ಚೆನ್ನೈ: ಹೈದರಾಬಾದ್ ವಿರದ್ಧದ ಪಂದ್ಯದಲ್ಲಿ ಆಕರ್ಶಕ ಶತಕ ಸಿಡಿಸಿದ್ದ ಆರ್ಆರ್ ತಂಡದ ಸಂಜು ಸಾಮ್ಸನ್ ನಿನ್ನೆ ನಡೆದ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ 2000 ರನ್ ಪೂರೈಸಿದ ಐಪಿಎಲ್ನ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಯುವ ಭರವಸೆಯ ಬ್ಯಾಟ್ಸ್‌ಮನ್ ಸಂಜು ಕೇವಲ 8 ರನ್ಗೆ ವಿಕೆಟ್ ಒಪ್ಪಿಸಿದ್ದರು. ಆದರೂ ಐಪಿಎಲ್‌ನಲ್ಲಿ 2000 ರನ್ ಪೂರೈಸಿದರು. 24 ವರ್ಷ 140ನೇ ದಿನದಲ್ಲಿ ಈ ಸಾಧನೆ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ 2000 ರನ್ ಪೂರೈಸಿದ ಕಿರಿಯ ಆಟಗಾರ ಎನಿಸಿಕೊಂಡರು.
ಸಂಜುಗೂ ಮುನ್ನ ರನ್ ಮಷಿನ್ ವಿರಾಟ್ ಕೊಹ್ಲಿ 24 ವರ್ಷ 175 ದಿನಗಳಲ್ಲಿ ಈ 2000 ರನ್ ಪೂರೈಸಿದ ದಾಖಲೆ ಹೊಂದಿದ್ದರು. 2 ಸಾವಿರ ರನ್ ಪೂರೈಸಲು ಸುರೇಶ್ ರೈನಾ 25 ವರ್ಷ 155 ದಿವಸ , ರೋಹಿತ್ ಶರ್ಮಾ 25 ವರ್ಷ 344 ದಿವಸ ಹಾಗೂ ಅಜಿಂಕ್ಯ ರಹಾನೆ 26 ವರ್ಷ 331 ದಿವಸಗಳನ್ನು ತೆಗೆದುಕೊಂಡಿದ್ದಾರೆ.
ಸಂಜು ಸಾಮ್ಸನ್ 84 ಪಂದ್ಯಗಳಾಡಿದ್ದು 80ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 2 ಶತಕ, 10 ಅರ್ಧ ಶತಕ ಸಹಿತ 2007 ರನ್ ಪೇರಿಸಿದ್ದಾರೆ.