ETV Bharat / briefs

ಭೂ ಗಳ್ಳರ ವಿರುದ್ಧ ಕ್ರಮಕೈಗೊಳ್ಳಿ ಇಲ್ಲ ಎಂದ್ರೆ ನಾನು ರಿಸೈನ್​​ ಮಾಡ್ತೇನಿ: ರಾಮಸ್ವಾಮಿ ಗರಂ - undefined

ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡವರ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಬೇಕು. ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಅಧಿಕಾರಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ
author img

By

Published : Jun 14, 2019, 2:43 PM IST

ಬೆಂಗಳೂರು: ಕೆಂಗೇರಿ ಹೋಬಳಿಯ ಸರ್ವೆ ನಂಬರ್​ 137ರಲ್ಲಿ 305 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಾಜ್ಯ ವಿಧಾನ ಸಭೆಯ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಎ.ಟಿ ರಾಮಸ್ವಾಮಿ ಹೇಳಿದರು.

ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಶಿಸ್ತು ಬದ್ಧ ಕ್ರಮ ತೆಗೆದುಕೊಳ್ಳುವಂತೆ ಖಡಕ್​ ಎಚ್ಚರಿಕೆ ನೀಡಿದರು. ಸಭೆ ಪ್ರಾರಂಭವಾಗುವ ಮುನ್ನ ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

18 ಕಿ.ಮೀ ಒಳಗೆ ಕೃಷಿ ಭೂಮಿ ಮಂಜೂರು ಮಾಡಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಆದರೂ ಮಂಜೂರು ಮಾಡಲಾಗಿದೆ. ತಹಶೀಲ್ದಾರ್​ ಅಕ್ಟೋಬರ್​ ತಿಂಗಳಿನಲ್ಲಿ 10 ಬಾರಿ ವಿಚಾರಣೆ ಮಾಡಿದ್ದಾರೆ. ಇದು ಸರ್ಕಾರದ ಪರ ಆದೇಶ ನೀಡಲು ಅಲ್ಲ. ಬದಲಾಗಿ ಬೇರೆಯವರಿಗೆ ಸರ್ಕಾರಿ ಜಾಗ ಪರಭಾರೆ ಮಾಡಲು ಎಂದು ಸಭೆಯಲ್ಲಿದ್ದ ಅಧಿಕಾರಿಗಳನ್ನು ರಾಮಸ್ವಾಮಿ ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಕಾಯ್ದೆಗಳನ್ನು ಮರೆಮಾಚಿ ಆದೇಶ ನೀಡಲಾಗಿದೆ ಎಂದು ಕಿಡಿಕಾರಿದರು. ನಾಗಮ್ಮ ಮತ್ತು ಮೋಟಮ್ಮ ಹಿಡುವಳಿಯಲ್ಲಿದ್ದಾರೆ ಎಂದು ವಿಶೇಷ ಡಿಸಿ ಆದೇಶದಲ್ಲಿ ಹೇಳುತ್ತಿದ್ದಾರೆ. ಇದು ಸಂಪೂರ್ಣ ತಪ್ಪು ಆದೇಶ. ಸರ್ಕಾರಿ ಆಸ್ತಿ‌ ರಕ್ಷಣೆ ಮಾಡಬೇಕಾದವರೇ ಅಕ್ರಮ ಪರಭಾರೆ ಮಾಡಲು ಹೊರಟಿದ್ದಾರೆ. ಕಂದಾಯ ಸಚಿವರ ಸದನದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ಇನ್ನೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ನಡುವೆ ಮಾತನಾಡಿದ ಇಲಾಖೆ ಅಧಿಕಾರಿ ರಶ್ಮಿ ಮಹೇಶ್, ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿ ಕ್ರಮ ಕುರಿತು ಮಾಹಿತಿ ನೀಡುತ್ತೇನೆ ಎಂದರು. ಇದೇ ವೇಳೆ ಅಧಿಕಾರಿಗಳ ಭರವಸೆಗೆ ಸಮ್ಮತಿ ನೀಡಿದ ಎ.ಟಿ.ರಾಮಸ್ವಾಮಿ ಮುಂದಿನ ಸಭೆ ವೇಳೆಗೆ ಸಮಜಾಯಿಷಿ ಅಲ್ಲ ಕ್ರಮದ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಅಧಿಕಾರಿಗಳ ಜೊತೆ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಸ್ಥಳ ಪರಿಶೀಲನೆಗೆ ತೆರಳಿದರು.

