ETV Bharat / briefs

ಪಂತ್​-ಕಾರ್ತಿಕ್​, ರಾಯುಡು-ಶಂಕರ್​​ - ಯಾರು ಹಿತವರು ವಿಶ್ವಕಪ್‌ಗೆ?

ಎಂ.ಎಸ್​.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಏಪ್ರಿಲ್​​ 15ರಂದು ಮುಂಬೈನಲ್ಲಿ ಸಭೆ ಸೇರಲಿದ್ದು, ಈ ವೇಳೆ ವಿಶ್ವಕಪ್​ ಟೂರ್ನಿಗೆ 15 ಆಟಗಾರರ ಸಂಭಾವ್ಯ ತಂಡ ಅಂತಿಮವಾಗಲಿದೆ.

ಇಂಗ್ಲೆಂಡ್
author img

By

Published : Apr 14, 2019, 1:13 PM IST

ಹೈದರಾಬಾದ್:ಇಂಗ್ಲೆಂಡ್‌ನಲ್ಲಿ ಮೇ.30ರಿಂದ ಆರಂಭವಾಗಲಿರುವ ವಿಶ್ವಕಪ್​ ಟೂರ್ನಿಗೆ ಸಂಭಾವ್ಯ 15 ಮಂದಿ ಆಟಗಾರರ ಪಟ್ಟಿ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ. ಎಂ.ಎಸ್​.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಏಪ್ರಿಲ್ 15ರಂದು ಮುಂಬೈನಲ್ಲಿ ಸಭೆ ಸೇರಲಿದ್ದು, ಟೀಮ್ ಇಂಡಿಯಾ ಘೋಷಣೆಯಾಗಲಿದೆ.

ಪಂತ್​- ಕಾರ್ತಿಕ್​ ನಡುವೆ ಯಾರಿಗೆ ಇಂಗ್ಲೆಂಡ್‌ ಟಿಕೆಟ್..?

ಹಿರಿಯ ಆಟಗಾರ ಎಂ.ಎಸ್​.ಧೋನಿ ವಿಕೆಟ್ ಕೀಪಿಂಗ್​ ಜವಾಬ್ದಾರಿ ಹೊರಲಿದ್ದು, ಎರಡನೇ ವಿಕೆಟ್ ಕೀಪರ್‌ ಸ್ಥಾನಕ್ಕೆ ರಿಷಭ್​ ಪಂತ್​​ ಹಾಗೂ ದಿನೇಶ್ ಕಾರ್ತಿಕ್ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ದಿನೇಶ್ ಕಾರ್ತಿಕ್ ಇತ್ತೀಚೆಗೆ ಟೀಮ್ ಇಂಡಿಯಾದಲ್ಲಿ ಕೆಲ ನಿರ್ಣಾಯಕ ಪಂದ್ಯಗಳನ್ನಾಡಿದ್ದು, ಪಂತ್​ಗಿಂತ ಹೆಚ್ಚಿನ ಅನುಭವವನ್ನೂ ಹೊಂದಿದ್ದಾರೆ. ರಿಷಬ್ ಪಂತ್ ರಾಷ್ಟ್ರೀಯ ತಂಡದಲ್ಲಿ ಅಷ್ಟಾಗಿ ಭರವಸೆ ಮೂಡಿಸಿಲ್ಲ.

ರಾಯುಡು - ಶಂಕರ್​​​​​​ ಮಧ್ಯೆ ಯಾರಿಗೆ ಮಣೆ..?

ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್​​ ಸ್ಫೋಟಕ ಇನ್ನಿಂಗ್ಸ್​​ ಮೂಲಕ ತಂಡದ ರನ್​ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಜೊತೆಗೆ ಬೌಲಿಂಗ್​ನಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇತ್ತ ಅಂಬಟಿ ರಾಯುಡು ಟೀಮ್ ಇಂಡಿಯಾದಲ್ಲಿ ಇತ್ತೀಚಿನ ಕೆಲ ಸರಣಿಗಳಲ್ಲಿ ಸಂಪೂರ್ಣ ವಿಫಲರಾಗಿವುದು ಕಂಡುಬಂದಿದೆ. ಹಾಗಾಗಿ ಆಯ್ಕೆ ಸಮಿತಿ ಶಂಕರ್‌ಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

ಐಪಿಎಲ್​ ವೇಳೆ ಆಟಗಾರರ ಸಾಧನೆಯನ್ನು ವಿಶ್ವಕಪ್​​ ತಂಡದ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಕೇವಲ ಫಿಟ್​ನೆಸ್ ವಿಚಾರ ಮಾತ್ರ ನೋಡಲಾಗುತ್ತದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್​.ಕೆ ಪ್ರಸಾದ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಹಾಗಾಗಿ, ಅಂಕಿ-ಅಂಶ ಹಾಗೂ ಆಂಗ್ಲರ ನಾಡಿನ ಪಿಚ್​​ ಗಮನದಲ್ಲಿರಿಸಿಕೊಂಡು ವಿಶ್ವಕಪ್​ ಟೂರ್ನಿಗೆ ಬಲಿಷ್ಠ ತಂಡವನ್ನು ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿ ಆಯ್ಕೆ ಸಮಿತಿಯ ಮುಂದಿದೆ.

