ಬಾಲಿವುಡ್ ನಟ ಶಾಹಿದ್ ಕಪೂರ್ ತಮ್ಮ ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅಭಿಮಾನಿಗಳಿಗಾಗಿ ಸ್ಪೂರ್ತಿದಾಯಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಕಬೀರ್ ಸಿಂಗ್, 'ಸಂತೋಷದ ಚಿತ್ರ' ಎಂಬ ಶೀರ್ಷಿಕೆ ನೀಡಿ ಚಿತ್ರವೊಂದನನ್ನು ಹಂಚಿಕೊಂಡಿದ್ದಾರೆ, ಮುರಿದ ಹಾಸಿಗೆಯ ಮೇಲೆ, ಒರಟಾದ ಕೋಣೆಯೊಂದರಲ್ಲಿ ಸೋರುವ ಮೇಲ್ಛಾವಣಿಯಡಿ ಕುಟುಂಬವೊಂದು ಇರುವ ಚಿತ್ರವನ್ನು ಕಾಣಬಹುದು. ಆದರೆ, ಅಲ್ಲಿರುವ ಪ್ರತಿಯೊಬ್ಬ ಸದಸ್ಯರು ನಿದ್ದೆ ಮಾಡುತ್ತಿದ್ದರೂ ಅವರ ಮುಖದಲ್ಲಿನ ನೆಮ್ಮದಿಯ ಮಂದಹಾಸವನ್ನು ಕಾಣಬಹುದು.
ಈ ಚಿತ್ರದ ಜೊತೆಗೆ ಶಾಹಿದ್ ಈ ಚಿತ್ರದ ಹಿನ್ನೆಲೆಯನ್ನೂ ವಿವರಿಸಿದ್ದಾರೆ, ಟರ್ಕಿಯ ಮಹಾನ್ ಕವಿ ನಜೀಮ್ ಹಿಕ್ಮತ್ ತನ್ನ ಸ್ನೇಹಿತ ಅಬಿಡಿನ್ ಡಿನೋ (ಪ್ರಸಿದ್ಧ ವರ್ಣಚಿತ್ರಕಾರ) ಗೆ ಸಂತೋಷದ ಚಿತ್ರವೊಂದನ್ನು ಗೀಚಲು ತಿಳಿಸಿದಾಗ, ಆತನಿಂದ ಮೂಡಿಬಂದ ಚಿತ್ರವಿದು, ಎಂದು ತಿಳಿಸಿದ್ದಾರೆ
"ಸಂತೋಷವು ನೋವುಗಳ ಅನುಪಸ್ಥಿತಿಯಲ್ಲ, ಅದು ನೋವುಗಳನ್ನು ಒಪ್ಪಿಕೊಳ್ಳುವುದು" ಎಂದು ಶಾಹಿದ್ ಶೀರ್ಷಿಕೆ ನೀಡಿದ್ದಾರೆ.
ಈ ಸ್ಪೂರ್ತಿದಾಯಕ ಪೋಸ್ಟ್ಅನ್ನು 6 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಇಷ್ಟಪಟ್ಟು ಲೈಕ್ ಮಾಡಿದ್ದಾರೆ.