Intro:ಬೆಂಗಳೂರು: ಕೆಂಗೇರಿ ಹೋಬಳಿಯ ಬಡಾ ಮನ್ವಾರ್ತೆ ಕಾವಲ್ ನ ಸರ್ವೆ ಸಂಖ್ಯೆ 137 ರಲ್ಲಿ 305 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಮಿತಿಗೆ ರಾಜೀನಾಮೆ ನೀಡುತ್ತೇನೆ ಎಂದು ರಾಜ್ಯ ವಿಧಾನ ಸಭೆಯ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಎ.ಟಿ ರಾಮಸ್ವಾಮಿ ಹೇಳಿದ್ದಾರೆ.Body:

ವಿಧಾನ ಸೌಧದ ಮೊದಲನೇ ಮಹಡಿಯಲ್ಲಿರುವ ಸಮಿತಿ ಕಚೇರಿಯಲ್ಲಿ ಸರ್ಕಾರಿ ಭರವಸೆಗಳ ಸಮಿತಿಯ ಸಭೆ ನಡೆಯಿತು.ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿ ನಂತರ ಸಭೆ ಆರಂಭಿಸಲಾಯಿತು.

ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಎ.ಟಿ ರಾಮಸ್ವಾಮಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಬಡಾ ಮನ್ವಾರ್ತೆ ಕಾವಲ್ ( ಬಿ. ಎಂ ಕಾವಲ್ ) ನ ಸರ್ವೆ ಸಂಖ್ಯೆ 137 ಮಹಾನಗರದ 15 ಕಿಮಿ ವ್ಯಾಪ್ತಿಯಲ್ಲಿದೆ, 18 ಕಿ.ಮೀ ಒಳಗೆ ಕೃಷಿ ಭೂಮಿ ಮಂಜೂರು ಮಾಡಲು ಕಾಯ್ದೆಯಲ್ಲಿ ಅವಕಾಶವಿಲ್ಲ,ಆದರೂ ಮಂಜೂರು ಮಾಡಲಾಗಿದೆ.ತಹಶಿಲ್ದಾರರ್, ಕಳೆದ ಅಕ್ಟೋಬರ್ ನಲ್ಲಿ ಒಂದು ತಿಂಗಳಿನಲ್ಲಿ 10 ಬಾರಿ ವಿಚಾರಣೆ ಮಾಡಿದ್ದಾರೆ, ಇದು ಸರ್ಕಾರದ ಪರ ಆದೇಶ ನೀಡಲು ಅಲ್ಲ, ಬೇರೆಯವರಿಗೆ ಸರ್ಕಾರಿ ಜಾಗ ಪರಬಾರೆ ಮಾಡಲು , ದೇಶದ ಇತಿಹಾಸದಲ್ಲಿ ತಿಂಗಳಲ್ಲಿ 10 ಬಾರಿ ವಿಚಾರಣೆ ನಡೆಸಿರುವುದು ಇದೇ ಮೊದಲು ಎನಿಸುತ್ತದೆ. ತಹಶಿಲ್ದಾರ್ ಸರ್ಕಾರಿ ಜಾಗ ಎಂದು ಬರೆದರೂ ತಹಶಿಲ್ದಾರ ವರದಿ ನೀಡಿಲ್ಲ ಎಂದಿದ್ದಾರೆ ಭೂ ದಾಖಲೆಗಳ ಜಂಟಿ ನಿರ್ದೇಶಕ ಕೂಡ ಸರ್ಕಾರಿ ಜಾಗ ಎಂದೇ ಬರೆದಿದ್ದಾರೆ,ಆದರೆ ಇದೆಲ್ಲವನ್ನು ಮರೆಮಾಚಿ ಆದೇಶ ನೀಡಲಾಗಿದೆ ಎಂದು ಕಿಡಿಕಾರಿದರು.

ಹಿಂದೆಲ್ಲಾ ಕೋರ್ಟ್ ಗೆ ಶ್ರೀ ಹರಿ ಕುಟುಂಬ ಹೋಗಿತ್ತು ಹೈಕೋರ್ಟ್ ಮತ್ತೆ ಮತ್ತೆ ಯಾಕೆ ಬರುತ್ತೀರಿ ಎಂದು‌ ಪ್ರಶ್ನಿಸಿದ್ದಕ್ಕೆ‌ ನಂತರ ಬೇರೆಯವರನ್ನು ಅಲ್ಲಿಗೆ ತಳ್ಳಿದ್ದಾರೆ, ನಾಗಮ್ಮ ಮತ್ತು ಮೋಟಮ್ಮ ಹಿಡುವಳಿಯಲ್ಲಿದ್ದಾರೆ ಎಂದು ವಿಶೇಷ ಡಿಸಿ ಆದೇಶದಲ್ಲಿ ಹೇಳುತ್ತಿದ್ದಾರೆ ಇದು ಸಂಪೂರ್ಣ ತಪ್ಪು ಆದೇಶ, ಸರ್ಕಾರಿ ಆಸ್ತಿ‌ರಕ್ಷಣೆ ಮಾಡಬೇಕಾದವರೇ ಬೇರೆಯವರಿಗೆ ಅಕ್ರಮ ಪರಬಾರೆ ಮಾಡಲು ಹೊರಟಿದ್ದಾರೆ. ಸ್ವತಃ ಕಂದಾಯ ಸಚಿವರ ಸದನದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ಇನ್ನೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ, ವಿಶ್ವಾಸ ದ್ರೋಹ ಮಾಡಿದವರ ವಿರುದ್ಧ ಕ್ರಮ ಇಲ್ಲ ಎಂದರೆ ಏನು 305 ಎಕರೆ ಸರ್ಕಾರಿ ಜಾಗ ಅದು,ಪ್ರತಿ ಎಕರೆಗೆ 5 ಕೋಟಿ ಅಂದರೂ 1500 ಕೋಟಿ ಮೌಲ್ಯದ ಜಾಗ ಅದು, ಅದನ್ನು ಕಬಳಿಸಿದವರು ಮತ್ತು ಸಹಕಾರ ನೀಡಿದವರ ವಿರುದ್ಧ ಕ್ರಿಮಿನಲ್ ಕೇಸ್ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದರು.

