ಮೆಲ್ಬೋರ್ನ್: ಆಸ್ಟ್ರೇಲಿಯಾ ಕ್ರಿಕೆಟ್ನ ಮಾಜಿ ಆಲ್ರೌಂಡರ್ ಶೇನ್ ವಾಟ್ಸನ್ ಬಿಗ್ ಬ್ಯಾಶ್ ಲೀಗ್‌ಗೆ ವಿದಾಯ ಘೋಷಣೆ ಮಾಡಿದ್ದು, ಉಳಿದಂತೆ ಬೇರೆ ಬೇರೆ ದೇಶಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ.
ಈ ಬಗ್ಗೆ ನಿರ್ಧಾರ ಪ್ರಕಟಿಸಿದ ಬಳಿಕ, ತಂಡದೊಂದಿಗೆ ನಾನು ಕಳೆದಿರುವ ಸಮಯ ನಿಜಕ್ಕೂ ಅಭೂತಪೂರ್ವ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿ ಎಂದು ಅವರು ವಿಶ್ ಮಾಡಿದರು.

ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬ್ಯಾಟ್ ಬೀಸುತ್ತಿರುವ ವಾಟ್ಸನ್, ಕಳೆದ ಕೆಲ ದಿನಗಳ ಹಿಂದೆ ಕೇವಲ 53 ಎಸೆತಗಳಲ್ಲಿ 96 ರನ್ ಸಿಡಿಸಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಅಂತಾರಾಷ್ಟ್ರೀಯ ಹಾಗೂ ದೇಶೀಯ ಟೂರ್ನಿಗಳೂ ಸೇರಿ ವಾಟ್ಸನ್ 700 ಪಂದ್ಯಗಳನ್ನಾಡಿದ್ದು, 25 ಸಾವಿರ ರನ್ಗಳಿಕೆ ಮಾಡಿದ್ದಾರೆ. ಜೊತೆಗೆ ಅತ್ಯುತ್ತಮ ಬೌಲರ್ ಆಗಿರುವ ಇವರು 600 ವಿಕೆಟ್ ಕಬಳಿಸಿದ್ದಾರೆ.