ಭೋಪಾಲ್: ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಿರುವ ಮಾಲೆಗಾಂವ್ ಸ್ಫೋಟ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಅವರು ಕಾರ್ಯಕ್ರಮವೊಂದರಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ತಾವು ಜೈಲಿನಲ್ಲಿದ್ದಾಗ ಪೊಲೀಸರು ಕೊಟ್ಟ ದೈಹಿಕ ಹಿಂಸೆಯನ್ನು ನೆನೆದ ಸಾಧ್ವಿ ವೇದಿಕೆಯಲ್ಲೇ ಕಣ್ಣೀರಿಟ್ಟರು, ಬೆಂಬಲಿಗರು ಭಾರತ್ ಮಾತಾಕಿ ಜೈ ಘೋಷಣೆ ಕೂಗುವ ಮೂಲಕ ಅವರನ್ನು ಬೆಂಬಲಿಸಿದರು.
-
#WATCH: Alleging torture by jail officials, Sadhvi Pragya Singh Thakur, BJP Lok Sabha candidate from Bhopal, breaks down while addressing the party workers pic.twitter.com/UVUomvmJZ2
— ANI (@ANI) April 18, 2019 " class="align-text-top noRightClick twitterSection" data="
">#WATCH: Alleging torture by jail officials, Sadhvi Pragya Singh Thakur, BJP Lok Sabha candidate from Bhopal, breaks down while addressing the party workers pic.twitter.com/UVUomvmJZ2
— ANI (@ANI) April 18, 2019#WATCH: Alleging torture by jail officials, Sadhvi Pragya Singh Thakur, BJP Lok Sabha candidate from Bhopal, breaks down while addressing the party workers pic.twitter.com/UVUomvmJZ2
— ANI (@ANI) April 18, 2019
ಯಾವ ಕಾರಣಕ್ಕಾಗಿ ನನ್ನನ್ನು ಕರೆಸಲಾಗುತ್ತಿದೆ ಎಂಬುದನ್ನು ತಿಳಿಸದೆ ಪೊಲೀಸ್ ಠಾಣೆಗೆ ಕರೆಸಿ ಹಿಗ್ಗಾ ಮುಗ್ಗಾ ಹೊಡೆದರು. ಪೊಲೀಸರ ಒಂದು ಸಾರಿ ಲಾಠಿ ಪ್ರಹಾರ ಮಾಡಿದರೆ ಮೈ ಜುಮ್ಮೆನ್ನುತ್ತಿತ್ತು. ಇಡೀ ನರಮಂಡಲವನ್ನೇ ಹಿಂಡಿ ಹಿಪ್ಪೆ ಮಾಡಿದಂತಾಗುತ್ತಿತ್ತು. ನಾನು ಬದುಕುತ್ತೇನೆ ಎಂಬ ನಂಬಿಕೆಯೇ ಇರಲಿಲ್ಲ ಎಂದು ಪ್ರಗ್ಯಾ ಸಿಂಗ್ ಅವರು ಹೇಳುತ್ತಾ ಕಣ್ಣೀರೊರೆಸಿಕೊಂಡರು.