ಜೈಪುರ್: ಮಹಿಳಾ ಟಿ20 ಚಾಲೇಂಜ್ ಪಂದ್ಯದಲ್ಲಿ ವೆಲೋಸಿಟಿ ತಂಡದ ವಿರುದ್ಧ ಸೂಪರ್ ನೋವಾಸ್ 4ವಿಕೆಟ್ಗಳ ರೋಚಕ ಗೆಲುವು ದಾಖಲು ಮಾಡುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ.
-
What a moment this for the Supernovas who clinch the final game of #WIPL here in Jaipur 👌🙌 pic.twitter.com/XcUAkThHvL
— IndianPremierLeague (@IPL) May 11, 2019 " class="align-text-top noRightClick twitterSection" data="
">What a moment this for the Supernovas who clinch the final game of #WIPL here in Jaipur 👌🙌 pic.twitter.com/XcUAkThHvL
— IndianPremierLeague (@IPL) May 11, 2019What a moment this for the Supernovas who clinch the final game of #WIPL here in Jaipur 👌🙌 pic.twitter.com/XcUAkThHvL
— IndianPremierLeague (@IPL) May 11, 2019
ಜೈಪುರ್ದ ಸವಾಯ್ ಮಾನಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ವೆಲೋಸಿಟಿ ತಂಡ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ ಕಳೆದುಕೊಂಡು 121ರನ್ಗಳಿಕೆ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಹೇಲಿ ಮ್ಯಾಥ್ಯೂಸ್ (0),ಡೇನಿಯಲ್ ವ್ಯಾಟ್ (0) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ನಾಯಕಿ ಮಿಥಾಲಿ ರಾಜ್(12)ರನ್ ಹಾಗೂ ವೇದಾ ಕೃಷ್ಣಮೂರ್ತಿ (8) ನಿರಾಸೆ ಮೂಡಿಸಿದರು. ಆದರೆ ತಂಡದ ಪರ ಸುಷ್ಮಾ ವರ್ಮಾ(40) ಅಮೆಲಿಯಾ ಕೆರ್ (36)ರನ್ಗಳಿಕೆ ಮಾಡಿ ತಂಡ 100ರ ಗೆರೆ ದಾಟುವಂತೆ ಮಾಡಿದರು.
ಇದರ ಗುರಿ ಬೆನ್ನತ್ತಿದ್ದ ಸೂಪರ್ ನೋವಾಸ್ ತಂಡ ಆರಂಭದಲ್ಲೇ ಚಾಮುರಿ(2)ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಪ್ರಿಯಾ ಪೊನಿಯಾ(29), ಜೆಮಿಯಾ ರೊಡ್ರಿಗಸ್(22)ಹರ್ಮನ್ ಪ್ರೀತ್ ಕೌರ್(51)ರನ್ಗಳಿಸಿದರು.
ಇನ್ನು ತಂಡಕ್ಕೆ ಕೊನೆ ಓವರ್ನಲ್ಲಿ ಏಳು ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಸ್ಫೋಟಕ ಹೊಡೆತಕ್ಕೆ ಮುಂದಾಗಿ ಹರ್ಮನ್ ವಿಕೆಟ್ ಒಪ್ಪಿಸಿದರು. ಆದರೆ ಈ ವೇಳೆ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ರಾಧಾ ಯಾದವ್ ಸೂಪರ್ ನೋವಾಸ್ ತಂಡಕ್ಕೆ ಆಪತ್ಬಾಂಧವರಾದರು. ತಾವು ಎದುರಿಸಿದ ನಾಲ್ಕು ಹಾಗೂ ಐದನೇ ಎಸೆತದಲ್ಲಿ ತಲಾ 2ರನ್ಗಳಿಸಿ, ಕೊನೆಯ ಎಸೆತವನ್ನ ಬೌಂಡರಿ ಗೆರೆ ದಾಟಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಹರ್ಮನ್ ಪ್ರೀತ್ ಕೌರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.