ಲಂಡನ್: ಏಕದಿನ ಕ್ರಿಕೆಟ್ನಲ್ಲಿರುವ ಬಹುತೇಕ ಬ್ಯಾಟಿಂಗ್ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಸಚಿನ್ ವಿಶ್ವಕಪ್ನಲ್ಲೂ ಕೆಲವು ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 11 ವಿಶ್ವಕಪ್ ನಡೆದಿದ್ದು, 6 ವಿಶ್ವಕಪ್ನಲ್ಲಿ ಬಾಗವಹಿಸಿರುವ ಸಚಿನ್ ತೆಂಡೂಲ್ಕರ್ ಎರಡು ಬಾರಿ ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ 2003 ರಲ್ಲಿ 673 ರನ್ಗಳಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರ ಎಂಬ ದಾಖಲೆ ಇಂದಿಗೂ ಅವರ ಹೆಸರಿನಲ್ಲಿಯೇ ಇದೆ. 1996 ವಿಶ್ವಕಪ್ನಲ್ಲಿ ಸಚಿನ್ 523 ರನ್ಗಳಿಸಿ ಗರಿಷ್ಠ ರನ್ ಸರದಾರರಾಗಿದ್ದರು.
ವಿಶೇಷವೆಂದರೆ 1996ರ ವಿಶ್ವಕಪ್ನಿಂದ 2003ರ ವಿಶ್ವಕಪ್ವರೆಗೆ ಭಾರತೀಯರದ್ದೇ ಮೇಲುಗೈ ಇದ್ದು, ಸಚಿನ್ ಎರಡು ಬಾರಿ ಹಾಗೂ ಕನ್ನಡಿಗ ದ್ರಾವಿಡ್ ಒಮ್ಮೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
ವಿಶ್ವಕಪ್ಗಳಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟ್ಸ್ಮನ್ಗಳು
1975 ಗ್ಲೇನ್ ಟರ್ನರ್(NZ) 333ರನ್
1979 ಗಾರ್ಡನ್ ಗ್ರೀನಿಡ್ಜ್(WI) 253ರನ್
1983 ಡೇವಿಡ್ ಗೋವರ್(Eng) 384 ರನ್
1987 ಗ್ರಹಾಂ ಗೂಚ್ (ENG) 471ರನ್
1992 ಮಾರ್ಟಿನ್ ಕ್ರೋವ್(NZ) 456 ರನ್
1996 ಸಚಿನ್ ತೆಂಡೂಲ್ಕರ್(IND) 523 ರನ್
1999 ರಾಹುಲ್ ದ್ರಾವಿಡ್(IND) 461 ರನ್
2003 ಸಚಿನ್ ತೆಂಡೂಲ್ಕರ್(IND) 673ರನ್
2007 ಮ್ಯಾಥ್ಯೂ ಹೇಡನ್(AUS) 659ರನ್
2011 ತಿಲಕರತ್ನೆ ದಿಲ್ಶನ್(SL) 500 ರನ್
2015 ಮಾರ್ಟಿನ್ ಗಪ್ಟಿಲ್(NZ) 547 ರನ್