ಜೈಪುರ: ಸನ್ರೈಸರ್ಸ್ ಹೈದರಾಬಾದ್ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಏಳು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ನಿಗದಿತ 20 ಓವರ್ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಡೇವಿಡ್ ವಾರ್ನರ್ (37) ಹಾಗೂ ಕನ್ನಡಿಗ ಮನೀಷ್ ಪಾಂಡೆ ಅಕರ್ಷಕ (61) ರನ್ ತಂಡಕ್ಕೆ ನೆರವಾಯಿತು.
ರಾಜಸ್ಥಾನ ಪರ ಮೈದಾನಕ್ಕಿಳಿದ ಎಲ್ಲ ಆಟಗಾರರೂ ಉತ್ತಮವಾಗಿ ಬ್ಯಾಟ್ ಬೀಸಿದರು. ರಹಾನೆ (39), ಲಿಯಾಮ್ ಲಿವಿಂಗ್ಸ್ಟೋನ್ (44), ಸ್ಯಾಮ್ಸನ್(48), ಸ್ಮಿತ್ (22) ರನ್ಗಳಿಂದ ಅವಶ್ಯಕ ಗೆಲುವು ಸಾಧಿಸಿತು.
-
That's that from Jaipur as the @rajasthanroyals register a victory by 7 wickets with 5 deliveries to spare.#RRvSRH pic.twitter.com/uL7TPNrd4K
— IndianPremierLeague (@IPL) April 27, 2019 " class="align-text-top noRightClick twitterSection" data="
">That's that from Jaipur as the @rajasthanroyals register a victory by 7 wickets with 5 deliveries to spare.#RRvSRH pic.twitter.com/uL7TPNrd4K
— IndianPremierLeague (@IPL) April 27, 2019That's that from Jaipur as the @rajasthanroyals register a victory by 7 wickets with 5 deliveries to spare.#RRvSRH pic.twitter.com/uL7TPNrd4K
— IndianPremierLeague (@IPL) April 27, 2019
ರಾಜಸ್ಥಾನ ಪಂದ್ಯ ಗೆಲ್ಲುವುದರೊಂದಿಗೆ ಅಂಕಪಟ್ಟಿಯಲ್ಲಿ ಒಂದಷ್ಟು ಬದಲಾವಣೆ ಆಗಿವೆ. ರಾಜಸ್ಥಾನ ರಾಯಲ್ಸ್ ಒಂದು ಸ್ಥಾನ ಏರಿಕೆಯಾಗಿ ಆರನೇ ಸ್ಥಾನಕ್ಕೆ ಬಂದು ನಿಂತಿದೆ. ಹೀಗಾಗಿ ಪ್ಲೇ ಆಫ್ ಲೆಕ್ಕಾಚಾರಗಳು ಮತ್ತಷ್ಟು ರೋಚಕವಾಗಿದೆ.