ಹುಬ್ಬಳ್ಳಿ: ಗೋಡ್ಸೆ ದೇಶಭಕ್ತನಾದರೆ ಮಹಾತ್ಮ ಗಾಂಧಿ ದೇಶದ್ರೋಹಿಯೇ? ಬಿಜೆಪಿ ಇದಕ್ಕೆ ಸ್ಪಷ್ಟತೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ವಿರೋಧಿಸಿ ಶನಿವಾರ (18 ಮೇ 2019) ರಾಜ್ಯದಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಕೈಗೆತ್ತಿಗೊಂಡಿದೆ. ಇವರ ಹೇಳಿಕೆಗಳು ಗೋಡ್ಸೆ ಸಿದ್ಧಾಂತವನ್ನು ಒಪ್ಪಿಕೊಂಡಿದೆ ಎಂದರ್ಥ. ಗೋಡ್ಸೆಯನ್ನು ದೇಶಪ್ರೆಮಿ ಎಂದರೆ, ದೇಶದಲ್ಲಿ ಯಾವ ಸಿದ್ಧಾಂತ ಹರಡಲು ಬಿಜೆಪಿ ಹೊರಟಿದೆ ಎಂಬುದು ಗೊತ್ತಾಗಲಿದೆ ಎಂದು ಚಾಟಿ ಬೀಸಿದರು.
ನಳಿಲ್ಕುಮಾರ ಕಟಿಲ್, ಅನಂತ ಕುಮಾರ್ ಹೆಗಡೆ ಹಾಗೂ ಪ್ರಗ್ಯಾಸಿಂಗ್ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳದೇ 10 ದಿನಗಳ ಕಡವು ಕೇಳುತ್ತಿರುವ ಅಮಿತ್ ಶಾ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಾಕತ್ತಿದ್ದರೇ ಅವರನ್ನು ಉಚ್ಛಾಟನೆಗೊಳಿಸಲಿ ಎಂದು ಸವಾಲು ಹಾಕಿದರು.