ಲಂಡನ್: ದಕ್ಷಿಣ ಆಫ್ರಿಕಾದ ಪರಾಶಕ್ತಿ ಎಕ್ಸ್ಪ್ರೆಸ್ ಖ್ಯಾತಿಯ ಇಮ್ರಾನ್ ತಾಹೀರ್ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಓವರ್ ಎಸೆದ ಸ್ಪಿನ್ ಬೌಲರ್ ಎಂಬ ವಿಶೇಷತೆ ದಾಖಲೆಗೆ ಪಾತ್ರರಾದರು.
ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡ ಹಿನ್ನೆಲೆಯಲ್ಲಿ ದ. ಆಫ್ರಿಕಾ ತಂಡದ ನಾಯಕ ಫಾಫ್ ಡು ಪ್ಲೆಸಿಸ್ 40 ವರ್ಷದ ತಾಹೀರ್ ಕೈಗೆ ಬಾಲ್ ನೀಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು. ಏಕೆಂದರೆ 11 ವಿಶ್ವಕಪ್ಗಳ ಇತಿಹಾಸದಲ್ಲೇ ಮೊದಲ ಓವರ್ ಎಸೆದ ಸ್ಪಿನ್ನರ್ ಎಂಬ ದಾಖಲೆಗೆ ತಾಹೀರ್ ಪಾತ್ರರಾದರು. 1992 ರಲ್ಲಿ ನ್ಯೂಜಿಲ್ಯಾಂಡ್ನ ಸ್ಪಿನ್ನರ್ ದೀಪಕ್ ಪಟೇಲ್ ಎರಡನೇ ಇನ್ನಿಂಗ್ಸ್ನಲ್ಲಿ ಮೊದಲ ಓವರ್ ಎಸೆದಿದ್ದರು.
ಇದಲ್ಲದೆ ತಾಹೀರ್ ತಮ್ಮ ಮೊದಲ ಓವರ್ನಲ್ಲೇ ಇಂಗ್ಲೆಂಡ್ನ ಜಾನಿ ಬೈರ್ಸ್ಟೋವ್ರನ್ನು ಔಟ್ ಮಾಡುವ ಮೂಲಕ ವಿಶ್ವಕಪ್ನಲ್ಲಿ ಮೊದಲ ಓವರ್ನಲ್ಲೇ ವಿಕೆಟ್ ಪಡೆದ 2ನೇ ಬೌಲರ್ ಎಂಬ ದಾಖಲೆ ಸೃಷ್ಟಿಸಿದರು.
1992 ರಲ್ಲಿ ವಿಶ್ವಕಪ್ನಲ್ಲಿ ಇಂಗ್ಲೆಂಡ್ನ ಜಾನ್ ರೈಟ್ ಕೂಡ ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿದರು. ಇದೀಗ ಮತ್ತೊಬ್ಬ ಇಂಗ್ಲೆಂಡ್ ಬ್ಯಾಟ್ಸ್ಮನ್ ಬ್ಯಾರ್ಸ್ಟೋವ್ ಕೂಡ ತಮ್ಮ ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿದರು.