ETV Bharat / briefs

ಉದ್ಯೋಗ ಖಾತ್ರಿಯ ಹೊರಗುತ್ತಿಗೆ ಸಿಬ್ಬಂದಿ ಚಿಕಿತ್ಸಾ ವೆಚ್ಚ ಭರಿಸಲಿದೆ ಗ್ರಾಮೀಣಾಭಿವೃದ್ಧಿ ಇಲಾಖೆ - Department of Rural Development helps to covid patients

ಕೋವಿಡ್​ಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಇಲಾಖೆಯಿಂದ ಸಹಾಯ ಮಾಡಲಾಗುತ್ತದೆ. ಜನರಲ್ ವಾರ್ಡ್​ಗೆ 10 ಸಾವಿರ, ಹೆಚ್​ಡಿಯು ವಾರ್ಡ್​ಗೆ 12 ಸಾವಿರ, ವೆಂಟಿಲೇಟರ್ ಇಲ್ಲದ ಐಸಿಯು ಐಸೋಲೇಷನ್ ವಾರ್ಡ್​ಗೆ 15 ಸಾವಿರ ಹಾಗೂ ವೆಂಟಿಲೇಟರ್ ಇರುವ ಐಸೋಲೇಷನ್ ಐಸಿಯು ವಾರ್ಡ್​ಗೆ 25 ಸಾವಿರ ರೂ. ಪಾವತಿ ಮಾಡಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

kS eshwarappa
kS eshwarappa
author img

By

Published : May 25, 2021, 4:32 PM IST

Updated : May 25, 2021, 8:50 PM IST

ಶಿವಮೊಗ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೊರ ಗುತ್ತಿಗೆ ಸಿಬ್ಬಂದಿ ಕೋವಿಡ್​ಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಅಂತವರ ಚಿಕಿತ್ಸಾ ವೆಚ್ಚವನ್ನ ಗ್ರಾಮೀಣಾಭಿವೃದ್ದಿ ಇಲಾಖೆ ಭರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಇಲ್ಲಿನ ಜಿಲ್ಲಾ ಪಂಚಾಯತ್​ನ ಸಿಇಓ ಕಚೇರಿಯಲ್ಲಿ ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಅವರು, ಕೋವಿಡ್​ಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಇಲಾಖೆಯಿಂದ ಸಹಾಯ ಮಾಡಲಾಗುತ್ತದೆ. ಜನರಲ್ ವಾರ್ಡ್​ಗೆ 10 ಸಾವಿರ, ಹೆಚ್​ಡಿಯು ವಾರ್ಡ್​ಗೆ 12 ಸಾವಿರ, ವೆಂಟಲೇಟರ್ ಇಲ್ಲದ ಐಸಿಯು ವಾರ್ಡ್​ಗೆ 15 ಸಾವಿರ ಹಾಗೂ ವೆಂಟಿಲೇಟರ್ ಇರುವ ಐಸೋಲೇಷನ್ ಐಸಿಯು ವಾರ್ಡ್​ಗೆ 25 ಸಾವಿರ ರೂ. ಪಾವತಿ ಮಾಡಲಾಗುವುದು ಎಂದರು.

ಈಗ ಕೋವಿಡ್ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಹಣವನ್ನು 15ನೇ ಹಣಕಾಸು ಯೋಜನೆಯಡಿ ಪಡೆಯಬಹುದಾಗಿದೆ. 15ನೇ ಹಣಕಾಸು ಯೋಜನೆಯನ್ನು ಗ್ರಾಮ ಪಂಚಾಯತ್​ನವರೇ ತಯಾರು ಮಾಡಿಕೊಳ್ಳಬೇಕಿದೆ. ಇದರಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಅನುಮತಿ ಪಡೆಯಬೇಕಿಲ್ಲ ಎಂದರು.

ಮನರೇಗಾ ಯೋಜನೆ ನಿಲ್ಲಿಸುವಂತಿಲ್ಲ. ಕಂಟೇನ್​ಮೆಂಟ್​ ಝೋನ್ ಬಿಟ್ಟು ಉಳಿದ ಕಡೆ ಕೆಲಸ ನಡೆಸಬಹುದಾಗಿದೆ. ಕೆಲವು ಕಡೆ ಬೆಳಗ್ಗೆ ಹಾಗೂ ಸಂಜೆ ಮಾಡುವ ಯೋಜನೆಯನ್ನು ನಮ್ಮ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಕೂಲಿಕಾರರ ಸಮಸ್ಯೆ ಇದ್ದರೆ ಅದನ್ನು ಸಿಇಓ ಗಮನಕ್ಕೆ ತರಬೇಕಿದೆ ಎಂದು ಸಚಿವರು ಸೂಚಿಸಿದರು.

ಸಚಿವ ಕೆ.ಎಸ್. ಈಶ್ವರಪ್ಪ

ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ನೀರಿನಿಂದಲೇ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದರಿಂದ ನೀರನ್ನು ಕುದಿಸಿ, ಆರಿಸಿ ಕುಡಿಯಲು ಸೂಚಿಸಲಾಗಿದೆ. ಈ ಕುರಿತು ಗ್ರಾಮ ಪಂಚಾಯತ್​ನವರು ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಿದ್ದಾರೆ. ನಾಳೆ ಸಿಎಂ 12.30 ಕ್ಕೆ 4 ಜಿಲ್ಲೆಯ‌ 10 ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ ಎಂದರು.

ಕೊರೊನಾ ಬಗ್ಗೆ ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸಿದೆ. ಜನರೇ ತಿಳಿಯದೆ ಹೋದರೆ ಸರ್ಕಾರ ಏನು ಜಾಗೃತಿ ಮಾಡಿದ್ರು ಪ್ರಯೋಜನವಾಗುವುದಿಲ್ಲ. ಕೊರೊನಾ ಬಗ್ಗೆ ಜನರು ಅರಿಯದೆ ಹೋದರೆ, ಸಾವು ಖಚಿತ ಎಂದು ಸಚಿವ ಈಶ್ವರಪ್ಪ ಎಚ್ಚರಿಕೆ ನೀಡಿದರು.

Last Updated : May 25, 2021, 8:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.