ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರನ್ನು ಪಂಜಾಬ್ ತಂಡದ ನಾಯಕ ಅಶ್ವಿನ್ ಮಂಕಡ್ ರನ್ಔಟ್ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಬಟ್ಲರ್ 12.5 ನೇ ಓವರ್ನಲ್ಲಿ ಅಶ್ವಿನ್ ಬೌಲ್ ಮಾಡುವುದಕ್ಕೆ ಮೊದಲೆ ಕ್ರೀಸ್ ಬಿಟ್ಟಿದ್ದರು, ಇದನ್ನು ಗಮನಿಸಿದ ಅಶ್ವಿನ್ ಬೆಲ್ಸ್ ಎಗರಿಸಿ ರನ್ಔಟ್ ಅಪೀಲ್ ಮಾಡಿದರು. ಫೀಲ್ಡ್ ಮೂರನೇ ಅಂಪೈರ್ ಮೊರೆ ಹೋಗಿ ಔಟ್ ಎಂದು ತೀರ್ಮಾನ ನೀಡಿದರು.
Law 41.16 a batsmen at non strikers end should not leave his ground UNTIL the bowler has released the ball!
— Dean Jones (@ProfDeano) March 25, 2019 " class="align-text-top noRightClick twitterSection" data="
SO OUT! Lesson.. batsmen watch the bowlers release the ball! #easy #SelectDugout
">Law 41.16 a batsmen at non strikers end should not leave his ground UNTIL the bowler has released the ball!
— Dean Jones (@ProfDeano) March 25, 2019
SO OUT! Lesson.. batsmen watch the bowlers release the ball! #easy #SelectDugoutLaw 41.16 a batsmen at non strikers end should not leave his ground UNTIL the bowler has released the ball!
— Dean Jones (@ProfDeano) March 25, 2019
SO OUT! Lesson.. batsmen watch the bowlers release the ball! #easy #SelectDugout
ಆದರೆ ಈ ರೀತಿ ಔಟ್ ಮಾಡುವ ಮೂಲಕ ಅಶ್ವಿನ್ ಕ್ರೀಡಾ ಸ್ಪೂರ್ತಿ ಮರೆತಿದ್ದಾರೆಂದು ಅವರ ವಿರುದ್ಧ ಹಲವು ಮಾಜಿ ಕ್ರಿಕೆಟಿಗರು ಕಿಡಿ ಕಾರಿದ್ದಾರೆ. ಆದರೆ ಕ್ರಿಕೆಟ್ ಲಾ ಬುಕ್ನಲ್ಲಿ 41.16 ಅಡಿಯಲ್ಲಿ ಬೌಲರ್ ಬಾಲ್ ಎಸೆಯುವುದಕ್ಕೂ ಮುನ್ನ ಬ್ಯಾಟ್ಸ್‌ಮನ್ ಕ್ರೀಸ್ ಬಿಟ್ಟಿದ್ದರೆ ಬೌಲರ್ ಆತನನ್ನು ರನ್ಔಟ್ ಮಾಡಬಹುದು. ಆದರೆ ಈ ರೀತಿ ಔಟ್ ಮಾಡು ವ ಮುನ್ನ ಬ್ಯಾಟ್ಸ್‌ಮನ್‌ಗೆ ಕ್ರೀಡಾ ಸ್ಪೂರ್ತಿಯ ದೃಷ್ಟಿಯಿಂದ ಎಚ್ಚರಿಕೆ ನೀಡಬೇಕಾಗುತ್ತದೆ.
ಇಬ್ಬರು ಆಟಗಾರರಿಗೆ ಮಂಕಡ್ ಮೊದಲೇನಲ್ಲ
ಔಟ್ ಮಾಡಿದ ಅಶ್ವಿನ್ ಹಾಗೂ ಔಟ್ ಆದ ಬಟ್ಲರ್ ಇಬ್ಬರಿಗೂ ಇದು ಹೊಸತೇನಲ್ಲ. ಈ ಹಿಂದೆ ಆಶ್ವಿನ್ ಶ್ರೀಲಂಕಾದ ಲಹೆರು ತಿರುಮಾನೆ ಯನ್ನು ಅವರು ಹೀಗೆಯೇ ಔಟ್ ಮಾಡಿದ್ದರು, ಆದರೆ ಅಂದು ಸಚಿನ್ ತೆಂಡೂಲ್ಕರ್ ಮತ್ತು ನಾಯಕ ವೀರೆಂದ್ರ ಸೆಹ್ವಾಗ್ ಅವರು ಕ್ರೀಡಾಸ್ಪೂರ್ತಿ ಮೆರೆದು ಕ್ರೀಡಾ ನಿಯಮದ ಪ್ರಕಾರ ಔಟ್ ಆಗಿದ್ದರೂ ಸಹ ತಿರುಮಾನೆಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು.
