ದೇವನಹಳ್ಳಿ : ರಾಜ್ಯದಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಗಳ ಕೊರತೆಯಿಂದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಹಂತ ಹಂತವಾಗಿ ವೆಂಟಿಲೇಟರ್ ಗಳ ಆಮದು ಮಾಡಿಕೊಳ್ಳಲಾಗುತ್ತಿದೆ.
ಭವಿನ್ ಸೇಲ್ಸ್ ಕಾರ್ಪ್ನ್ ಕಂಪನಿ 45 ವೆಂಟಿಲೇಟರ್ ಗಳು ಮತ್ತು 5 ಆರ್ದ್ರಕಗಳನ್ನು ಆಮದು ಮಾಡಿಕೊಂಡಿದೆ. ಇಂಡಿಯಾ ಮೆಡ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ 3 ಕೋಟಿ ಮೌಲ್ಯದ 54 ವೆಂಟಿಲೇಟರ್ ಗಳ ಆಮದು ಮಾಡಿಕೊಂಡಿದೆ.
ಬೆಂಗಳೂರು ಏರ್ ಕಾರ್ಗೋ, ಆಮದು ಮಾಡಿಕೊಂಡ ವೆಂಟಿಲೇಟರ್ಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಿದೆ. ಸದ್ಯ ವೆಂಟಿಲೇಟರ್ಗಳ ತುರ್ತು ರವಾನೆ ಕಾರ್ಯ ಮಾಡಲಾಗುತ್ತಿದೆ. ಹಂತ ಹಂತವಾಗಿ ಮತ್ತಷ್ಟು ವೆಂಟಿಲೇಟರ್ಗಳು ಬೆಂಗಳೂರಿಗೆ ಆಮದು ಆಗಲಿವೆ.