ETV Bharat / briefs

ಸ್ಲಂಗಳ ಮೂಲ ಸೌಕರ್ಯಕ್ಕೆ 1 ಸಾವಿರ ಕೋಟಿ ರೂ ಬಿಡುಗಡೆ: ಸಚಿವ ವಿ.ಸೋಮಣ್ಣ

author img

By

Published : Jun 9, 2021, 7:10 PM IST

Updated : Jun 9, 2021, 9:01 PM IST

ಪ್ರಧಾನ ಮಂತ್ರಿ ಆವಾಸ್​ ಯೋಜನೆಯಲ್ಲಿ 46 ಸಾವಿರ ಮನೆಗಳು ಪ್ರಗತಿಯಲ್ಲಿದೆ. ಇದರಲ್ಲಿ 40 ಸಾವಿರ ಮನೆಗಳಿಗೆ ವಿವಿಧ ಹಂತದಲ್ಲಿ ಹಣ ಬಿಡುಗಡೆಯಾಗಿದೆ. ಇನ್ನುಳಿದ 8 ಸಾವಿರ ಮನೆಗಳಿಗೆ ವಿಷಲ್ ಆ್ಯಪ್​ನಲ್ಲಿ ಲೋಪವಾಗಿರುವುದರಿಂದ ಪ್ರಗತಿ ಕುಂಠಿತವಾಗಿದೆ. ಇದರಿಂದ ಹಳೆಯ ಯೋಜನೆಗಳನ್ನು ಬೇಗ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

V Somanna
V Somanna

ಶಿವಮೊಗ್ಗ: ವಸತಿ ಇಲಾಖೆಯ ಕೊಳಚೆ ಅಭಿವೃದ್ದಿ ಮಂಡಳಿ, ರಾಜೀವ್ ಗಾಂಧಿ ನಿಗಮ ಹಾಗೂ ನಗರ ಆಶ್ರಯದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತದೆ. ಈ ಮನೆಗಳಿಗೆ ಮೂಲ ಸೌಕರ್ಯ ಒದಗಿಸುವಂತದ್ದಕ್ಕೆ ಸುಮಾರು 1 ಸಾವಿರ ಕೋಟಿ ರೂ.ಗೂ ಹೆಚ್ಚು ಹಣವನ್ನು ನೀಡಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಪಂಚಾಯತ್​ನ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನ ಸಭೆ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಸಿಎಂ ತವರು ಜಿಲ್ಲೆ. ಇಲ್ಲಿಂದಲೇ ಈ ವಿಷಯವನ್ನು ಘೋಷಣೆ ಮಾಡುತ್ತಿದ್ದೇವೆ ಎಂದರು.

ಪ್ರಧಾನ ಮಂತ್ರಿ ಆವಾಸ್​ ಯೋಜನೆಯಲ್ಲಿ 46 ಸಾವಿರ ಮನೆಗಳು ಪ್ರಗತಿಯಲ್ಲಿದೆ. ಇದರಲ್ಲಿ 40 ಸಾವಿರ ಮನೆಗಳಿಗೆ ವಿವಿಧ ಹಂತದಲ್ಲಿ ಹಣ ಬಿಡುಗಡೆಯಾಗಿದೆ. ಇನ್ನೂ ಉಳಿದ 8 ಸಾವಿರ ಮನೆಗಳಿಗೆ ವಿಷಲ್ ಆ್ಯಪ್​ನಲ್ಲಿ ಲೋಪವಾಗಿರುವುದರಿಂದ ಪ್ರಗತಿ ಕುಂಠಿತವಾಗಿದೆ. ಇದರಿಂದ ಹಳೆಯ ಯೋಜನೆಗಳನ್ನು ಬೇಗ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ಲಂಗಳಲ್ಲಿ ವಾಸ ಮಾಡುವ 3.50 ಲಕ್ಷ ಜನರಿಗೆ ಭೂ ಹಕ್ಕು ನೀಡುವ ಯೋಜನೆ ಶಿವಮೊಗ್ಗದಿಂದಲೇ ಪ್ರಾರಂಭ ಮಾಡಲಾಗುವುದು ಎಂದರು.

