ಲಂಡನ್: ದೇಶದ ವಿವಿಧ ಬ್ಯಾಂಕ್ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಸಲ್ಲಿಕೆ ಮಾಡಿದ್ದ ಮೇಲ್ಮನವಿ ಅರ್ಜಿ ವಜಾಗೊಂಡಿದ್ದು, ಹೀಗಾಗಿ ಆದಷ್ಟು ಬೇಗ ಅವರು ದೇಶದ ಬಹುದೊಡ್ಡ ಸುಸ್ತಿದಾರ ಗಡಿಪಾರುಗೊಳ್ಳುವ ಸಾಧ್ಯತೆ ಇದೆ.
-
UK Court rejected on April 5 the plea of Vijay Mallya against his extradition order. (File pic) pic.twitter.com/ag2mVpM7ZX
— ANI (@ANI) April 8, 2019 " class="align-text-top noRightClick twitterSection" data="
">UK Court rejected on April 5 the plea of Vijay Mallya against his extradition order. (File pic) pic.twitter.com/ag2mVpM7ZX
— ANI (@ANI) April 8, 2019UK Court rejected on April 5 the plea of Vijay Mallya against his extradition order. (File pic) pic.twitter.com/ag2mVpM7ZX
— ANI (@ANI) April 8, 2019
ಗಡಿಪಾರು ಆದೇಶದ ವಿರುದ್ಧ ವಿಜಯ ಮಲ್ಯ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅದರ ವಿಚಾರಣೆ ನಡೆಸಿದ ಯುಕೆ ಕೋರ್ಟ್ನ ಜಸ್ಟೀಸ್ ವಿಲಿಯಮ್ ಡೇವಿಸ್ ಅರ್ಜಿವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಅವರ ವಿರುದ್ಧ ಆದೇಶ ನೀಡಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ನ ಆದೇಶ ಪ್ರಶ್ನೆ ಮಾಡಿ ಮಲ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಅಲ್ಲು ಕೂಡ ಮಲ್ಯನಿಗೆ ಮುಖಭಂಗವಾಗಿದ್ದು, ಶೀಘ್ರವೇ ಭಾರತಕ್ಕೆ ಗಡಿಪಾರಾಗುವ ಸಾಧ್ಯತೆ ಇದೆ.
ಭಾರತದ ವಿವಿಧ ಬ್ಯಾಂಕ್ಗಳಲ್ಲಿ ವಿಜಯ ಮಲ್ಯ ಸುಮಾರು 9 ಸಾವಿರ ಕೋಟಿ ರೂ. ಸಾಲ ಬಾಕಿ ಉಳಿಕೊಂಡು ಲಂಡನ್ಗೆ ಪರಾರಿಯಾಗಿದ್ದರು. ಇದಾದ ಬಳಿಕ ಜಾರಿ ನಿರ್ದೇಶನಾಲಯ ಮಲ್ಯನನ್ನ ಹಿಡಿದು ಭಾರತಕ್ಕೆ ವಾಪಸ್ ಕರೆತರಲು ರಾಜತಾಂತ್ರಿಕ ಪ್ರಯತ್ನ ನಡೆಸಿತ್ತು.