ಬೆಂಗಳೂರು: ಸಿಎಸ್ಕೆ ವಿರುದ್ಧ ಮುಗ್ಗರಿಸಿ ಆರ್ಸಿಬಿ ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ಗೆ ಹೇಳಿ ಮಾಡಿಸಿದಂತಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 162ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಚೆನ್ನೈ ಆರ್ಸಿಬಿಗೆ ಬ್ಯಾಟಿಂಗ್ ನೀಡಿತು. ಆರಂಭಿಕರಾಗಿ ಬಂದ ಕೊಹ್ಲಿ 9 ರನ್, ಎಬಿಡಿ 25 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕಡಿಮೆ ರನ್ಗಳಿಗೆ ಕುಸಿಯುವ ಭೀತಿಯಲ್ಲಿದ್ದ ಆರ್ಸಿಬಿ ಗೆ ಮೊಯಿನ್ ಅಲಿ 15 ಎಸೆತಗಳಲ್ಲಿ 26, ಪಾರ್ಥಿವ್ ಪಟೇಲ್ 53 ರನ್ಗಳಿಸಿ ತಂಡದ ಮೊತ್ತ 161 ರನ್ಗಳಾಗಲು ನೆರವಾದರು. ಇವರನ್ನು ಬಿಟ್ಟರೆ, ಅಕ್ಷದೀಪ್ನಾಥ್ ದೀಪ್ 24, ಸ್ಟೋಯ್ನಿಸ್ 14 ಪವನ್ ನೇಗಿ 5 ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು.
ಸಿಎಸ್ಕೆ ಪರ ದೀಪಕ್ ಚಹಾರ್ 2,ಜಡೇಜಾ 2, ಬ್ರಾವೋ 2 ಹಾಗೂ ಇಮ್ರಾನ್ ತಾಹೀರ್ 1 ವಿಕೆಟ್ ಪಡೆದು ಆರ್ಸಿಬಿಯನ್ನು ಕೇವಲ 161 ರನ್ಗಳಿಗೆ ಸೀಮಿತಗೊಳಿಸಿದರು.