ಜೈಪುರ :2018 ರ ಸೀಸನ್ನಲ್ಲಿ ಆರ್ಸಿಬಿಯನ್ನು ಕಾಡಿದ್ದ ಕನ್ನಡಿಗ ಶ್ರೇಯಸ್ ಗೋಪಾಲ್ ಮತ್ತೆ ಆರ್ಸಿಬಿಯನ್ನು ತನ್ನ ಸ್ಪಿನ್ ಬಲೆಯಲ್ಲಿ ಕೆಡವುದರಲ್ಲಿ ಮತ್ತೆ ಯಶಸ್ವಿಯಾಗಿದ್ದಾರೆ.
2018 ಆವೃತ್ತಿಯಲ್ಲಿ 2 ಪಂದ್ಯಗಳಲ್ಲೂ ಆರ್ಸಿಬಿಯನ್ನು ಮಣಿಸಿದ್ದ ರಾಜಸ್ಥಾನ ರಾಯಲ್ಸ್ ಹಿಂದೆ ಕನ್ನಡಿಗರಾದ ಕೆ.ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಸ್ಪಿನ್ ಬೌಲಿಂಗ್ ನೆರವಾಗಿತ್ತು. ಈಗ ಅದೇ ಸ್ಪಿನ್ ಜೋಡಿ ಮತ್ತೆ ಆರ್ಸಿಬಿಯನ್ನು ಇಂದು ಜೈಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಾಡತೊಡಗಿದೆ.
That moment when you get both key wickets 🙀🙀. Kohli and ABD back in the hut.
— IndianPremierLeague (@IPL) April 2, 2019 " class="align-text-top noRightClick twitterSection" data="
RCB 71/2 in 8.3 overs https://t.co/O45uyAtahT #RRvRCB pic.twitter.com/MZs97IQbfo
">That moment when you get both key wickets 🙀🙀. Kohli and ABD back in the hut.
— IndianPremierLeague (@IPL) April 2, 2019
RCB 71/2 in 8.3 overs https://t.co/O45uyAtahT #RRvRCB pic.twitter.com/MZs97IQbfoThat moment when you get both key wickets 🙀🙀. Kohli and ABD back in the hut.
— IndianPremierLeague (@IPL) April 2, 2019
RCB 71/2 in 8.3 overs https://t.co/O45uyAtahT #RRvRCB pic.twitter.com/MZs97IQbfo
2018ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ ವಿರಾಟ್ ಕೊಹ್ಲಿ ಹಾಗೂ ಎಬಿ ಡಿಯನ್ನು ಗೋಪಾಲ್ ಔಟ್ ಮಾಡಿದ್ದರು. ನಂತರ ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೊಹ್ಲಿಯನ್ನು ಕೆ.ಗೌತಮ್ ಔಟ್ ಮಾಡಿದರೆ ಎಬಿಡಿಯನ್ನು ಗೋಪಾಲ್ ಪೆವಿಲಿಯನ್ಗಟ್ಟಿದ್ದರು. ಆ ಪಂದ್ಯದಲ್ಲಿ ಗೋಪಾಲ್ 16 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇಂದಿನ ಪಂದ್ಯದಲ್ಲಿ ಗೋಪಾಲ್ 4ಓವರ್ನಲ್ಲಿ12 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ಗೌತಮ್ 3 ಓವರ್ಗಳಲ್ಲಿ 17 ರನ್ ನೀಡುವ ಮೂಲಕ ಆರ್ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದ್ದಾರೆ.
ಒಟ್ಟಿನಲ್ಲಿ ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಪ್ಲೇ ಆಫ್ ತಲುಪದಂತೆ ಮಾಡಿದ್ದ ಈ ಕರ್ನಾಟಕದ ಸ್ಪಿನ್ ಜೋಡಿ ಈ ಬಾರಿಯೂ ಆರ್ಸಿಬಿಗೆ ಶಾಕ್ ನೀಡಿದೆ. ಆರ್ಸಿಬಿ 20 ಓವರ್ಗಳಲ್ಲಿ 158 ರನ್ಗಳಿಸಿದೆ.