ETV Bharat / briefs

ಸಿಎಂಗೆ ಅಭಿನಂದನೆ ಸಲ್ಲಿಸಿದ ಸಿದ್ದು: ಪ್ರಧಾನಿ ತೀರ್ಮಾನಕ್ಕೆ ಲೇವಡಿ

ವಿಳಂಬವಾಗಿಯಾದರೂ ಪರಿವಾರ, ತಳವಾರ, ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಆದೇಶ ಹೊರಡಿಸಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಆನ್​ಲೈನ್​ ತರಗತಿಗಳನ್ನು ನಡೆಸಲು ಸೂಚಿಸಿರುವ ಪ್ರಧಾನಿ ನಡೆಗೆ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

Siddaramaiah tweet
Siddaramaiah tweet
author img

By

Published : May 31, 2020, 3:04 PM IST

ಬೆಂಗಳೂರು: ಪರಿವಾರ, ತಳವಾರ, ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪರಿವಾರ, ತಳವಾರ, ಸಿದ್ದಿ ಸಮುದಾಯಗಳನ್ನು ವಿಳಂಬವಾಗಿಯಾದರೂ ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಹಿಂದೆ, ನಮ್ಮ ಸರ್ಕಾರ ಈ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಿ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಅದಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು ಎಂದಿದ್ದಾರೆ.

ಈ ವಿಚಾರವಾಗಿಯೇ ಸಿದ್ದರಾಮಯ್ಯ ವಾರದ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಈ ಮೂರು ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ಸಿಎಂಗೆ ಪತ್ರ ಬರೆದು ಕೂಡ ಈ ಬಗ್ಗೆ ಗಮನ ಸೆಳೆದಿದ್ದರು. ಇದೀಗ ಸರ್ಕಾರ ವರ್ಷದ ಬೇಡಿಕೆಯನ್ನು ಈಡೇರಿಸಿರುವ ಹಿನ್ನೆಲೆ ಸಿಎಂಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಾಸ್ತವದ ಅರಿವಿಲ್ಲದವರ ಕುರುಡುತನದ ಆಲೋಚನೆ:

ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್‌ಲೈನ್ ತರಗತಿಗಳ ಮೂಲಕ ನೀಡುವ ಪ್ರಧಾನಮಂತ್ರಿಯವರ ಪ್ರಸ್ತಾವ, ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಕುರುಡುತನದ ಆಲೋಚನೆಯಾಗಿದೆ. ಇದರಿಂದ ಸಮಾಜದ ದೊಡ್ಡ ವರ್ಗ ಶಿಕ್ಷಣದಿಂದ ವಂಚಿತವಾಗಲಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಅಸ್ತಿತ್ವ ಇರುವುದು ಹಳ್ಳಿಗಳಲ್ಲಿ. ಅಲ್ಲೆಲ್ಲ ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್‌ಗಳು ಎಲ್ಲಿಂದ ಬರಬೇಕು?. ಫೋನ್ ಇದ್ದರೂ ನೆಟ್‌ವರ್ಕ್ ಎಲ್ಲಿದೆ?
ಆನ್​ಲೈನ್ ಶಿಕ್ಷಣದಲ್ಲಿ ಹಳ್ಳಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಹೇಗೆ? ದೇಶ ಆಳುವ ನಾಯಕರಿಗೆ ಈ ಪ್ರಾಥಮಿಕ ಜ್ಞಾನ ಬೇಡವೇ? ಎಂದು ಪ್ರಧಾನಿ ನಿರ್ಧಾರವನ್ನು ಲೇವಡಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.