ನರಸಾರಾವ್‌ಪೇಟ್, (ಆಂಧ್ರ): ಮತಗಟ್ಟೆ ಕೇಂದ್ರದಲ್ಲಿದ್ದ ಕುರ್ಚಿ-ಮೇಜುಗಳನ್ನ ಹಿಡಿದು ವೈಎಸ್‌ಆರ್ ಕಾಂಗ್ರೆಸ್ ಮತ್ತು ಟಿಡಿಪಿ ಕಾರ್ಯಕರ್ತರು ಪರಸ್ಪರರು ಕಾದಾಡಿರುವ ಘಟನೆ ಆಂಧ್ರದ ಗುಂಟೂರು ಜಿಲ್ಲೆ ನರಸರಾವ್‌ಪೇಟದ ಮತಗಟ್ಟೆ ಕೇಂದ್ರವೊಂದರಲ್ಲಿ ನಡೆದಿದೆ.
ಇಲ್ಲಿನ ನರಸರಾವ್‌ಪೇಟದ ಮತಗಟ್ಟೆ ಕೇಂದ್ರದಲ್ಲಿ ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ದೊಡ್ಡ ಗದ್ದಲವೇರ್ಪಟ್ಟಿದೆ. ಒಂದು ಹಂತದಲ್ಲಿ ಎರಡೂ ಪಕ್ಷದ ಕಾರ್ಯಕರ್ತರಗಳು ಕೈಕೈ ಮಿಲಾಯಿಸಿದ್ದಾರೆ. ಮತದಾನ ಕೇಂದ್ರದಲ್ಲಿದ್ದ ಕುರ್ಚಿ-ಮೇಜುಗಳನ್ನ ಎತ್ಹಾಕಿದ್ದಾರೆ. ಇದರಿಂದಾಗಿ ಕರ್ತವ್ಯದಲ್ಲಿ ಸಿಬ್ಬಂದಿ ಮತಕೇಂದ್ರದಿಂದಲೇ ಹೊರಗೆ ಹೋಗಿದ್ದಾರೆ.
ಆದರೆ, ಇಷ್ಟೊಂದು ಗಲಾಟೆ ನಡಿಯುತ್ತಿದ್ದರೂ ಪೊಲೀಸರು ಮಾತ್ರ ವಿಸಲ್ ಹೊಡೆಯುವುದನ್ನ ಬಿಟ್ಟು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿರಲಿಲ್ಲ.ಪರಸ್ಪರರು ಮೇಲೆ ಹಲ್ಲೆ ಮಾಡಿದ್ದರಿಂದಾಗಿ ಹಲವು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಈಗ ಮತದಾನ ಸ್ಥಗಿತಗೊಂಡಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಮತದಾನಕ್ಕೆ ಬಂದವರು ವಾಪಸ್ ತೆರಳಿದ್ದಾರೆ. ಆಂಧ್ರದಾದ್ಯಂತ ಮತದಾನ ಬೆಳಗ್ಗೆಯಿಂದಲೇ ಚುರುಕು ಪಡೆದುಕೊಂಡಿದೆ. ಇದೇ ವೇಳೆ ರಾಜ್ಯದ 7ಕಡೆಗೆ ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆಗಳು ಕೂಡ ನಡೆದ ವರದಿಯಾಗಿವೆ. ಕಾದಾಟದಲ್ಲಿ ಟಿಡಿಪಿ ಮುಖಂಡನೊಬ್ಬ ಸಾವನ್ನಪ್ಪಿದ್ದಾನೆ.