ETV Bharat / briefs

ವಿಶ್ವಕಪ್​​ನಲ್ಲಿ ಈ ನಾಲ್ಕು ತಂಡಗಳು ಸೆಮಿಫೈನಲ್​ಗೆ! ದಾದಾ ನುಡಿದ ಭವಿಷ್ಯ ನಿಜವಾಗುತ್ತಾ?

ವಿಶ್ವಕಪ್​ ಜ್ವರ ಈಗಾಗಲೇ ಆರಂಭಗೊಂಡಿದ್ದು, ಮೇ 30ರಿಂದ ಮಹಾಟೂರ್ನಿ ಇಂಗ್ಲೆಂಡ್​​ನಲ್ಲಿ ಶುರುವಾಗಲಿದೆ.

ಸೌರವ್ ಗಂಗೂಲಿ
author img

By

Published : Apr 26, 2019, 4:24 PM IST

ಕೋಲ್ಕತ್ತಾ: ಮೇ 30ರಿಂದ ಇಂಗ್ಲೆಂಡ್​​ನಲ್ಲಿ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಎಲ್ಲ ತಂಡಗಳು ಜಾತಕ ಪಕ್ಷಿಗಳಂತೆ ಕಾಯುತ್ತಿವೆ. ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಸೌರವ್ ಗಂಗೂಲಿ ಈ ಸಲದ ವಿಶ್ವಕಪ್​ನಲ್ಲಿ ಯಾವೆಲ್ಲಾ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಡಲಿವೆ ಎಂಬ ಭವಿಷ್ಯ ನುಡಿದಿದ್ದಾರೆ.

ಗಂಗೂಲಿ ಪ್ರಕಾರ, ಈ ಸಲದ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಜತೆಗೆ ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಲಿವೆಯಂತೆ. ಇದರ ಜತೆಗೆ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ಜೂನ್​ 6ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸುವುದರೊಂದಿಗೆ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭ ಮಾಡಲಿದೆ.

2003 ರಲ್ಲಿ ಗಂಗೂಲಿ ನಾಯಕತ್ವವಿದ್ದಾಗ ಭಾರತೀಯ ತಂಡ ವಿಶ್ವಕಪ್‌ ಫೈನಲ್ ಹಂತಕ್ಕೆ ತಲುಪಿರುವುದು ಇಲ್ಲಿ ಉಲ್ಲೇಖಾರ್ಹ.

Intro:Body:

ವಿಶ್ವಕಪ್​​ನಲ್ಲಿ ಈ ನಾಲ್ಕು ತಂಡಗಳು ಸೆಮಿಫೈನಲ್​ಗೆ... ಗಂಗೂಲಿ ನುಡಿದ ಭವಿಷ್ಯ ನಿಜವಾಗುತ್ತಾ!? 

ಕೋಲ್ಕತ್ತಾ: ಮೇ 30ರಿಂದ ಇಂಗ್ಲೆಂಡ್​​ನಲ್ಲಿ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಎಲ್ಲ ತಂಡಗಳು ಜಾತಕ ಪಕ್ಷಿಗಳಂತೆ ಕಾಯುತ್ತಿವೆ. ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಗಂಗೂಲಿ ಈ ಸಲದ ವಿಶ್ವಕಪ್​ನಲ್ಲಿ ಯಾವೆಲ್ಲ ತಂಡಗಳು ಸೆಮಿಫೈನಲ್ ಲಗ್ಗೆಯಿಡಲಿವೆ ಎಂಬ ಭವಿಷ್ಯ ನುಡಿದಿದ್ದಾರೆ. 

ಸೌರವ್ ಗಂಗೂಲಿ ಪ್ರಕಾರ, ಈ ಸಲದ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಜತೆಗೆ ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಲಿವೆಯಂತೆ. ಇದರ ಜತೆಗೆ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. 

ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಜೂನ್​ 6ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸುವುದರೊಂದಿಗೆ ತನ್ನ ಅಭಿಯಾನ ಆರಂಭ ಮಾಡಲಿದೆ. ಇನ್ನು ಗಂಗೂಲಿ 2003ರಲ್ಲಿ ತಂಡವನ್ನ ಫೈನಲ್ ಹಂತಕ್ಕೆ ಕರೆದುಕೊಂಡು ಹೋಗಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.