ಮುಂಬೈ(ಮಹಾರಾಷ್ಟ್ರ): ಭೂಗತ ಪಾತಕಿ ಡ್ಯಾಡಿ ಅಲಿಯಾಸ್ ಅರುಣ್ ಗೌಳಿ, ಇಂದು ಕೊರೊನಾಗೆ ವ್ಯಾಕ್ಸಿನ್ ಪಡೆದುಕೊಂಡರು.
ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನ ನಾಯರ್ ಆಸ್ಪತ್ರೆಯಲ್ಲಿ ಗೌಳಿ ಕೋವಿಶೀಲ್ಡ್‌ನ ಮೊದಲ ಡೋಸ್ ತೆಗೆದುಕೊಂಡರು. ಲಸಿಕೆ ಪಡೆದ ಬಳಿಕ ಅವರು ಎಲ್ಲ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು. ಗೌಳಿ ಸದ್ಯ ನಾಗ್ಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಫೆಬ್ರವರಿಯಲ್ಲಿ ಗೌಳಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಅವರಿಗೆ ಜೈಲಿನಲ್ಲೆ ಚಿಕಿತ್ಸೆ ನೀಡಲಾಯಿತು. ಈ ನಡುವೆ ಕೆಲವು ದಿನಗಳ ಹಿಂದೆ ಹೈಕೋರ್ಟ್‌ನ ನಾಗ್ಪುರ ಪೀಠವು ಪೆರೋಲ್ ನೀಡಿತ್ತು. ಈ ಪೆರೋಲ್ ಮೇಲೆ ಮನೆಗೆ ಬಂದಿರುವ ಅರುಣ್ ಇಂದು ಮಧ್ಯಾಹ್ನ ನಾಯರ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್‌ನ ಮೊದಲ ಡೋಸ್ ತೆಗೆದುಕೊಂಡರು.