Intro:Body:

ಪಂತ್​-ಕಾರ್ತಿಕ್​, ರಾಯುಡು-ಶಂಕರ್​​.... ಇಂಗ್ಲೆಂಡ್​​​​​​​​​ ಪ್ಲೈಟ್​ ಟಿಕೆಟ್​ ಯಾರಿಗೆ..?

ಹೈದರಾಬಾದ್: ಮೇ.30ರಿಂದ ಆರಂಭವಾಗಲಿರುವ ವಿಶ್ವಕಪ್​ ಟೂರ್ನಿಗೆ ಭಾರತ ತಂಡ ಏಪ್ರಿಲ್ 15ರಂದು ಟೀಮ್ ಇಂಡಿಯಾ ಘೋಷಣೆಯಾಗಲಿದ್ದು, ಕೆಲ ಆಟಗಾರರು ಸೆಲೆಕ್ಷನ್ ವಿಚಾರದಲ್ಲಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

ಎಂ.ಎಸ್​.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಏಪ್ರಿಲ್​​ 15ರಂದು ಮುಂಬೈನಲ್ಲಿ ಸಭೆ ಸೇರಲಿದ್ದು ಇದೇ ವೇಳೆ ವಿಶ್ವಕಪ್​ ಟೂರ್ನಿಗೆ 15 ಆಟಗಾರರ ಸಂಭಾವ್ಯ ತಂಡ ಅಂತಿಮವಾಗಲಿದೆ.

ಐಪಿಎಲ್​ ಪ್ರದರ್ಶನ ವಿಶ್ವಕಪ್​​ಗೆ ಪರಿಗಣನೆ ಆಗುವುದಿಲ್ಲ, ಕೇವಲ್ ಫಿಟ್​ನೆಸ್ ವಿಚಾರ ಮಾತ್ರ ನೋಡಲಾಗುತ್ತದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್​.ಕೆ ಪ್ರಸಾದ್ ಈಗಾಗಲೇ ಸ್ಪಷ್ಟನೆ ನೀಡಿದ್ದರು.

ಪಂತ್​- ಕಾರ್ತಿಕ್​ ನಡುವೆ ಆಯ್ಕೆಯಾಗೋದು ಯಾರು..?

ಹಿರಿಯ ಆಟಗಾರ ಎಂ.ಎಸ್​.ಧೋನಿ ವಿಕೆಟ್ ಕೀಪಿಂಗ್​ ಜವಾಬ್ದಾರಿ ಹೊರಲಿದ್ದು. ಎರಡನೇ ವಿಕೆಟ್ ಸ್ಥಾನಕ್ಕೆ ರಿಷಭ್​ ಪಂತ್​​ ಹಾಗೂ ದಿನೇಶ್ ಕಾರ್ತಿಕ್ ನಡುವೆ ಪೈಪೋಟಿ ಏರ್ಪಟ್ಟಿದೆ.

ದಿನೇಶ್ ಕಾರ್ತಿಕ್ ಇತ್ತೀಚೆಗೆ ಟೀಮ್ ಇಂಡಿಯಾದಲ್ಲಿ ಕೆಲ ನಿರ್ಣಾಯಕ ಪಂದ್ಯಗಳನ್ನಾಡಿದ್ದು, ಪಂತ್​ಗಿಂತ ಹೆಚ್ಚಿನ ಅನುಭವವನ್ನೂ ಹೊಂದಿದ್ದಾರೆ. ಇತ್ತ ಪಂತ್ ರಾಷ್ಟ್ರೀಯ ತಂಡದಲ್ಲಿ ಇನ್ನೂ ಅಷ್ಟಾಗಿ ಭರವಸೆ ಮೂಡಿಸಿಲ್ಲ.

ರಾಯುಡು- ಶಂಕರ್​​​​​​ ಮಧ್ಯೆ ಯಾರಿಗೆ ಮಣೆ..?

ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್​​ ಸ್ಪೋಟಕ ಇನ್ನಿಂಗ್ಸ್​​ ಮೂಲಕ ತಂಡದ ರನ್​ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಜೊತೆಗೆ ಬೌಲಿಂಗ್​ನಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇತ್ತ ಅಂಬಟಿ ರಾಯುಡು ಟೀಮ್ ಇಂಡಿಯಾದಲ್ಲಿ ಇತ್ತೀಚಿನ ಕೆಲ ಸರಣಿಗಳಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಇವೆಲ್ಲ ಅಂಕಿ-ಅಂಶ ಹಾಗೂ ಆಂಗ್ಲರ ನಾಡಿನ ಪಿಚ್​​ ಗಮನದಲ್ಲಿರಿಸಿ ವಿಶ್ವಕಪ್​ ಟೂರ್ನಿಗೆ ಬಲಿಷ್ಠ ತಂಡವನ್ನು ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿ ಆಯ್ಕೆ ಸಮಿತಿಯ ಮುಂದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.