@ProfDeano Buttler NEVER learns!!!#mankading #mankad #RRvKXIP #KXIPvRR pic.twitter.com/SlSxhnZ7nf
— Om Mehta (@om_mehta) March 25, 2019 " class="align-text-top noRightClick twitterSection" data="
">@ProfDeano Buttler NEVER learns!!!#mankading #mankad #RRvKXIP #KXIPvRR pic.twitter.com/SlSxhnZ7nf
— Om Mehta (@om_mehta) March 25, 2019@ProfDeano Buttler NEVER learns!!!#mankading #mankad #RRvKXIP #KXIPvRR pic.twitter.com/SlSxhnZ7nf
— Om Mehta (@om_mehta) March 25, 2019
ಬಟ್ಲರ್ ಔಟ್ ಆಗಿದ್ದು 2ನೇ ಬಾರಿ
ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಮಂಕಡ್ಗೆ ಬಲಿಯಾಗುತ್ತಿರುವುದು ಇದು 2ನೇ ಬಾರಿ. ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಸರಣಿಯನ್ನು ಬಟ್ಲರ್ ಮಂಕೆಂಡ್ಗ್ಗೆ ಬಲಿಯಾಗಿದ್ದರು, ಆದರೆ ಲಂಕಾದ ಬೌಲರ್ ಸಚಿತ್ರ ಸೇನಾನಾಯಕೆ ಬಟ್ಲರ್‌ಗೆ ಚೆಂಡು ಎಸೆಯುವ ಮುನ್ನ ಕ್ರೀಸ್ ಬಿಡದಂತೆ ಎಚ್ಚರಿಕೆ ನೀಡಿದ್ದರು, ಆದರೆ ಬಟ್ಲರ್ ಅದನ್ನೇ ಮುಂದುವರೆಸಿದಾಗ ಸಚಿತ್ರ ಬೇಲ್ ಎಗರಿಸಿ ಬಟ್ಲರ್ ಅನ್ನು ಔಟ್ ಮಾಡಿದ್ದರು.
dude, have a look at that over.. Butler was found taking the advantage thrice in that over.@ashwinravi99 observed that, that's y he went for that #mankad in the last bowl.
— Amber Kumar Shreshtha (@AmberShreshtha) March 26, 2019 " class="align-text-top noRightClick twitterSection" data="
Have a look.. 👇 pic.twitter.com/jhA8tx1Nau
">dude, have a look at that over.. Butler was found taking the advantage thrice in that over.@ashwinravi99 observed that, that's y he went for that #mankad in the last bowl.
— Amber Kumar Shreshtha (@AmberShreshtha) March 26, 2019
Have a look.. 👇 pic.twitter.com/jhA8tx1Naudude, have a look at that over.. Butler was found taking the advantage thrice in that over.@ashwinravi99 observed that, that's y he went for that #mankad in the last bowl.
— Amber Kumar Shreshtha (@AmberShreshtha) March 26, 2019
Have a look.. 👇 pic.twitter.com/jhA8tx1Nau
ಕಪಿಲ್ ದೇವ್ ಸಹ ಹೀಗೆ ರನ್‌ಔಟ್ ಮಾಡಿದ್ದರು
ಅಶ್ವಿನ್ಗಿಂತ ಮೊದಲೆ ಭಾರತಕ್ಕೆ ಮೊದಲ ವಿಶ್ವಕಪ್ ಕ್ರಿಕೆಟ್ ತಂದುಕೊಟ್ಟ ಕ್ರಿಕೆಟರ್ ಆದ ಕಪಿಲ್ ದೇವ್ ಸಹ ಒಮ್ಮೆ ಹೀಗೆಯೇ ಬ್ಯಾಟ್ಸ್‌ಮನ್ ಒಬ್ಬರನ್ನು ಔಟ್ ಮಾಡಿದ್ದರು, ಆದರೆ ಅಂದೂ ಸಹ ಅವರು ಹಾಗೆ ಔಟ್ ಮಾಡುವ ಮುನ್ನಾ ಬ್ಯಾಟ್ಸ್‌ಮನ್‌ಗೆ ಹಲವು ಬಾರಿ ಎಚ್ಚರಿಕೆ ನೀಡಿ ಔಟ್ ಮಾಡಿದ್ದರು.
- " class="align-text-top noRightClick twitterSection" data="">
ಮೊದಲ ಬಾರಿ ಈ ರೀತಿ ಔಟ್ ಮಾಡಿದ್ದೆ ಭಾರತೀಯ ಬೌಲರ್
ಭಾರತದ ಬೌಲರ್ ಮಾಂಕಡ್ 1947ರಲ್ಲೇ ಈ ರೀತಿ ರನ್ಔಟ್ ಮಾಡಿ ಸುದ್ದಿಯಾಗಿದ್ದರು. ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿ ವಿನು ಮಾಂಕಡ್ ಅವರು ಆಸ್ಟ್ರೇಲಿಯಾದ ಆಟಗಾರ ಬಿಲ್ ಬ್ರೌನ್ ಅವರನ್ನು ಚೆಂಡು ಎಸೆಯುವ ಮುನ್ನವೇ ಕ್ರೀಸ್ ಬಿಡದಂತೆ ಎರಡು ಬಾರಿ ವಾರ್ನಿಂಗ್ ಮಾಡಿದ್ದರು. ