ETV Bharat / briefs

ರಸ್ತೆಗೆ ಹರಿದ ಒಳಚರಂಡಿ ನೀರು: ನಗರಸಭಾ ಮಾಜಿ ಅಧ್ಯಕ್ಷ-ಹಾಲಿ ಸದ್ಯಸ್ಯರ ನಡುವೆ ಜಟಾಪಟಿ

ರಸ್ತೆಗೆ ಹರಿದ ಒಳಚರಂಡಿ ನೀರಿನ ವಿಚಾರಕ್ಕೆ ನಗರಸಭಾ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ‌ ಅವಾಚ್ಯ ಶಬ್ಧಗಳಿಂದ ಒಬ್ಬರಿಗೊಬ್ಬರು ಕಾದಾಡಿದ್ದು. ಸ್ಥಳಕ್ಕೆ ಧಾವಿಸಿದ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

author img

By

Published : Apr 28, 2021, 3:43 PM IST

Updated : Apr 28, 2021, 9:29 PM IST

Kollegal
Kollegal

ಕೊಳ್ಳೇಗಾಲ (ಚಾಮರಾಜನಗರ): ನಗರದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ 7ನೇ ವಾರ್ಡ್​ನ ಒಳಚರಂಡಿ ನೀರು ಪಕ್ಕದ 3ನೇ ವಾರ್ಡ್​ನ ರಸ್ತೆಗೆ ಹರಿಯುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರ ನಡುವೆ ಜಟಾಪಟಿ ನಡೆದು ಸ್ಥಳಕ್ಕೆ ಧಾವಿಸಿದ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ 7ನೇ ವಾರ್ಡ್​ಗೆ ಸೇರಿದ ಯುಜಿಡಿ ತುಂಬಿಕೊಂಡು ಕಳೆದ 15 ದಿನದಿಂದ ಸಮೀಪದ 3ನೇ ವಾರ್ಡ್​ನ ಭೀಮನಗರದ‌ ಕಡೆ ಹರಿಯುತ್ತಿತ್ತು. ಈ ಬಗ್ಗೆ ಬಹಳಷ್ಟು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿರಲಿಲ್ಲ.‌ ಇಂದು ಈ‌ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ಬಳಿ 3ನೇ ವಾರ್ಡ್ ನಿವಾಸಿಗಳು‌, ಬಾತ್ ರೂಂ ನೀರು ರಸ್ತೆಯಲ್ಲಿ ನಿಂತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡಿ ಓಡಾಡುತ್ತಿದ್ದಾರೆ. ಕುಡಿಯುವ ನೀರಿನ ಪೈಪ್ ಅಳವಡಿಸಲು ತೆರೆಯಲಾಗಿದ್ದ ಹಳ್ಳಕ್ಕೆ ಚರಂಡಿ ನೀರು ಸೇರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದರು.‌

ಇದನ್ನೂ ಓದಿ: ದಾಸರಹಳ್ಳಿಯಲ್ಲಿ 127 ಹಾಸಿಗೆ ಸಾಮರ್ಥ್ಯದ ಕೋವಿಡ್​ ಕೇರ್​ ಸೆಂಟರ್​ಗೆ ಚಾಲನೆ

ಬಳಿಕ ಮಾಜಿ ಅಧ್ಯಕ್ಷ, ನಗರಸಭೆ ಆಯುಕ್ತ ವಿಜಯ್​ಗೆ ಕರೆ ಮಾಡಿ ಸ್ಥಳಕ್ಕೆ ಧಾವಿಸುವಂತೆ ಸಮಸ್ಯೆ ಖುದ್ದು ನೋಡುವಂತೆ ತಿಳಿಸಿದ್ದಾರೆ. ಕೂಡಲೇ ನಗರಸಭೆಯ ಆರೋಗ್ಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಆಯುಕ್ತ ವಿಜಯ ಪರಿಶೀಲನೆ ನಡೆಸಿದರು. ಈ ವೇಳೆ, ಮಾಜಿ‌ ಅಧ್ಯಕ್ಷ ರಮೇಶ್ 15 ದಿನ ಬೇಕಾ ಈ ಕೆಲಸ ಮಾಡಿಸೋಕೆ? ನಗರದ ಸ್ವಚ್ಛತೆ ಕಾಪಾಡದೆ ನಗರಸಭೆ ಕಣ್ಮುಚ್ಚಿ ಕುಳಿತಿರುವುದೇಕೆ, ಇಷ್ಟು ದಿನ ಎಲ್ಲಿಗೆ ಹೋಗಿದ್ರಿ ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದ ಜಟಾಪಟಿ

ಈ ವೇಳೆ ಮಧ್ಯಪ್ರವೇಶಿಸಿದ 7ನೇ ವಾರ್ಡ್ ನಗರಸಭೆ ಹಾಲಿ ಸದಸ್ಯ ನಾಸಿರ್ ಶರೀಫ್, ಈ ಬಗ್ಗೆ ನಾನು ಹೇಳಿದ್ದೇನೆ. ಇದೀಗ ಸರಿ‌ ಮಾಡಲಾಗುತ್ತಿದೆ ಎಂದು ಹೇಳುತ್ತಿದಂತೆ ಮಾತಿಗೆ ಮಾತು ಬೆಳೆದು ಮಾಜಿ ಅಧ್ಯಕ್ಷ ‌ರಮೇಶ್ ಹಾಗೂ ಹಾಲಿ ಸದಸ್ಯ ನಾಸಿರ್ ಶರೀಫ್ ನಡುವೆ ಜಟಾಪಟಿ ನಡೆದು ಅವಾಚ್ಯ ಶಬ್ಧಗಳಿಂದ ಒಬ್ಬರನ್ನೊಬ್ಬರು ನಿಂದಿಸಿಕೊಂಡ ಘಟನೆ ನಡೆಯಿತು. ಪರಿಸ್ಥಿತಿ ಗಂಭೀರವಾಗುತ್ತಿದಂತೆ ಸಮಾಧಾನಪಡಿಸಲು ಬಂದ ಆಯುಕ್ತರನ್ನು ನಿವಾಸಿಗಳು ಹಾಗೂ ಮಾಜಿ ಅಧ್ಯಕ್ಷ ರಮೇಶ್ ತೀವ್ರ ತರಾಟೆಗೆ ತೆಗೆದುಕೊಂಡು ತಕ್ಷಣ ಸಮಸ್ಯೆ ‌ಬಗೆಹರಿಸುವಂತೆ‌ ಆಕ್ರೋಶ ಹೊರಹಾಕಿದರು. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪುಗೂಡಿದ ಜನರನ್ನು ಚದುರಿಸಿದರು.

ಇದನ್ನೂ ಓದಿ: ಕರ್ಫ್ಯೂ ಉಲ್ಲಂಘನೆ: ಪೊಲೀಸ್ ಸಿಬ್ಬಂದಿಯನ್ನೇ ತರಾಟೆಗೆ ತೆಗೆದುಕೊಂಡ ಸಂಚಾರಿ ಎಎಸ್​ಐ

Last Updated : Apr 28, 2021, 9:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.