ಮುಂಬೈ: ಇಂಗ್ಲೆಂಡ್ನಲ್ಲಿ 50 ದಿನಗಳಿಗೂ ಹೆಚ್ಚು ನಡೆಯಲಿರುವ ಕ್ರಿಕೆಟ್ನ ಮಹಾಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದ ಏಕದಿನ ಕ್ರಿಕೆಟ್ನ ಟಾಪ್10 ತಂಡಗಳು ತಮ್ಮ 15 ಸದಸ್ಯರ ತಂಡವನ್ನು ಘೋಷಿಸಿದ್ದು ಅದರಲ್ಲಿ ಕೆಲವು ಆಟಗಾರರ ಆಯ್ಕೆ ಅಚ್ಚರಿಗೆ ಕಾರಣವಾಗಿವೆ.
ಭಾರತ ಸೇರಿ ಹಲವು ತಂಡಗಳು ವಿಶ್ವಕಪ್ ಗೆಲ್ಲುವ ದೃಷ್ಟಿಯಿಂದ ಕಳೆದ 4 ವರ್ಷಗಳಿಂದ ತಂಡವನ್ನು ಸಿದ್ದಪಡಿಸಿಕೊಂಡಿವೆ. ಆದರೆ, ಕೊನೆಯ ಹಂತದಲ್ಲಿ ಕೆಲ ಆಟಗಾರರನ್ನು ಕೈಬಿಟ್ಟು, ಹೊಸ ಪ್ರತಿಭೆಗಳಿಗೆ ಮಣೆಯಾಕುವ ಮೂಲಕ ಅಚ್ಚರಿಗೆ ಕಾರಣವಾಗಿವೆ.
ವಿಜಯ್ ಶಂಕರ್:
ಕೇವಲ 9 ಪಂದ್ಯವನ್ನಾಡಿರುವ ತಮಿಳುನಾಡಿನ ವಿಜಯ್ ಶಂಕರ್ ವಿಶ್ವಕಪ್ನಂತಹ ದೊಡ್ಡ ಮಟ್ಟದ ಟೂರ್ನಿಗೆ ಆಯ್ಕೆ ಮಾಡಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ಚಾಂಪಿಯನ್ ಟ್ರೋಪಿ ನಂತರ ಬಿಸಿಸಿಐ 4ನೇ ಕ್ರಮಾಂಕಕ್ಕೆ ಸಾಕಷ್ಟು ಸರ್ಕಸ್ ನಡೆಸಿತ್ತು. ಶ್ರೇಯಸ್ ಅಯ್ಯರ್,ರಾಯುಡು, ಕಾರ್ತಿಕ್ ಹಾಗೂ ಪಂತ್ ಸೇರಿದಂತೆ ಹಲವರಿಗೆ ಅವಕಾಶ ನೀಡಲಾಗಿತ್ತು. ವಿಜಯ್ ಶಂಕರ್ ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಅತ್ಯುತ್ತಮ ಫೀಲ್ಡರ್ ಕೂಡ ಆಗಿರುವುದರಿಂದ ವಿಶ್ವಕಪ್ನಲ್ಲಿ ಆಡುವ ಅವಕಾಶ ನೀಡಲಾಗಿದೆ.
ಶಾಹೀನ್ ಅಫ್ರಿದಿ:
19 ವರ್ಷದ ಪಾಕಿಸ್ತಾನದ ಯುವ ಬೌಲರ್ ಶಾಹೀನ್ ಅಫ್ರಿದಿ ಕಳೆದ ವರ್ಷದ ಅಂಡರ್ 19 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ತೋರಿದ ನಂತರ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗಿದ್ದರು. ಕೇವಲ 11 ಏಕದಿನ ಪಂದ್ಯಗಳನ್ನಾಡಿದ್ದು 19 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ಅಮೀರ್,ಉಸ್ಮಾನ್ ಶೆನ್ವಾರಿ ಹಾಗೂ ವಹಾಬ್ ರಿಯಾಜ್ರಂತಹ ಅನುಭವಿಗಳನ್ನು ತಂಡದಿಂದ ಕೈಬಿಟ್ಟು ಶಾಹೀನ್ ಅಫ್ರಿದಿಗೆ ಲಂಡನ್ ಟಿಕೆಟ್ ನೀಡಲಾಗಿದೆ.
