ಕಾರ್ಡಿಫ್: ಸತತ 3 ಸೋಲು ಕಂಡಿದ್ದ ಚೋಕರ್ಸ್ ದಕ್ಷಿಣ ಆಫ್ರಿಕಾ ಪಡೆ ಆಫ್ಘನ್ ಮಣಿಸುವ ಮೂಲಕ ವಿಶ್ವಕಪ್ನಲ್ಲಿ ಮೊದಲ ಜಯ ಸಾಧಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಅಫ್ಘಾನಿಸ್ತಾನ ತಂಡ ಇಮ್ರಾನ್ ತಾಹೀರ್(4) ,ಕ್ರಿಸ್ ಮೋರಿಸ್(3) ಆ್ಯಂಡಿಲ್ ಫೆಹ್ಲುಕ್ವಾಯೋ (2) ಕಗಿಸೋ ರಬಾಡ (1) ದಾಳಿಗೆ ಸಿಲುಕಿ ಕೇವಲ 125 ರನ್ಗಳಿಗೆ ಆಲೌಟ್ ಆಯಿತು. ಆರಂಭಿಕರಾದ ಝಾಝೈ 22, ನೂರ್ ಅಲಿ ಜಾಡ್ರನ್ 32 ಹಾಗೂ ರಶೀದ್ ಖಾನ್ 35 ರನ್ಗಳಿಸಿದರು.
-
Finished with a six - South Africa secure their first win of #CWC19 in style!
— ICC (@ICC) June 15, 2019 " class="align-text-top noRightClick twitterSection" data="
Imran Tahir set up the victory with four wickets before Quinton de Kock's brisk 68 and a century opening stand sealed the deal against Afghanistan.
Is their campaign back on track?#ProteaFire pic.twitter.com/VAB0mf04Ih
">Finished with a six - South Africa secure their first win of #CWC19 in style!
— ICC (@ICC) June 15, 2019
Imran Tahir set up the victory with four wickets before Quinton de Kock's brisk 68 and a century opening stand sealed the deal against Afghanistan.
Is their campaign back on track?#ProteaFire pic.twitter.com/VAB0mf04IhFinished with a six - South Africa secure their first win of #CWC19 in style!
— ICC (@ICC) June 15, 2019
Imran Tahir set up the victory with four wickets before Quinton de Kock's brisk 68 and a century opening stand sealed the deal against Afghanistan.
Is their campaign back on track?#ProteaFire pic.twitter.com/VAB0mf04Ih
126 ರನ್ಗಳ ಸುಲಭ ಗುರಿ ಪಡೆದ ದ.ಆಫ್ರಿಕಾ ಪಡೆ 28.4 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕ್ವಿಂಟನ್ ಡಿ ಕಾಕ್ 68 , ಆಮ್ಲ ಔಟಾಗದೆ 41, ಪೆಹ್ಲುಕ್ವಾಯೋ ಔಟಾಗದೆ 17 ರನ್ಗಳಿಸಿ ಗೆಲುವಿನ ಗಡಿ ದಾಟಿಸಿದರು.
ಸತತ ಸೋಲುಗಳಿಂದ ಕಂಗೆಟ್ಟಿದ್ದ ದ.ಆಫ್ರಿಕಾ ತಂಡಕ್ಕೆ ಈ ಗೆಲುವು ಆತ್ಮ ವಿಶ್ವಾಸವನ್ನು ಹೆಚ್ಚಿಸಿದ್ದು, 2 ಪೂರ್ಣ ಅಂಕಗಳೊಂದಿಗೆ 7 ನೇ ಸ್ಥಾನಕ್ಕೇರಿದೆ. ಆಡಿದ ನಾಲ್ಕು ಪಂದ್ಯಗಳಲ್ಲೂ ಸೋಲನುಭವಿಸಿದ ಅಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.
ಮುಂದಿನ ಪಂದ್ಯದಲ್ಲಿ ದ.ಆಫ್ರಿಕಾ ನ್ಯೂಜಿಲ್ಯಾಂಡ್ ತಂಡವನ್ನು , ಅಫ್ಘಾನಿಸ್ತಾನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.