ಮೊಹಾಲಿ : ಐಪಿಎಲ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಎಂಬ ಖ್ಯಾತಿಗೆ ಸ್ಯಾಮ್ ಕರ್ರನ್ ಪಾತ್ರರಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಯುವ ಬೌಲರ್ ಸ್ಯಾಮ್ ಕರ್ರನ್ 18ನೇ ಓವರ್ನ ಕೊನೆಯ ಎಸೆತದಲ್ಲಿ ಹರ್ಷೆಲ್ ಪಟೇಲ್, 20ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ರಬಡಾ ಹಾಗೂ ಸಂದೀಪ್ ಲಿಮಿಚಾನೆ ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಈ ಮೂಲಕ ರೋಹಿತ್ ಹೆಸರಿನಲ್ಲಿದ್ದ ಹ್ಯಾಟ್ರಿಕ್ ವಿಕೆಟ್ ಪಡೆದ ಕಿರಿಯ ಬೌಲರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
Sam Cur-ran through the DC batting line-up! 👊
— Kings XI Punjab (@lionsdenkxip) April 2, 2019 " class="align-text-top noRightClick twitterSection" data="
P.S: He's also the YOUNGEST to take a #VIVOIPL hat-trick. 👶#SaddaPunjab #KXIP #KXIPvDC pic.twitter.com/1gt9PRDt1h
">Sam Cur-ran through the DC batting line-up! 👊
— Kings XI Punjab (@lionsdenkxip) April 2, 2019
P.S: He's also the YOUNGEST to take a #VIVOIPL hat-trick. 👶#SaddaPunjab #KXIP #KXIPvDC pic.twitter.com/1gt9PRDt1hSam Cur-ran through the DC batting line-up! 👊
— Kings XI Punjab (@lionsdenkxip) April 2, 2019
P.S: He's also the YOUNGEST to take a #VIVOIPL hat-trick. 👶#SaddaPunjab #KXIP #KXIPvDC pic.twitter.com/1gt9PRDt1h
ರೋಹಿತ್ ಶರ್ಮಾ 2009ರ ಸೀಸನ್ನಲ್ಲಿ ಹಾಟ್ರಿಕ್ ವಿಕೆಟ್ ಪಡೆದಿದ್ದಾಗ ಅವರ ವಯಸ್ಸು 22 ವರ್ಷ 6 ದಿನ. ಸ್ಯಾಮ್ ಕರ್ರನ್ 20 ವರ್ಷ 302 ದಿನಗಳಿಗೆ ಹ್ಯಾಟ್ರಿಕ್ ಸಾಧನೆ ಮಾಡಿ ದಾಖಲೆ ಬರೆದಿದ್ದಾರೆ.
ಹ್ಯಾಟ್ರಿಕ್ ಜೊತೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆರಂಭಿಕನಾಗಿ ಕಣಕ್ಕಿಳಿಯುವ ಮೂಲಕ ಯುವರಾಜ್ ಸಿಂಗ್ ದಾಖಲೆಯನ್ನ ಸರಿಗಟ್ಟಿದರು. ಯುವಿ 2009 ರಲ್ಲಿ ಆರ್ಸಿಬಿ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದು 50 ರನ್ ಸಿಡಿಸಿದ್ದರಲ್ಲದೆ ಹ್ಯಾಟ್ರಿಕ್ ವಿಕೆಟ್ ಸಹಾ ಪಡೆದಿದ್ದರು. ಈ ಇಬ್ಬರು ಪಂಜಾಬ್ ತಂಡದ ಬೌಲರ್ ಎಂಬುದೇ ವಿಶೇಷ. ಆದರೆ, ಆ ಪಂದ್ಯದಲ್ಲಿ ಆರ್ಸಿಬಿ 8 ರನ್ಗಳಿಂದ ಪಂಜಾಬ್ ವಿರುದ್ಧ ಗೆಲುವು ಸಾಧಿಸಿತ್ತು.
ಕರ್ರನ್ ಈ ಪಂದ್ಯದಲ್ಲಿ 4 ವಿಕೆಟ್ ಪಡೆಯುವ ಮೂಲಕ ಐಪಿಎಲ್ನಲ್ಲಿ ಈ ಸಾದನೆ ಮಾಡಿದ 2ನೇ ಕಿರಿಯ ಬೌಲರ್ ಎನಿಸಿದರು. ಇದಕ್ಕೂ ಮುನ್ನ ಪುಣೆವಾರಿಯರ್ಸ್ ಪರ ಬೌಲಿಂಗ್ ಮಾಡಿದ್ದ ಆಸ್ಟ್ರೇಲಿಯಾದ ಮಿಚೆಲ್ ಮಾರ್ಶ್ ಡೆಲ್ಲಿ ವಿರುದ್ಧವೇ 4 ವಿಕೆಟ್ ಪಡೆದಿದ್ದರು. ಆಗ ಅವರ ವಯಸ್ಸು 19 ವರ್ಷ 202 ದಿನಗಳಾಗಿದ್ದವು.