ETV Bharat / briefs

ತಿಪಟೂರು ಕುಡಿವ ನೀರಿನ ಯೋಜನೆ ಮಾರ್ಪಾಡು: ವಿವರ ಕೇಳಿದ ಹೈಕೋರ್ಟ್ - ಹೈಕೋರ್ಟ್

ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆ ಮಾರ್ಪಾಡು ಮಾಡಿರುವುದನ್ನು ಪ್ರಶ್ನಿಸಿ ತಿಪಟೂರು ನಿವಾಸಿಗಳಾದ ವಿನುತ ತಿಲಕ್ ಕುಮಾರ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

 ಹೈಕೋರ್ಟ್
ಹೈಕೋರ್ಟ್
author img

By

Published : Jun 12, 2021, 5:02 PM IST

ಬೆಂಗಳೂರು: ನೊಣವಿನಕೆರೆ ಮೂಲಕ ತಿಪಟೂರು ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಮಾರ್ಪಡಿಸಲು ಕಾರಣವೇನು ಎಂದು ಪ್ರಶ್ನಿಸಿರುವ ಹೈಕೋರ್ಟ್, ಈ ಕುರಿತ ಸರ್ಕಾರದ ಆದೇಶ ಹಾಗೂ ತಜ್ಞರ ವರದಿ ಸಲ್ಲಿಸಲು ನಿರ್ದೇಶನ ನೀಡಿದೆ.

ಯೋಜನೆ ಮಾರ್ಪಾಡು ಮಾಡಿರುವುದನ್ನು ಪ್ರಶ್ನಿಸಿ ತಿಪಟೂರು ನಿವಾಸಿಗಳಾದ ವಿನುತ ತಿಲಕ್ ಕುಮಾರ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಎಸ್ ಪ್ರಸನ್ನಕುಮಾರ್ ವಾದ ಮಂಡಿಸಿ, ನೊಣವಿನಕೆರೆ ಮೂಲಕ ತಿಪಟೂರು ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯನ್ನು ಮಾರ್ಪಡಿಸಿ, ಈಚನೂರು ಕೆರೆಯಿಂದ ನೀರು ಪಡೆದುಕೊಳ್ಳಲು ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಆದರೆ, ಇದರಿಂದ ತಿಪಟೂರು ಪಟ್ಟಣದ ಕುಡಿಯುವ ನೀರಿನ ಬೇಡಿಕೆಗೆ ಪರಿಹಾರ ಸಿಗುವುದಿಲ್ಲ. ನೊಣವಿನ ಕೆರೆಯಿಂದ ನೀರು ಪಡೆದುಕೊಂಡರೆ ಶಾಶ್ವತವಾಗಿ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಈಚನೂರು ಕೆರೆಯಿಂದ ನೀರು ಪಡೆದುಕೊಂಡರೆ ಬೇಸಿಗೆಯಲ್ಲಿ ಎರಡು ತಿಂಗಳು ಮಾತ್ರ ನೀರು ಸಿಗುತ್ತದೆ. ಯಾವುದೇ ವೈಜ್ಞಾನಿಕ ತಳಹದಿ ಇಲ್ಲದೇ ರಾಜಕೀಯ ಕಾರಣಗಳಿಗೆ ಯೋಜನೆ ಮಾರ್ಪಾಡು ಮಾಡಲಾಗಿದೆ ಎಂದು ಆರೋಪಿಸಿದರು.

ಇದನ್ನು ಓದಿ: ಮರ ಗಣತಿ ಕಾರ್ಯ ಚುರುಕುಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ

ನಗರ ನೀರು ಸರಬರಾಜು ಮಂಡಳಿ ಪರ ವಕೀಲರು ವಾದಿಸಿ, ಭಾರತೀಯ ವಿಜ್ಞಾನ ಸಂಸ್ಥೆಯಿಂದ ವರದಿ ಪಡೆದುಕೊಂಡ ಬಳಿಕ ಯೋಜನೆ ಮಾರ್ಪಾಡು ಮಾಡಲಾಗಿದೆ. ಅರ್ಜಿದಾರರು ಹೇಳಿರುವಂತೆ ನೊಣವಿನ ಕೆರೆಯಲ್ಲಿ ಶೇ.40 ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸ್ಥಳೀಯ ಶಾಸಕರ ಮನವಿಯಂತೆ ಯೋಜನೆಯನ್ನು ಮಾರ್ಪಾಡು ಮಾಡಲಾಗಿದೆ. ನಗರ ನೀರು ಸರಬರಾಜು ಮಂಡಳಿ ವರ್ಗಾಯಿಸಿದ ಶಾಸಕರ ಮನವಿ ಆಧರಿಸಿ ಸ್ಥಳೀಯ ಪುರಸಭೆ ಯೋಜನೆ ಮಾರ್ಪಾಡಿಸಲು ನಿರ್ಣಯ ಕೈಗೊಂಡಿದೆ ಎಂದು ಅರ್ಜಿಯಲ್ಲಿನ ಅಂಶಗಳಿಂದ ತಿಳಿಯುತ್ತದೆ.
ಹೀಗಾಗಿ, ಯೋಜನೆ ಮಾರ್ಪಾಡು ಮಾಡಲು ವೈಜ್ಞಾನಿಕ ಕಾರಣಗಳೇನು, ಆ ಬಗ್ಗೆ ವರದಿ ಇದ್ದರೆ ಅದರ ಜೊತೆಗೆ ಸರ್ಕಾರ ಹೊರಡಿಸಿದ ಆದೇಶಗಳ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಜೂನ್ 28ಕ್ಕೆ ಮುಂದೂಡಿತು.

ತಿಪಟೂರು ಪಟ್ಟಣಕ್ಕೆ ನೀರು ಸರಬರಾಜು ಮಾಡಲು 127.91 ಕೋಟಿ ರೂ. ಮೊತ್ತದ ಯೋಜನೆ 2016ರ ಮೇ 17ರಂದು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈಗಾಗಲೇ ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 27.15 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಈ ನಡುವೆ ನೊಣವಿನ ಕೆರೆ ಬದಲು ಈಚನೂರು ಕೆರೆಯಿಂದ ನೀರು ಹರಿಸಲು ಒಪ್ಪಿಗೆ ಪಡೆದುಕೊಳ್ಳಲು ನಗರ ನೀರು ಸರಬರಾಜು ಮಂಡಳಿ 2019ರ ಆಗಸ್ಟ್ 7ರಂದು ಪತ್ರ ಬರೆದಿದ್ದು ಅದನ್ನು ಮಾನ್ಯ ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.