ETV Bharat / briefs

ಟೇಕಾಫ್ ಆದ 27 ನಿಮಿಷಕ್ಕೆ ತುರ್ತು ಭೂಸ್ಪರ್ಶ- ರಷ್ಯಾ ವಿಮಾನ ಅಪಘಾತದಲ್ಲಿ 41 ಮಂದಿ ದುರ್ಮರಣ

author img

By

Published : May 6, 2019, 8:34 AM IST

ರಷ್ಯಾ ವಿಮಾನ ದುರಂತ

ಮಾಸ್ಕೋ : ತಾಂತ್ರಿಕ ತೊಂದರೆಯಿಂದ ಬೆಂಕಿ ಕಾಣಿಸಿಕೊಂಡಿದ್ದರಿಂದ ತುರ್ತು ಭೂಸ್ಪರ್ಶ ಮಾಡುವ ವೇಳೆ ವಿಮಾನ ಅಪಘಾತಕ್ಕೀಡಾಗಿ 41ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿರುವ ಘಟನೆ ರಷ್ಯಾದ ಮಾಸ್ಕೋ ಸಿಟಿಯಲ್ಲಿರುವ ಶೇರೇಮೇಟೈವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. 11ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಾಳಾಗಿದ್ದು ಅವರುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೀಡಾದ ವಿಮಾನವನ್ನು flight​ su-1492 ಎಂದು ಗುರುತಿಸಲಾಗಿದೆ. ವಿಮಾನದಲ್ಲಿ 78 ಮಂದಿ ಪ್ರಯಾಣ ಮಾಡುತ್ತಿದ್ದರು.

ಮಾಸ್ಕೋದಿಂದ ವಿಮಾನವು ರಷ್ಯಾದ ನಾರ್ತ್‌ವೆಸ್ಟ್ ಸಿಟಿ ಮುರಮಾನಸ್ಕ್​ ಸಿಟಿ ಪ್ರಯಾಣಿಸುತ್ತಿತ್ತು. ವಿಮಾನ ಟೇಕಾಫ್ ಆದ 27 ನಿಮಿಷಕ್ಕೆ ರಷ್ಯಾ ನಿರ್ಮಿತ ಈ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿತ್ತು. ಹಾಗಾಗಿ ಮರಳಿ ವಿಮಾನ ಮಾಸ್ಕೋದ ಶೇರೇಮೇಟೈವೊ ಅಂತಾರಾಷ್ಟ್ರೀಯ ವಿಮಾನದತ್ತ ಹೊರಟಿತ್ತು. ಬೆಂಕಿ ಕಾಣಿಸಿಕೊಂಡಿದ್ದರಿಂದಾಗಿ ತುರ್ತು ಭೂಸ್ಪರ್ಶ ಮಾಡುವ ವೇಳೆ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನ ಅಪಘಾತಕ್ಕೀಡಾದ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ. ಬೆಂಕಿಯ ಕೆನ್ನಾಲಿಗೆಯಿಂದಾಗಿ ಏರ್‌ಪೋರ್ಟ್‌ನಲ್ಲಿ ದಟ್ಟ ಹೊಗೆ ಆವರಿಸಿರೋದು ವಿಡಿಯೋದಲ್ಲಿ ರೆಕಾರ್ಡಾಗಿದೆ. ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ರನ್ ವೇದಲ್ಲಿ ಬೆಂಕಿ ನಂದಿಸಲು ಯತ್ನಿಸಿದವು. ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಕೈಗೊಳ್ಳಲಾಗಿದೆ.

Intro:Body:

crash

Conclusion:

For All Latest Updates

TAGGED:

crash
ETV Bharat Logo

Copyright © 2024 Ushodaya Enterprises Pvt. Ltd., All Rights Reserved.