ETV Bharat / briefs

ಲಸಿಕೆ ಪಡೆದ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದೆ ಸ್ಪೇನ್.. ಆದರೆ, ಭಾರತಕ್ಕಿಲ್ಲ ಅವಕಾಶ! - ಗಡಿ ತೆರೆದ ಸ್ಪೇನ್

ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರವಾಸಿಗರು ಹಾಗೂ ಸಂದರ್ಶಕರನ್ನು ಸ್ಪೇನ್​ ರಾಷ್ಟ್ರಕ್ಕೆ ತೆರಳಬಹುದು. ಆದರೆ, ಭಾರತದ ಪ್ರಯಾಣಿಕರಿಗೆ ಇನ್ನೂ ಆ ಅವಕಾಶ ಲಭ್ಯವಾಗಿಲ್ಲ..

 ಸ್ಪೇನ್
ಸ್ಪೇನ್
author img

By

Published : Jun 8, 2021, 8:29 PM IST

ಪಾಲ್ಮಾ ಡಿ ಮಲ್ಲೋರ್ಕಾ(ಸ್ಪೇನ್​) : ಕೆಲ ಹೊರ ದೇಶಗಳಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರವಾಸಿಗರು ಹಾಗೂ ಸಂದರ್ಶಕರನ್ನು ಸ್ಪೇನ್​ ರಾಷ್ಟ್ರ ತಮ್ಮ ದೇಶಕ್ಕೆ ಬರಮಾಡಿಕೊಳ್ಳುತ್ತಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ನಿಲ್ದಾಣಗಳನ್ನು ಮತ್ತೆ ತೆರೆದಿದೆ. ಆದರೆ, ಭಾರತ ಸೇರಿ ಇನ್ನೂ ಕೆಲ ರಾಷ್ಟ್ರಕ್ಕೆ ಪ್ರವೇಶ ನಿರ್ಬಂಧಿಸಿದೆ.

ಬ್ರೆಜಿಲ್, ಭಾರತ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿ ಕೊರೊನಾ ರೂಪಾಂತರಿ ವೈರಸ್​ ಕಂಡು ಬಂದ ಹಿನ್ನೆಲೆ ಭೀತಿಯಿಂದ ಈ ರಾಷ್ಟ್ರಗಳ ಪ್ರಯಾಣಿಕರಿಗೆ ಇನ್ನೂ ಪ್ರವೇಶ ನಿರ್ಬಂಧಿಸಿದೆ.

ಇನ್ನು, ಸ್ಪೇನ್​ ರಾಷ್ಟ್ರಕ್ಕೆ ಭೇಟಿ ನೀಡುವವರು ಕನಿಷ್ಠ 14 ದಿನಗಳ ಮೊದಲು ಲಸಿಕೆ ಹಾಕಿಸಿಕೊಂಡಿರಬೇಕು. ಕೊರೊನಾ ಸೋಂಕಿಗೆ ತುತ್ತಾಗಿದ್ದರೆ ಆರು ತಿಂಗಳ ಹಿಂದೆಯೇ ಚಿಕಿತ್ಸೆ ಪಡೆದಿರಬೇಕು.

ಪ್ರಮಾಣಪತ್ರಗಳು ಇಂಗ್ಲಿಷ್, ಫ್ರೆಂಚ್ ಅಥವಾ ಜರ್ಮನ್ ಭಾಷೆಯಲ್ಲಿದ್ದರೂ ಸಹ ಅದು ಸ್ಪ್ಯಾನಿಷ್​ ಭಾಷೆಯ ಅನುವಾದವನ್ನು ಹೊಂದಿರಬೇಕು ಎಂದು ಸರ್ಕಾರ ಆದೇಶಿಸಿದೆ.

ಇನ್ನು, ಪ್ರಯಾಣಿಕರು ಪಡೆದ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆ, ಸಿನೋಫಾರ್ಮ್ ಮತ್ತು ಸಿನೋವಾಕ್ ಅನುಮೋದಿಸಿದ ಫೈಝರ್​, ಬಯೋಟೆಕ್​, ಮಾಡಾರ್ನ್, ಆಸ್ಟ್ರಜೆನಿಕಾ, ಜಾನ್ಸನ್ ಆ್ಯಂಡ್​ ಜಾನ್ಸನ್ ಆಗಿರಬೇಕು ಎಂದು ಉಲ್ಲೇಖಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.