ಮೈಸೂರು: ಸಚಿವ ಎಸ್.ಎಸ್.ಶಿವಳ್ಳಿ ಅವರ ಸಾವಿಗೆ ಸಮ್ಮಿಶ್ರ ಸರ್ಕಾರದ ನಾಯಕರ ಕಿರುಕುಳವೇ ಕಾರಣವೆಂದು ಬಿಜೆಪಿ ಶಾಸಕ ಶ್ರೀರಾಮಲು ಹೇಳಿಕೆಗೆ ಬಿಜೆಪಿಯ ಅನೇಕ ಮುಖಂಡರು ಧ್ವನಿಗೂಡಿಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕರಿಗೆ ಟ್ವೀಟ್ ಮೂಲಕ ಟಾಂಗ್ ನೀಡಿದ ಸಿದ್ದರಾಮಯ್ಯ ನಾಲಗೆ ಹರಿಬಿಟ್ಟಿರುವ ಬಿಜೆಪಿ ನಾಯಕರೇ, ದಿ. ಅನಂತಕುಮಾರ್ ಪತ್ನಿಗೆ ನೀಡಿರುವ ಕಿರುಕುಳವನ್ನು ನೆನಪು ಮಾಡಿಕೊಳ್ಳಿ. ಎಲ್ಲವನ್ನೂ ಸಹಿಸಿಕೊಂಡಿರುವ ಧೈರ್ಯವಂತೆ ಹೆಣ್ಣುಮಗಳು ತೇಜಸ್ವಿನಿ. ಅವರು ಬಾಯಿ ಬಿಟ್ಟರೆ ನಿಮ್ಮ ಬಣ್ಣ ಬಯಲಾಗಲಿದೆ ಎಂದು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದರು.