ETV Bharat / briefs

ಮೊದಲ ದಿನದ ದ್ವಿತೀಯ ಪಿಯು ಪೂರಕ‌ ಪರೀಕ್ಷೆ 76 ವಿದ್ಯಾರ್ಥಿಗಳು ಗೈರು - PUC exam news

ಇಂದು ದ್ವಿತೀಯ ಪಿಯುಸಿ ಉರ್ದು, ಸಂಸ್ಕೃತ ವಿಷಯದ ಪೂರಕ ಪರೀಕ್ಷೆ ನಡೆದಿದ್ದು, 76 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.‌

PUC exam
PUC exam
author img

By

Published : Sep 7, 2020, 3:57 PM IST

ಬೆಂಗಳೂರು: ಇಂದಿನಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನ 76 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.‌

ಇಂದು ಬೆಳಗ್ಗೆ ಉರ್ದು, ಸಂಸ್ಕೃತ ಪರೀಕ್ಷೆ ನಡೆದಿದ್ದು, ಮಧ್ಯಾಹ್ನ ವೇಳೆ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯುಟಿ ಆಂಡ್ ವೆಲ್ ನೆಸ್, ಹೋಂ ಸೈನ್ಸ್‌ ವಿಷಯಕ್ಕೆ ಪರೀಕ್ಷೆ ನಡೆಯುತ್ತಿದೆ.

ಕೊರೊನಾ ಆತಂಕದ ನಡುವೆಯೇ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಉರ್ದು ವಿಷಯಕ್ಕೆ 353 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 322 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 31 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಇನ್ನು ಸಂಸ್ಕೃತ ವಿಷಯಕ್ಕೆ 654 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, 609 ಪರೀಕ್ಷೆ ಜನ ಪರೀಕ್ಷೆ ಬರೆದಿದ್ದಾರೆ. 45 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಎರಡು ವಿಷಯಗಳಿಂದ 76 ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ಗೈರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.