ಮೊಹಮ್ಮದ್ ಹಸ್ನೈನ್:
ಶಾಹೀನ್ ಅಫ್ರಿದಿಯಲ್ಲದೆ ಕೇವಲ 3 ಪಂದ್ಯಗಳನ್ನಾಡಿದ್ದ 18 ವರ್ಷದ ಮೊಹಮ್ಮದ್ ಹಸ್ನೈನ್ರನ್ನ ಇಂಜಮಾಮ್ ಉಲ್ ಹಕ್ ನೇತೃತ್ವದ ಆಯ್ಕೆ ಸಮಿತಿ ಆಯ್ಕೆ ಮಾಡಿರುವುದು ಪಾಕ್ ಕ್ರಿಕೆಟ್ ಪ್ರೇಮಿಗಳು ಹಾಗೂ ಮಾಜಿ ಆಟಗಾರರಿಗೂ ಆಶ್ಚರ್ಯ ತರಿಸಿದೆ.
ರಾಸ್ಸಿ ವಾನ್ ಡೆರ್ ಡಸೆನ್:
ದಕ್ಷಿಣ ಆಫ್ರಿಕಾ ತಂಡದ ಪರ ಕೇವಲ 9 ಏಕದಿನ ಪಂದ್ಯಗಳನ್ನಾಡಿರುವ ವಾನ್ ಡೆರ್ ಡಾಸ್ಸೆನ್ರನ್ನ ವಿಶ್ವಕಪ್ಗೆ ಆಯ್ಕೆ ಮಾಡಲಾಗಿದೆ. ಹಲವು ದೇಶಗಳ ಟಿ20 ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಆದರೆ, ಉತ್ತಮ ಪ್ರದರ್ಶನ ತೋರಿದ ರೀಜಾ ಹೆಂಡ್ರಿಕ್ಸ್ರನ್ನ ಕಡೆಗಣಿಸಿ ಟೀಕೆ ಗುರಿಯಾಗಿದೆ.
ಅಬು ಜಾಯೇದ್:
ಬಾಂಗ್ಲಾದೇಶ ಕ್ರಿಕೆಟ್ ಆಯ್ಕೆ ಸಮಿತಿ ಅಬು ಜಾಯೇದ್‌ರನ್ನ ಆಯ್ಕೆ ಮಾಡುವ ಮೂಲಕ ಬಾಂಗ್ಲಾ ಅಭಿಮಾನಿಗಳಿಗೆ ಶಾಕ್ ತಂದಿದೆ. ಏಕೆಂದರೆ ಅಬು ಜಾಯೇದ್ ಈವರೆಗೂ ಒಂದೇ ಒಂದು ಏಕದಿನ ಪಂದ್ಯವಾಡಿಲ್ಲ. ಈತನಿಗೆ ವಿಶ್ವಕಪ್ ಪಂದ್ಯವೇ ಪಾದಾರ್ಪಣೆ ಪಂದ್ಯವಾಗಲಿದೆ. ಅದರಲ್ಲೂ ತಸ್ಕಿನ್ ಅಹ್ಮದ್‌ರಂತಹ ಸೀನಿಯರ್ ಬೌಲರ್ಗಳನ್ನು ಕಡೆಗಣಸಿ ಜಾಯೇದ್ ಆಯ್ಕೆ ಮಾಡಿರುವುದಕ್ಕೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಟೀಕೆಗೆ ಗುರಿಯಾಗಿದೆ.
ಟಾಮ್ ಬ್ಲಂಡೆಲ್:
ಕಿವೀಸ್ನ ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ ಆಯ್ಕೆಯೂ ಕೂಡ ಆಶ್ಚರ್ಯಕ್ಕೆ ಕಾರಣವಾಗಿದೆ. ಟಾಮ್ ಕೇವಲ 2 ಟೆಸ್ಟ್ ಹಾಗೂ 3 ಟಿ20 ಪಂದ್ಯ ಆಡಿದ್ದಾರೆ. ಈತನಿಗೂ ಕೂಡ ವಿಶ್ವಕಪ್ ಪಂದ್ಯವೇ ಪಾದಾರ್ಪಣೆ ಪಂದ್ಯವಾಗಲಿದೆ.