ಮುಂಬೈ: ಮತದಾನ ಎನ್ನುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಅತ್ಯಂತ ಪರಿಣಾಮಕಾರಿ ಆಯುಧವಿದ್ದಂತೆ. ಈ ಹಕ್ಕನ್ನು ಚಲಾಯಿಸಲು ಮುಂಬೈನ ವ್ಯಕ್ತಿ ಬರೋಬ್ಬರಿ 8,553 ಮೈಲು ಕ್ರಮಿಸಿ ಭಾರತಕ್ಕೆ ಬಂದಿದ್ದಾರೆ.
ಬ್ರೆಜಿಲ್ನಲ್ಲಿ ಸದ್ಯ ಉದ್ಯೋಗದಲ್ಲಿರುವ ಮುಂಬೈ ಮೂಲದ ಧೀರಜ್ ಮೋರೆ ಶಿವಸೇನಾ ಪಕ್ಷದ ಕಟ್ಟಾ ಅಭಿಮಾನಿ. ತಮ್ಮ ಕಾರಿನಲ್ಲಿ ಸಹ ಶಿವಸೇನೆಯ ಸ್ಟಿಕರ್ ಅಂಟಿಸಿಕೊಂಡಿದ್ದಾರೆ.
1998ರಲ್ಲಿ ಮುಂಬೈ ತೊರೆದ ಮೋರೆ ಹಾಂಕಾಂಗ್ಗೆ ತೆರಳಿದ್ದರು. ಪ್ರಸ್ತುತ ಬ್ರೆಜಿಲ್ನಲ್ಲಿ ಟೆಕ್ಸ್ಟೈಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎಂಟು ವರ್ಷದಿಂದ ಯಾವುದೇ ಮತದಾನವನ್ನು ತಪ್ಪಿಸದ ಮೋರೆ, ಭಾರತಕ್ಕೆ ಬಂದು ವೋಟ್ ಮಾಡುತ್ತಿದ್ದಾರೆ.
ಮೋರೆ ಇದರ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 1993ರಲ್ಲಿ ಮುಂಬೈನ ಸೆಂಚುರಿ ಬಜಾರ್ನಲ್ಲಿ ಸ್ಫೋಟ ಸಂಭವಿಸಿದಾಗ ಮೋರೆ ಸಾಕಷ್ಟು ಧನಸಹಾಯ ಮಾಡಿದ್ದರು.
ಧೀರಜ್ ಮೋರೆ ಕಾರ್ಯ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಗೆ ತಿಳಿದು, ಮೋರೆಯನ್ನು ಕರೆಸಿ ಶ್ಲಾಘಿಸಿದ್ದರು. ಈ ಘಟನೆಯ ನಂತರ ಶಿವಸೇನೆ ಪಕ್ಷದ ಮೇಲೆ ಮೋರೆಗೆ ಸಾಕಷ್ಟ ಅಭಿಮಾನ ಮೂಡಿತ್ತು.