ರಾಯಚೂರು: ಜಿಲ್ಲೆಯ ರಿಮ್ಸ್ ಆಸ್ಪತ್ರೆಗೆ ಪೂರೈಕೆಯಾಗಿದ್ದ ವೆಂಟಿಲೇಟರ್ಗಳಲ್ಲಿ ಕಳಪೆ ಗುಣಮಟ್ಟದ ವೆಂಟಿಲೇಟರ್ ಸರಬರಾಜು ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇತ್ತೀಚೆಗಷ್ಟೇ ಪೂರೈಕೆಯಾದ 50 ವೆಂಟಿಲೇಟರ್‌ಗಳ ಪೈಕಿ 26 ವೆಂಟಿಲೇಟರ್‌ಗಳನ್ನ ವಾಪಸ್ ಕಳುಹಿಸಲಾಗಿದೆ.
ಕೊರೊನಾ ಎರಡನೇ ಅಲೆ ಹಿನ್ನೆಲೆ ರಾಯಚೂರಿನ ರಿಮ್ಸ್ ವೈದ್ಯಕೀಯ ಕಾಲೇಜಿಗೆ ವೆಂಟಿಲೇಟರ್ಗಳನ್ನು ಸರಬರಾಜು ಮಾಡಲಾಗಿತ್ತು. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದಿಂದ ವೆಂಟಿಲೇಟರ್‌ಗಳು ಪೂರೈಕೆಯಾಗಿದ್ದವು. ಆದ್ರೆ ತಾಂತ್ರಿಕ ದೋಷದಿಂದಾಗಿ 26 ವೆಂಟಿಲೇಟರ್‌ಗಳನ್ನ ವಾಪಸ್ ಪಡೆಯುವಂತೆ ರಿಮ್ಸ್ ಆಡಳಿತ ಮಂಡಳಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಕೆಎಸ್ಎಂಎಸ್ಎಲ್ನಿಂದ ಪೂರೈಸಿರುವ ಆಗ್ವಾ ಮೆಕ್ನ ವೆಂಟಿಲೇಟರ್‌ಗಳಾಗಿವೆ ಎನ್ನಲಾಗುತ್ತಿದೆ. ತಾಂತ್ರಿಕ ದೋಷ ಹೊಂದಿರುವ 26 ವೆಂಟಿಲೇಟರ್‌ಗಳನ್ನ ಬದಲಿಸಿಕೊಡಲು ಮನವಿ ಮಾಡಲಾಗಿದೆ.