ಚೆನ್ನೈ:ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸಿಎಸ್ಕೆ ನಡುವೆ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಎರಡು ತಂಡಗಳು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಬ್ಯಾಟಿಂಗ್ನಲ್ಲಿ ಮಾತ್ರ ಕಳಪೆ ಪ್ರದರ್ಶನ ತೋರುವ ಮೂಲಕ ಹೊಡಿಬಡಿ ಆಟ ನೋಡಲು ಬಂದಿದ್ದ ಎರಡು ತಂಡಗಳ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಉದ್ಘಾಟನಾ ಪಂದ್ಯದಲ್ಲಿ ದಾಖಲೆಗಳು :
1) ಪವರ್ ಹಿಟ್ಟರ್ ಖ್ಯಾತಿಯ ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲಿ 5000 ರನ್ಗಡಿದಾಟಿದ ಮೊದಲ ಬ್ಯಾಟ್ಸಮನ್ ಎನಿಸಿದರು.
2) ಆರ್‌ಸಿಬಿ ತಂಡದ 10 ಆಟಗಾರರು ಕೇವಲ ಒಂದಂಕಿ ಮೊತ್ತಕ್ಕೆ ಮಾತ್ರ ಸೀಮಿತರಾದರು.
3) ನಾಲ್ಕನೇ ಬಾರಿ ಆರ್‌ಸಿಬಿ ತಂಡದ10 ಆಟಗಾರರು ಸಿಂಗಲ್ ಡಿಜಿಟ್ಗೆ ಔಟಾದರು. ಆ ಮೂಲಕ ಅತೀ ಹೆಚ್ಚು ಬಾರಿ ಒಂದಂಕಿ ಮೊತ್ತಕ್ಕೆ ಹೆಚ್ಚು ಆಟಗಾರರು ಔಟಾದ ಕಳಪೆ ದಾಖಲೆಗೆ ಆರ್‌ಸಿಬಿ ತುತ್ತಾಯಿತು.
4) ಈ ಪಂದ್ಯದಲ್ಲಿ ಆರ್‌ಸಿಬಿ ತನ್ನ 3 ಕನಿಷ್ಠ ಮೊತ್ತಕ್ಕೆ ಆಲ್‌ಔಟ್ (70) ಆಯಿತು. 2017ರಲ್ಲಿ ಕೆಕೆಆರ್ ವಿರುದ್ಧ 49 ರನ್ಗಳಿಗೆ ಆರ್‌ಸಿಬಿ ಆಲ್ಔಟ್ ಆಗಿತ್ತು.
5) ಆರ್‌ಸಿಬಿ ವಿರುದ್ಧಸಿಎಸ್ಕೆಸತತ 7 ನೇ ಜಯ ಸಾಧಿಸುವ ಮೂಲಕ ಐಪಿಎಲ್ನಲ್ಲಿ ಒಂದೇ ತಂಡದ ಮೇಲೆ ಹೆಚ್ಚು ಸತತ ಜಯಗಳಿಸಿದ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನಕ್ಕೇರಿತು.
6) ಹಿರಿಯ ಬೌಲರ್ ಹರ್ಭಜನ್ ಸಿಂಗ್ ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ ಬಾಲ್ ಅಂಡ್ ಕ್ಯಾಚ್ ಮೂಲಕ ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಡ್ವೇನ್ ಬ್ರಾವೋ ಬಾಲ್ ಅಂಡ್ ಕ್ಯಾಚ್ನಿಂದ 10 ವಿಕೆಟ್ ಪಡೆದಿದ್ದಾರೆ.
7)ಸಿಎಸ್ಕೆ ಚೆಪಾಕ್ನಲ್ಲಿ ನಡೆದ 14 ಪಂದ್ಯಗಳಲ್ಲಿ 13 ಜಯ ಸಾಧಿಸಿತು. ಉಳಿದ ಒಂದು ಪಂದ್ಯವನ್ನು ಮುಂಬೈ ವಿರುದ್ಧ ಸೋಲನುಭವಿಸಿತ್ತು.
8) ಈ ಪಂದ್ಯದಲ್ಲಿ ಸಿಎಸ್ಕೆ ತಂಡ ಪವರ್ ಪ್ಲೇನಲ್ಲಿ ಕೇವಲ 16 ರನ್ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ 4ನೇ ಕಳಪೆ ಪ್ರದರ್ಶನ ನೀಡಿತು. 14 ರನ್ಗಳಿಸಿರುವ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ.
9) ಆರ್‌ಸಿಬಿ ಆಡಿದ 3 ಪಂದ್ಯಗಳಲ್ಲೂ ಸೋಲು ಕಂಡ ನತದೃಷ್ಟ ತಂಡವೆನಿಸಿತು.
10)75ಕ್ಕಿಂತ ಕಡಿಮೆ ಮೊತ್ತಕ್ಕೆ 3 ಬಾರಿ ಔಆಟಾದ ಏಕೈಕ ತಂಡ ಎಂಬ ಅಪಖ್ಯಾತಿಗೆ ಆರ್‌ಸಿಬಿ ತುತ್ತಾಯಿತು.
11) ಹರ್ಭಜನ್ ಆರ್‌ಸಿಬಿ ವಿರುದ್ದ 3 ವಿಕೆಟ್ ಪಡೆಯುವ ಮೂಲಕ 23 ವಿಕೆಟ್ ಪಡೆದು ಆರ್‌ಸಿಬಿ ವಿರುದ್ಧ ಹೆಚ್ಚು ವಿಕೆಟ್ ಪಡೆದಿದ್ದ ಆಶಿಷ್ ನೆಹ್ರಾ ದಾಖಲೆ ಸರಿಗಟ್ಟಿದರು.