೆರೆ ಬಿದ್ದಿದೆ.
ಜಿಲ್ಲೆಯ ಇಂಡಿ, ಬಸವನಬಾಗೇವಾಡಿ ಮತ್ತು ತಾಳಿಕೋಟೆ ಪುರಸಭೆಗಳಿಗೆ ಬುಧವಾರ ಬೆಳಗ್ಗೆ 7 ರಿಂದ ಸಂಜೆ 5 ವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಒಟ್ಟು 69 ಸ್ಥಾನಗಳ ಪೈಕಿ 64 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ. ಐದು ಸ್ಥಾನಗಳಿಗೆ ಮೊದಲೇ ಅವಿರೋಧ ಆಯ್ಕೆ ನಡೆದಿದೆ. ಕಣದಲ್ಲಿದ್ದು ಒಟ್ಟು 225 ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರರು ಅದನ್ನು ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರವಾಗಿರಿಸಿದ್ದಾರೆ.
ಇಂಡಿ-35, ತಾಳಿಕೋಟಿ-28 ಮತ್ತು ಬಸವನಬಾಗೇವಾಡಿ-28 ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಸಾಂಗವಾಗಿ ಮತದಾನ ಪ್ರಕ್ರಿಯೆ ನೆರವೇರಿದೆ. ಬಸವನಬಾಗೇವಾಡಿ ಪುರಸಭೆಗೆ ಅತೀ ಹೆಚ್ಚು (ಶೇ.75.63) ಮತದಾನವಾಗಿದೆ. ನಂತರ ಇಂಡಿ (ಶೇ.70.11) ಮತ್ತು ತಾಳಿಕೋಟೆ(ಶೇ.67.67) ಕ್ರಮವಾಗಿ ಮತಪ್ರಮಾಣ ದಾಖಲಿಸಿವೆ.
ಬಸವನಬಾಗೇವಾಡಿ:
ಒಟ್ಟು 22 ವಾರ್ಡ್‌ಗಳಿಗೆ ಮತದಾನ ನಡೆದಿದ್ದು ಒಟ್ಟು 25263 ಮತದಾರರ ಪೈಕಿ 19106 (ಪುರುಷ-9764, ಮಹಿಳೆಯರು-9342) ಮತದಾರರು ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಜನ ಕಡಿಮೆ ಪ್ರಮಾಣದಲ್ಲಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.
ಮಧ್ಯಾಹ್ನ ಬಿಸಿಲೇರುತ್ತಿದ್ದಂತೆ ಮತದಾನ ಪ್ರಕ್ರಿಯೆ ಚುರುಕಾಗತೊಡಗಿತು. ಕೆಲವರು ಮಧ್ಯಾಹ್ನ ಬಿಸಿಲಿನಿಂದಾಗಿ ಸಂಜೆ ಹಕ್ಕು ಚಲಾಯಿಸಿದರು. ಬೆಳಗ್ಗೆ 7 ರಿಂದ 9ರವರೆಗೆ 15.25 ರಷ್ಟಾಗಿದ್ದ ಮತದಾನ ಬೆಳಗ್ಗೆ 11ರಷ್ಟೊತ್ತಿಗೆ 30.79 ರಷ್ಟಾಗಿತು. ಮಧ್ಯಾಹ್ನ 1ಕ್ಕೆ 48.41 ರಷ್ಟು ಮತಪ್ರಮಾಣ ದಾಖಲಾಯಿತು. ಮಧ್ಯಾಹ್ನ 3ಕ್ಕೆ 58.49 ರಷ್ಟಿದ್ದ ಮತದಾನ ಸಂಜೆ 5 ರ ಅಂತ್ಯದ ವೇಳೆಗೆ ಒಟ್ಟು 75.63 ಮತ ಪ್ರಮಾಣ ದಾಖಲಾಯಿತು.
ಇಂಡಿ ಪುರಸಭೆ:
ಪಟ್ಟಣದ 23 ವಾರ್ಡ್‌ಗಳಿಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 32385 ಮತದಾರರ ಪೈಕಿ 22706 (ಪುರುಷ-11938, ಮಹಿಳೆ-10767, ಇತರೆ-1) ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆಯಿಂದಲೇ ಮತದಾನ ಪ್ರಮಾಣ ಚುರುಕಾಗಿತ್ತು. ಸಂಜೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಹೆಜ್ಜೆ ಹಾಕಿದ್ದು ಕಂಡು ಬಂತು. ಬೆಳಗ್ಗೆ 7 ರಿಂದ 9ರವರೆಗೆ 14.19 ರಷ್ಟಿದ್ದ ಮತದಾನ ಪ್ರಮಾಣ 11ರಷ್ಟೊತ್ತಿಗೆ 31.03 ರಷ್ಟಾಗಿತ್ತು. ಬಳಿಕ ಮಧ್ಯಾಹ್ನ ಅಷ್ಟಾಗಿ ಮತದಾನ ಚುರುಕಾಗಿರಲಿಲ್ಲ. ಸಂಜೆ ಅಂತ್ಯದ ವೇಳೆಗೆ ಒಟ್ಟು 70.11 ರಷ್ಟು ಮತದಾನವಾಗಿತ್ತು. ಆ ಮೂಲಕ ತೀವ್ರ ಸೆಣಸಾಟ ನಡೆಸಿದ್ದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಅಂತಿಮಗೊಂಡಿತು.
ತಾಳಿಕೋಟೆ:
ಇಲ್ಲಿನ 23 ವಾರ್ಡ್‌ಗಳ ಪೈಕಿ 4 ವಾರ್ಡ್‌ಗಳಿಗೆ ಮೊದಲೇ ಅವಿರೋಧ ಆಯ್ಕೆ ಆಗಿದೆ. ಇನ್ನುಳಿದ 19 ವಾರ್ಡ್‌ಗಳಿಗೆ ಬುಧವಾರ ಶಾಂತಿಯುತ ಮತದಾನ ನಡೆದಿದೆ. ಒಟ್ಟು 21669 ಮತದಾರರ ಪೈಕಿ 14663 (ಪುರುಷ-7435, ಮಹಿಳೆ-7228) ಮತದಾರರು ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಚುರುಕಾಗಿತ್ತು. ಬೆಳಗ್ಗೆ 7-9ರವರೆಗೆ 14.34 ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು. ಬಳಿಕ 11ರ ವೇಳೆಗೆ 31.65 ರಷ್ಟು ಮತದಾನ ಪ್ರಮಾಣ ದಾಖಲಾಯಿತು. ಮಧ್ಯಾಹ್ನ 1ಕ್ಕೆ 46.83 ರಷ್ಟಿದ್ದ ಮತಪ್ರಮಾಣ ಮಧ್ಯಾಹ್ನ 3 ರನಂತರ ಶೇ.55.06 ರಷ್ಟಾಯಿತು. ಸಂಜೆ 5ರ ಅಂತ್ಯದ ವೇಳೆಗೆ ಒಟ್ಟು 67.67 ರಷ್ಟು ಮತದಾನವಾಗಿದೆ. ಒಟ್ಟಾರೆ ಜಿಲ್ಲೆಯ ಮೂರು ಪುರಸಭೆಗೆ ಶೇ. 71.20 ರಷ್ಟು ಮತದಾನವಾಗಿದೆ.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.