ಕಾರವಾರ: ಟಿಪ್ಪರ್ ಹಾಗೂ ಬೊಲೇರೋ ಪಿಕ್‌ಅಪ್ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು,ಪಿಕ್ ಅಪ್ ವಾಹನ ಚಾಲಕ ಗಾಯಗೊಂಡಿರುವ ಘಟನೆ ಕಾರವಾರ-ಕೈಗಾ ರಸ್ತೆಯ ಗೋಪಸಿಟ್ಟಾ ಗ್ರಾಮದ ಬಳಿ ನಡೆದಿದೆ.
ಮಣ್ಣು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ಚಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಬೊಲೇರೋ ಪಿಕ್ ಅಪ್ ವಾಹನಕ್ಕೆ ಗುದ್ದಿದ್ದಾನೆ ಎನ್ನಲಾಗಿದೆ. ಪರಿಣಾಮ ಪಿಕ್‌ಅಪ್ ವಾಹನ ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದಿದ್ದು,ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.