ಉಳ್ಳಾಲ: ನೇತ್ರಾವತಿ ಸೇತುವೆಯಿಂದ ಜಿಗಿದು ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂಕನಾಡಿನಲ್ಲಿ ನಡೆದಿದೆ.
ಉಳ್ಳಾಲ ನಿವಾಸಿ 40 ವರ್ಷದ ವ್ಯಕ್ತಿ ಕಂಕನಾಡಿಯಲ್ಲಿ ಕೆಲಸ ಮುಗಿಸಿ ಉಳ್ಳಾಲ ಕಡೆಗೆ ತೆರಳುತ್ತಿದ್ದ ಸಂದರ್ಭ ನೇತ್ರಾವತಿ ಸೇತುವೆಯ ಮೇಲೆ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದಾರೆ.
ವ್ಯಕ್ತಿ ನದಿಗೆ ಹಾರಿರುವುದನ್ನು ವಾಹನ ಸವಾರರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊಬೈಲ್ ಮೂಲಕ ಕೇರಳದಲ್ಲಿರುವ ವ್ಯಕ್ತಿಯ ಪತ್ನಿಯನ್ನು ಸಂಪರ್ಕಿಸಿರುವ ಕಂಕನಾಡಿ ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ಕೇರಳದಲ್ಲಿರುವ ಪತ್ನಿಯನ್ನು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಮನನೊಂದು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಸಧ್ಯ ಪತ್ನಿ ಬಂದ ಬಳಿಕವಷ್ಟೇ ಘಟನೆಗೆ ನಿಖರ ಕಾರಣ ತಿಳಿದುಬರಬೇಕಿದೆ.
ಹೆಂಡತಿಯನ್ನು ಭೇಟಿ ಮಾಡಲಾಗದೆ ಮನನೊಂದ ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ
ಕೇರಳದಲ್ಲಿರುವ ಹೆಂಡತಿಯನ್ನು ಭೇಟಿ ಮಾಡಲಾಗದೆ ಮನನೊಂದ ವ್ಯಕ್ತಿಯೊಬ್ಬ ಕಂಕನಾಡಿನ ನೇತ್ರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.