ಕಡಬ(ದ.ಕ) : 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಾಲಕಿ ಗರ್ಭಿಣಿಯಾದ ಘಟನೆ ಕಡಬದ ಆತೂರು ಸಮೀಪ ನಡೆದಿದೆ.
ಕಡಬ ತಾಲೂಕಿನ ಆತೂರು ಸಮೀಪದ 14ರ ಹರೆಯದ ಬಾಲಕಿಗೆ ಆಕೆಯ ಸಂಬಂಧಿಕನಾದ ಸಕಲೇಶಪುರ ನಿವಾಸಿ ಶೇಖರ್ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಬಾಲಕಿಯನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿದಾಗ ಬಾಲಕಿಯು ಏಳು ತಿಂಗಳ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ.
ಈ ಬಗ್ಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಯವರು ಕಡಬ ಠಾಣೆಗೆ ನೀಡಿದ ದೂರಿನನ್ವಯ, ಕಡಬ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.