ಬೀಜಿಂಗ್: ಚೀನಾ ಮೂಲದ ಜನಪ್ರಿಯ ವಿಡಿಯೋ ಆ್ಯಪ್ ಟಿಕ್ಟಾಕ್ ಮತ್ತೊಂದು ದಿಟ್ಟ ಹೆಜ್ಜೆ ಇಡಲು ತೀರ್ಮಾನಿಸಿದೆ.
ಚೀನಿ ಕಂಪನಿ ಬೈಟ್ಡ್ಯಾನ್ಸ್, ಟಿಕ್ಟಾಕ್ ಮೂಲಕ ಭರ್ಜರಿ ಲಾಭದಲ್ಲಿದ್ದು ಇದೀಗ ಟಿಕ್ಟಾಕ್ ಮಾತೃಸಂಸ್ಥೆ ಬೈಟ್ಡ್ಯಾನ್ಸ್ ತನ್ನದೇ ಆದ ಸ್ಮಾರ್ಟ್ಫೋನ್ ಹೊರತರಲು ಉದ್ದೇಶಿಸಿದೆ. ಈ ಸುದ್ದಿ ಸಹಜವಾಗಿಯೇ ಟಿಕ್ಟಾಕ್ ಪ್ರಿಯರಿಗೆ ಖುಷಿ ತಂದಿದೆ.
ಬೈಟ್ಡ್ಯಾನ್ಸ್ ಕಂಪನಿಯ ಪ್ರಧಾನ ಕಚೇರಿಯ ಚೀನಾ ರಾಜಧಾನಿ ಬೀಜಿಂಗ್ನಲ್ಲಿದ್ದು, ಕಳೆದ ವರ್ಷದಲ್ಲಿ ಲಾಭಾಂಶದಲ್ಲಿ ಗಣನೀಯ ಇಳಿಕೆಯಾಗಿತ್ತು.
ಕಳೆದ ಕೆಲ ತಿಂಗಳ ಹಿಂದೆ ಭಾರತದಲ್ಲಿ ಬ್ಯಾನ್ ಆಗಿದ್ದ ಟಿಕ್ಟಾಕ್ ಆ್ಯಪ್ ನಂತರದಲ್ಲಿ ಬ್ಯಾನ್ ತೆರವಾಗಿ ನಿಟ್ಟುಸಿರು ಬಿಟ್ಟಿತ್ತು. ಈ ವೇಳೆ ಲಕ್ಷಗಟ್ಟಲೆ ಬಳಕೆದಾರರನ್ನು ಕಳೆದುಕೊಂಡಿತ್ತು.