ETV Bharat / briefs

'ಮಹಿಳೆಯರ ಹಿಂಸಿಸಿ, ದೇಹವನ್ನು ನಾಯಿಗೆ ಎಸೆಯುತ್ತಾರೆ': ಕಣ್ಣು ಕಳೆದುಕೊಂಡ ಮಹಿಳೆ ಹೇಳಿದ ತಾಲಿಬಾನಿಗಳ ಕ್ರೌರ್ಯದ ಕಥೆ - ಅಫ್ಘಾನಿಸ್ತಾನದ ಖತೇರಾ ಎಂಬ ಮಹಿಳೆ

ಮಹಿಳೆಯರ ಹಕ್ಕುಗಳನ್ನು ಗೌರವಿಸುವುದಾಗಿಯೂ, ಅವರಿಗೆ ಸರ್ಕಾರದಲ್ಲಿ ಸ್ಥಾನ ನೀಡುವುದಾಗಿ ಹೇಳುತ್ತಿರುವ ತಾಲಿಬಾನ್​ ಉಗ್ರರು ಮಹಿಳೆಯೆ ವಿಷಯದಲ್ಲಿ ಎಷ್ಟು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬುದಕ್ಕೆ ಉದಾಹರಣೆಯೊಂದು ಇಲ್ಲಿದೆ.

Taliban
ತಾಲಿಬಾನಿಗಳಿಂದ ಕಣ್ಣು ಕಳೆದುಕೊಂಡ ಮಹಿಳೆಯ ಮಾತು
author img

By

Published : Aug 19, 2021, 12:28 PM IST

ನವದೆಹಲಿ: ತಾಲಿಬಾನಿಗಳ ದೃಷ್ಟಿಯಲ್ಲಿ ಮಹಿಳೆಯರೆಂದರೆ ಬದುಕುವ, ಉಸಿರಾಡುವ ಜೀವಿಗಳಲ್ಲ. ಕೇವಲ ಮಾಂಸ ತುಂಬಿದ ದೇಹವಷ್ಟೇ. ಮಹಿಳೆಯರನ್ನು ಮನಬಂದಂತೆ ಹಿಂಸಿಸಿ ಕೊಂದು, ಅವರ ದೇಹವನ್ನ ನಾಯಿಗೆ ಎಸೆಯುತ್ತಾರೆ ಎಂದು ತಾಲಿಬಾನಿಗಳಿಂದ ದೌರ್ಜನ್ಯದಿಂದ ಕಣ್ಣು ಕಳೆದುಕೊಂಡ ಮಹಿಳೆಯೊಬ್ಬರು ದೆಹಲಿಗೆ ಬಂದು ಉಗ್ರ ಸಂಘಟನೆಯ ಭಯಾನಕತೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.

ಕಣ್ಣನ್ನೇ ಕಿತ್ತ ಕ್ರೂರಿ ಉಗ್ರರು

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಫ್ಘಾನಿಸ್ತಾನದ ಖತೇರಾ ಎಂಬ ಮಹಿಳೆ ತಮ್ಮ ಕಹಿ ನೆನಪುಗಳನ್ನು ಹೇಳುತ್ತಾ ಹೋದರು. "ಘಜ್ನಿಯಲ್ಲಿ ನಾನು ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ತಾಲಿಬಾನ್​ ಉಗ್ರರು ನನ್ನನ್ನು ಸುತ್ತುವರೆದರು. ನನ್ನ ಐಡಿ ಕಾರ್ಡ್​ ನೋಡಿದ ಮೇಲೆ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಕ್ರೂರಿಗಳು ನನ್ನ ಕಣ್ಣಿಗೆ ಮಾರಕಾಸ್ತ್ರದಿಂದ ಇರಿದು ಕಣ್ಣು ಕಿತ್ತರು" ಎಂದರು. ಇನ್ನೊಂದು ವಿಚಾರವೆಂದರೆ ಈ ಸಂದರ್ಭದಲ್ಲಿ ಖತೇರಾ ಎರಡು ತಿಂಗಳ ಗರ್ಭಿಣಿಯಾಗಿದ್ದರು.