ಲಾಕ್​ಡೌನ್ ಮುಗಿದ ನಂತರ ಯೋಜನೆ ಪ್ರಾರಂಭ ಮಾಡಲು ಸೂಚಿಸಿದ್ದೇನೆ ಎಂದರು. 2022 ರಲ್ಲಿ ಪ್ರತಿಯೊಬ್ಬರಿಗೂ ಸೂರು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ನನಸು ಮಾಡಲು ನಮ್ಮದು ಒಂದು ಅಳಿಲು ಸೇವೆ ಮಾಡಲಾಗುತ್ತಿದೆ. ವಸತಿ ಯೋಜನೆಯಡಿ 9.7 4 ಲಕ್ಷ ಮನೆಗಳಿಗೆ ನಿರ್ಮಾಣ ಕೈಗೆತ್ತುಕೊಳ್ಳಲಾಗಿದೆ. ಇದರಲ್ಲಿ 2.70 ಲಕ್ಷ ಮನೆಗಳ ನಿರ್ಮಾಣ ಮುಗಿಸಿದ್ದೇವೆ. ಉಳಿದ 7 ಲಕ್ಷ ಮನೆಗಳನ್ನು ಮುಂದಿನ ವರ್ಷದೊಳಗೆ ನಿರ್ಮಾಣ ಮಾಡಲಾಗುವುದು ಎಂದರು.

ಸ್ಲಂಗಳ ಮೂಲ ಸೌಕರ್ಯಕ್ಕೆ 1 ಸಾವಿರ ಕೋಟಿ ರೂ ಬಿಡುಗಡೆ: ಸಚಿವ ವಿ.ಸೋಮಣ್ಣ

ಇದೇ ಮೊದಲ ಬಾರಿಗೆ ಘೋಷಿತ ಸರ್ಕಾರಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ರಾಜ್ಯದಾದ್ಯಂತ ಆರಂಭಿಸಲಾಗಿದೆ. ಫಲಾನುಭವಿಗಳು ಕೊಳಚೆ ಮಂಡಳಿಗೆ ಪಾವತಿಸುವ ಮೊತ್ತಕ್ಕೆ ಮಾತ್ರ ಸ್ಟಾಂಪ್ ಡ್ಯೂಟಿ ವಿಧಿಸಲು ಎಲ್ಲಾ ಸಬ್ ರಿಜಿಸ್ಟ್ರಾರ್​​​​ಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ವಿವಿಧ ಯೋಜನೆಯಡಿ ಮನೆಗಳ ನಿರ್ಮಾಣಕ್ಕಾಗಿ ನಗರ ಪ್ರದೇಶಗಳಲ್ಲಿ 137 ಎಕರೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 52 ಎಕರೆ ಜಮೀನು ಗುರುತಿಸಲಾಗಿದ್ದು, ಇದಕ್ಕೆ ಅನುಮೋದನೆ ನೀಡಲಾಗುವುದು. ಇದರಲ್ಲಿ ನಗರ ಪ್ರದೇಶದಲ್ಲಿ 5,489 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1043 ಸೇರಿದಂತೆ ಒಟ್ಟು 6,532 ನಿವೇಶನಗಳ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಅರ್ಹರಿಗೆ ದೊರೆಯುವಂತೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಘೋಷಿತ ಸರ್ಕಾರಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ರೀತಿಯಲ್ಲಿ ಖಾಸಗಿ ಜಮೀನಿನಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳ ಹಾಗೂ ಸರ್ಕಾರಿ ಹಾಗೂ ಖಾಸಗಿ ಜಮೀನಿನಲ್ಲಿರುವ ಅಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೂ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು. ನಗರದಲ್ಲಿ ನೀರಾವರಿ ಚಾನೆಲ್ ಪಕ್ಕದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡುವ ಕುರಿತು ಪರ್ಯಾಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿಕೊಂಡರು.

Last Updated : Jun 9, 2021, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.