ಗ್ರಾಮಲೆಕ್ಕಾಧಿಕಾರಿಯಿಂದ‌ಮೇಲಿನ ಅಧಿಕಾರಿಗಳ ವರೆಗೆ ಕಡತ ತಿದ್ದಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು.
ನಾಗಮ್ಮ ಮೋಟಮ್ಮ ಹೆಸರೇ ಇರಲಿಲ್ಲ ಅವರು ಹಿಡುವಳಿಯಲ್ಲಿ ಇದ್ದಾರೆ ಎಂದು ತೋರಿಸಿದ್ದಾರೆ, ದಾಖಲೆ ತಿದ್ದುಪಡಿ,ನಕಲಿ‌ ದಾಖಲೆ ಸೃಷ್ಠಿ, ಫೋರ್ಜರಿ ನಡೆದಿದೆ, ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರಬೇಕು, ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲದೇ ಇದ್ದಲ್ಲಿ ನಾನು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನ ಮುಂದಿನ‌ ಸಭೆಗೆ ಹಾಜರಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ‌ ಸರ್ಕಾರದ ಪರ ಉತ್ತರ ನೀಡಿದ ಇಲಾಖಾಧಿಕಾರಿ ರಶ್ಮಿ ಮಹೇಶ್,60 ವರ್ಷದಿಂದ ಇದು ನಡೆದುಕೊಂಡು ಬಂದಿದೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಡತ ಜಾರಿಯಲ್ಲಿದೆ, ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿ ಕ್ರಮ ಕುರಿತು ಮಾಹಿತಿ ನೀಡುತ್ತೇನೆ ಎಂದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್ ಮಾತನಾಡಿ, ಸರ್ಕಾರಕ್ಕೆ ಬರೆದು ಆದೇಶ ಸರಿ ಇಲ್ಲ ಎಂದು ತಿಳಿಸಲಸಗಿದೆ, ತಹಶಿಲ್ದಾರ್ ವರದಿ ಎಲ್ಲವನ್ನೂ ಹಾಕಿ ಆದೇಶಕ್ಕೆ ತಡೆ ತಂದಿದ್ದೇವೆ, ಕ್ರಿಮಿನಲ್ ಕೇಸ್ ಹಾಕುವ ಬಗ್ಗೆ ಮುಂದಿನ ಕ್ರಮ ಮದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುತ್ತೇವೆ,ಲೋಪದೋಶ ಮುಂದುವರೆಸಲು ಅವಕಾಶ ನೀಡಲ್ಲ ಆದಷ್ಟು ಬೇಗ ತೀರ್ಮಾನ ಕೈಗೊಳ್ಳುವಂತೆ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತನಾಡುತ್ತೇವೆ ಎಂದು ಭರವಸೆ ನೀಡಿದರು.

ಅಧಿಕಾರಿಗಳ ಭರವಸೆಗೆ ಸಮ್ಮತಿ ನೀಡಿದ ಎ.ಟಿ ರಾಮಸ್ವಾಮಿ ಮುಂದಿನ ಸಭೆ ವೇಳೆಗೆ ಸಮಜಾಯಿಷಿ ಅಲ್ಲ ಕ್ರಮದ ಮಾಹಿತಿ ನೀಡಬೇಕು ಎಂದು ಸೂಚಿಸಿ ಅಧಿಕಾರಿಗಳ ಜೊತೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಬಡಾ ಮನ್ವಾರ್ತೆ ಕಾವಲ್ ( ಬಿ. ಎಂ ಕಾವಲ್ ) ನ ಸ್ಥಳ ಪರಿಶೀಲನೆಗೆ ತೆರಳಿದರು.

Conclusion:-ಪ್ರಶಾಂತ್ ಕುಮಾರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.