ತಂದೆಯಿಂದಲೇ ಪಿತೂರಿ

ಖತೇರಾ ಹೇಳುವ ಪ್ರಕಾರ, ಆಕೆಯ ತಂದೆ ತಾಲಿಬಾನ್​ ಸಂಘಟನೆಯ ಮಾಜಿ ಸದಸ್ಯನಾಗಿದ್ದು, ಆಕೆಯ ಮೇಲೆ ದಾಳಿ ನಡೆಸಲು ಅವರೇ ಪಿತೂರಿ ನಡೆಸಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರು ಎಂತಹ ಕೆಟ್ಟ ನರಕವನ್ನು ಅನುಭವಿಸಿದ್ದಾರೆ ಎಂಬುದನ್ನು ಊಹಿಸಿಕೊಳ್ಳಲು ನೀವು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕಾಲಿನ ಕೆಳಗೆ ಜೀವಿಸಿಯೇ ತಿಳಿದು ಕೊಳ್ಳಬೇಕಿದೆ. ತಾಲಿಬಾನಿಗಳು ಮೊದಲು ನಮ್ಮನ್ನು (ಮಹಿಳೆಯರನ್ನು) ಹಿಂಸಿಸುತ್ತಾರೆ. ಬಳಿಕ ನಮ್ಮ ದೇಹವನ್ನು ನಾಯಿಗಳಿಗೆ ಆಹಾರವಾಗಲು ಎಸೆಯುತ್ತಾರೆ. ನಾನು ಬದುಕಿರುವುದೇ ನನ್ನ ಅದೃಷ್ಟ ಎಂದು ಹೇಳುತ್ತಾರೆ ಖತೇರಾ.

ಇದನ್ನೂ ಓದಿ: ಹಕ್ಕು ಗೌರವಿಸುವ ಹೇಳಿಕೆ ಬೆನ್ನಲ್ಲೇ ಸರ್ಕಾರದ ನ್ಯೂಸ್ ಚಾನೆಲ್​​ನ ಮಹಿಳಾ ಉದ್ಯೋಗಿ ಅಮಾನತುಗೊಳಿಸಿದ ತಾಲಿಬಾನ್

ಮಹಿಳೆಯರಿಗೆ ಸಾವು ಬಿಟ್ಟು ಬೇರೇನಿದೆ?

ಕಳೆದ 20 ವರ್ಷಗಳಲ್ಲಿ ಮಹಿಳೆಯರು ಮತ್ತು ಯುವಕರು ಜೀವನೋಪಾಯಕ್ಕಾಗಿ ಸೂಕ್ತ ಶಿಕ್ಷಣ ಪಡೆಯುತ್ತಿದ್ದರು. ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರೇ ತುಂಬಿರುತ್ತಿದ್ದರು. ಆದರೆ ಈಗ ತಾಲಿಬಾನಿಗಳಿಂದ ರಕ್ಷಿಸಲು ಮಹಿಳೆಯರ ಶೈಕ್ಷಣಿಕ ಪ್ರಮಾಣಪತ್ರಗಳನ್ನೇ ಕುಟುಂಬಸ್ಥರು ಸುಡುತ್ತಿದ್ದಾರೆ. ತಾಲಿಬಾನ್ ಉಗ್ರರು ಮಹಿಳೆಯರಿಗೆ ಪುರುಷ ವೈದ್ಯರನ್ನೂ ಭೇಟಿ ಮಾಡಲು ಅವಕಾಶ ನೀಡುವುದಿಲ್ಲ. ವಿದ್ಯಾಭ್ಯಾಸ, ಉದ್ಯೋಗಕ್ಕೂ ಬಿಡುವುದಿಲ್ಲ. ಹೀಗಿದ್ದ ಮೇಲೆ ಅಲ್ಲಿ ಮಹಿಳೆಯರಿಗೆ ಸಾವು ಬಿಟ್ಟು ಬೇರೇನಾದರೂ ಉಳಿದಿದೆಯೇ ಎಂದು ಖತೇರಾ ನೋವು ತೋಡಿಕೊಂಡಿದ್ದಾರೆ.

ದೆಹಲಿಯಲ್ಲಿ ಮಹಿಳೆಗೆ ಚಿಕಿತ್ಸೆ

ಕಾಬೂಲ್​ನಿಂದ ತಪ್ಪಿಸಿಕೊಂಡು ದೆಹಲಿಗೆ ಬಂದಿರುವ ಖತೇರಾ ಇದೀಗ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಕೆಯ ಪತಿ ಹಾಗೂ ಮಗು ಕೂಡ ದೆಹಲಿಯಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.