ಬೆಂಗಳೂರು: ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಸಿಲುಕಿ ಬರೋಬ್ಬರಿ 1 ವರ್ಷ ಕಾಲ ನಿಷೇಧಕ್ಕೊಳಗಾಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಐಪಿಎಲ್‌ನಲ್ಲಿ ಆರ್‌ಆರ್ ತಂಡದ ಪರ ಆಡಿದ್ದರು. ಬರೋಬ್ಬರಿ 7 ವಾರಗಳ ಕಾಲ ರಾಜಸ್ಥಾನ ರಾಯಲ್ಸ್ ತಂಡದ ಪರ ಮೈದಾನಕ್ಕಿಳಿದಿದ್ದ ಸ್ಮಿತ್ ಇದೀಗ ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಡಲು ತೆರಳಬೇಕಾಗಿದ್ದರಿಂದಾಗಿ ಆಸೀಸ್ ತಂಡ ಸೇರಿಕೊಳ್ಳುತ್ತಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿರುದ್ಧ ಐಪಿಎಲ್ ಕೊನೆ ಪಂದ್ಯ ಆಡಿದಿದ್ದರು ಸ್ಮಿತ್. ಆದರೆ, ನಿನ್ನೆಯ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ ಕಾರಣ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿತ್ತು. ಸ್ಮಿತ್ ಆಸ್ಟ್ರೇಲಿಯಾ ವಿಶ್ವಕಪ್ ತಂಡವನ್ನ ಸೇರಿಕೊಳ್ಳಲಿರುವ ಕಾರಣ ನಿನ್ನೆಯ ಪಂದ್ಯ ಮುಗಿದ ಬಳಿಕ ತಮ್ಮ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನ ಹಾಕಿಕೊಂಡಿದ್ದಾರೆ.
- " class="align-text-top noRightClick twitterSection" data="
">
'ಥ್ಯಾಂಕ್ಯೂ ರಾಜಸ್ಥಾನ ರಾಯಲ್ಸ್. ಕಳೆದ 7 ವಾರಗಳ ಕಾಲ ಪ್ರತಿ ನಿಮಿಷವನ್ನೂ ನಾನು ಆನಂದಿಸಿರುವೆ. ಈ ಫ್ರಾಂಚೈಸಿಯಲ್ಲಿ ನಾನು ಆಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಅನೇಕ ಅದ್ಭುತ ಆಟಗಾರರನ್ನ ನಾನು ಈ ತಂಡದಲ್ಲಿ ಕಂಡಿರುವೆ' ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಸನ್ರೈಸರ್ಸ್ ಹೈದಾರಾಬಾದ್ ತಂಡದಲ್ಲಿ ಆಡುತ್ತಿದ್ದ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡ ಸೇರಿಕೊಳ್ಳಲು ತವರಿಗೆ ಮರಳಿದ್ದಾರೆ.