ETV Bharat / briefs

ದ್ವೀಪರಾಷ್ಟ್ರದಲ್ಲಿ ಮತ್ತೆ ಬಾಂಬ್​ ಸ್ಫೋಟ... ಹಲವೆಡೆ ಕರ್ಫ್ಯೂ ಜಾರಿ

ಶುಕ್ರವಾರ ಸಂಜೆ ವೇಳೆ ಪೂರ್ವ ಶ್ರೀಲಂಕಾದ ಕಲ್​ಮುನೈ, ಚವಲಕಡೆ ಹಾಗೂ ಸಮನ್​​ದುರೈಗಳಲ್ಲಿ ಬಾಂಬ್​ ಸ್ಫೋಟವಾದ ಪರಿಣಾಮ ಹಲವೆಡೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಬಾಂಬ್​ ಸ್ಫೋಟ
author img

By

Published : Apr 27, 2019, 5:23 AM IST

ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಮತ್ತೆ ಶುಕ್ರವಾರ ಮೂರು ಸ್ಥಳಗಳಲ್ಲಿ ಬಾಂಬ್ ಸ್ಫೋಟವಾಗಿದ್ದು ಯಾವುದೇ ಪ್ರಾಣಹಾನಿಯ ಬಗ್ಗೆ ವರದಿಯಾಗಿಲ್ಲ.

ಈಸ್ಟರ್​ ಭಾನುವಾರ ಶ್ರೀಲಂಕಾದ ವಿವಿಧೆಡೆಗಳಲ್ಲಿ ಹಲವು ಬಾಂಬ್​​ ಸ್ಫೋಟವಾಗಿತ್ತು. ಇನ್ನೂ ಕೆಲವೆಡೆಗಳಲ್ಲಿ ನಿಷ್ಕ್ರಿಯಗೊಳಿಸಿ ಅಪಾಯವನ್ನು ತಡೆಗಟ್ಟಲಾಗಿತ್ತು. ಭಾನುವಾರದಂದು ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ 253 ಮಂದಿ ಸಾವನ್ನಪ್ಪಿದ್ದಾರೆ ಎಂದು ಲಂಕಾದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಭಾನುವಾರದ ಬಳಿಕ ಪ್ರತಿನಿತ್ಯ ಎನ್ನುವಂತೆ ಬಾಂಬ್ ಸ್ಫೋಟವಾಗುತ್ತಿದ್ದು ಪರಿಣಾಮ ಜನತೆಯ ಆತಂಕದಲ್ಲೇ ದಿನದೂಡುತ್ತಿದ್ದಾರೆ. ಭಾನುವಾರದ ಭೀಕರ ಉಗ್ರದಾಳಿಯ ಬಳಿಕ ದೇಶಾದ್ಯಂತ ಕರ್ಫ್ಯೂ ಹೇರಲಾಗಿತ್ತು. ಒಂದೆರಡು ದಿನಗಳ ಬಳಿಕ ಇದನ್ನು ಕೊಂಚ ಸಡಿಲಿಕೆ ಮಾಡಲಾಗಿತ್ತು.

ಶುಕ್ರವಾರ ಸಂಜೆ ವೇಳೆ ಪೂರ್ವ ಶ್ರೀಲಂಕಾದ ಕಲ್​ಮುನೈ, ಚವಲಕಡೆ ಹಾಗೂ ಸಮನ್​​ದುರೈಗಳಲ್ಲಿ ಬಾಂಬ್​ ಸ್ಫೋಟವಾದ ಪರಿಣಾಮ ಹಲವೆಡೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಐಸಿಸ್ ಉಗ್ರಸಂಘಟನೆ ಸರಣಿ ಬಾಂಬ್​ ಸ್ಫೋಟದ ಹೊಣೆಯನ್ನು ಹೊತ್ತಿದ್ದು, ಐದಾರೂ ದಿನ ಕಳೆದರೂ ಇನ್ನೂ ದ್ವೀಪರಾಷ್ಟ್ರದಲ್ಲಿ ಬಾಂಬ್​ ಸದ್ದು ಕೇಳಿಸುತ್ತಲೇ ಇದೆ.

Intro:Body:

ದ್ವೀಪರಾಷ್ಟ್ರದಲ್ಲಿ ಮತ್ತೆ ಬಾಂಬ್​ ಸ್ಫೋಟ... ಹಲವೆಡೆ ಕರ್ಫ್ಯೂ ಜಾರಿ..!

ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಮತ್ತೆ ಶುಕ್ರವಾರ ಮೂರು ಸ್ಥಳಗಳಲ್ಲಿ ಬಾಂಬ್ ಸ್ಫೋಟವಾಗಿದ್ದು ಯಾವುದೇ ಪ್ರಾಣಹಾನಿಯ ಬಗ್ಗೆ ವರದಿಯಾಗಿಲ್ಲ.

ಈಸ್ಟರ್​ ಭಾನುವಾರ ಶ್ರೀಲಂಕಾದ ವಿವಿಧೆಡೆಗಳಲ್ಲಿ ಹಲವು ಬಾಂಬ್​​ ಸ್ಫೋಟವಾಗಿತ್ತು. ಇನ್ನೂ ಕೆಲವೆಡೆಗಳಲ್ಲಿ ನಿಷ್ಕ್ರಿಯಗೊಳಿಸಿ ಅಪಾಯವನ್ನು ತಡೆಗಟ್ಟಲಾಗಿತ್ತು. ಭಾನುವಾರದಂದು ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ 253 ಮಂದಿ ಸಾವನ್ನಪ್ಪಿದ್ದಾರೆ ಎಂದು ಲಂಕಾದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಭಾನುವಾರದ ಬಳಿಕ ಪ್ರತಿನಿತ್ಯ ಎನ್ನುವಂತೆ ಬಾಂಬ್ ಸ್ಫೋಟವಾಗುತ್ತಿದ್ದು ಪರಿಣಾಮ ಜನತೆಯ ಆತಂಕ ವಾರ ಕಳೆದರೂ ದೂರವಾಗಿಲ್ಲ. ಭಾನುವಾರದ ಭೀಕರ ಉಗ್ರದಾಳಿಯ ಬಳಿಕ ದೇಶಾದ್ಯಂತ ಕರ್ಫ್ಯೂ ಹೇರಲಾಗಿತ್ತು. ಒಂದೆರಡು ದಿನಗಳ ಬಳಿಕ ಇದನ್ನು ಕೊಂಚ ಸಡಿಲಿಕೆ ಮಾಡಲಾಗಿತ್ತು.

ಶುಕ್ರವಾರ ಸಂಜೆ ವೇಳೆ ಪೂರ್ವ ಶ್ರೀಲಂಕಾದ ಕಲ್​ಮುನೈ, ಚವಲಕಡೆ ಹಾಗೂ ಸಮನ್​​ದುರೈಗಳಲ್ಲಿ ಬಾಂಬ್​ ಸ್ಫೋಟವಾದ ಪರಿಣಾಮ ಹಲವೆಡೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಐಸಿಸ್ ಉಗ್ರಸಂಘಟನೆ ಸರಣಿ ಬಾಂಬ್​ ಸ್ಫೋಟದ ಹೊಣೆಯನ್ನು ಹೊತ್ತಿದ್ದು, ಐದಾರೂ ದಿನ ಕಳೆದರೂ ಇನ್ನೂ ದ್ವೀಪರಾಷ್ಟ್ರದಲ್ಲಿ ಬಾಂಬ್​ ಸದ್ದು ಕೇಳಿಸುತ್ತಲೇ ಇದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.