ಚಿಕ್ಕಮಗಳೂರು : ರಾಜ್ಯದಿಂದ ಕೇಂದ್ರ ಸಚಿವ ಸ್ಥಾನಕ್ಕೆ ಆಯ್ಕೆಯಾದ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಸಂಪುಟ ದರ್ಜೆಯ ಖಾತೆಗಳು ಸಿಗದೇ ನಿರಾಸೆಯಾದರೂ, ನಾಲ್ಕು ಮಂದಿ ಹೊಸ ಮುಖಗಳಿಗೆ ಮೋದಿ ಸರ್ಕಾರ ಮಣೆ ಹಾಕಿರುವುದು ಸಂತಸ ಮೂಡಿಸಿದೆ.ಅದರಲ್ಲೂ ಶೋಭಾ ಕರಂದ್ಲಾಜೆಗೆ ಸಚಿವೆ ಸ್ಥಾನ ನೀಡಿರುವುದು ಜಿಲ್ಲೆಯ ಜನರಿಗೆ ಸಂತಸ ಉಂಟಾಗುವಂತೆ ಮಾಡಿದೆ.
ನೀವು ನನ್ನನ್ನ ಎರಡು ಬಾರಿ ಆಯ್ಕೆ ಮಾಡಿ ಸಂಸದೆಯಾಗಿ ಮಾಡಿದ್ದೀರಿ.ನನ್ನನ್ನು ಗುರುತಿಸಿ ಪ್ರಧಾನಿಯವರು ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ಕೊಟ್ಟಿದ್ದಾರೆ.ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ಮಂತ್ರಿಯಾಗಿದ್ದೇನೆ ಎಂದು ಕ್ಷೇತ್ರದ ಜನತೆಗೆ, ಕಾರ್ಯಕರ್ತರಿಗೆ, ನಾಯಕರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಧನ್ಯವಾದ ಅರ್ಪಿಸಿದ್ದಾರೆ.
ಮಹಿಳಾ ಮಣಿಗಳಲ್ಲಿ ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿ ಆಯ್ಕೆಯಾಗಿದ್ದು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆಯಾಗಿ ಅಧಿಕಾರ ನಡೆಸಲಿದ್ದಾರೆ.