ETV Bharat / briefs

ಡೆಲ್ಲಿ ಕ್ಯಾಪಿಟಲ್​ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಹೈದರಾಬಾದ್​ - ಸನ್​ರೈಸರ್ಸ್​

ಸನ್​ರೈಸರ್ಸ್​ ವಿರುದ್ಧ ಮತ್ತೆ ಕಳಪೆ ಬ್ಯಾಟಿಂಗ್​, ಆತುರದ ಹೊಡೆತಗಳಿಂದ ವಿಕೆಟ್​ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್. ಅಗ್ರಸ್ಥಾನಕ್ಕೇರಿದ ಹೈದರಾಬಾದ್.

ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಜಯ
author img

By

Published : Apr 5, 2019, 3:07 AM IST

ನವದೆಹಲಿ: ಜಾನಿ ಬೈರ್​ಸ್ಟೋವ್ (48) ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್​ಗಳ ಜಯ ದಾಖಲಿಸಿತು. ಈ ಮೂಲಕ 12ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಸದ್ಯ ಹೈದರಾಬಾದ್​ ತಂಡ ಅಗ್ರ ಸ್ಥಾನಕ್ಕೇರಿತು.

ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಡೆಲ್ಲಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ, ಸಾಧಾರಣ ಗುರಿ ನೀಡಿತು. ಡೆಲ್ಲಿ ಪರ ಶ್ರೇಯಾ ಅಯ್ಯರ್ 43 ರನ್ ಹಾಗೂ ಅಕ್ಷರ ಪಟೇಲ್ 23 ರನ್ ಬಾರಿಸಿದರೆ ಇನ್ನುಳಿದ ದಾಂಡಿಗರು ರನ್ ಕಲೆ ಹಾಕಲು ತಿಣುಕಾಡಿದರು.

ಹೈದರಾಬಾದ್ ಪರ ಭುವನೇಶ್ವರ್ ಕುಮಾರ್, ಮೊಹಮ್ಮದ್ ನಬಿ ಹಾಗೂ ಸಿದ್ದಾಥ್ ಕೌಲ್ ತಲಾ 2 ವಿಕೆಟ್ ಕಬಳಿಸಿ ಡೆಲ್ಲಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.

ಬಳಿಕ ಸಾಧಾರಣ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವು ಜಾನಿಯ ಸ್ಫೋಟಕ ಬ್ಯಾಟಿಂಗ್​ನಿಂದ 18.3 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 131 ರನ್ ಪೇರಿಸಿ ಗೆಲುವಿನ ನಗೆ ಬೀರಿತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.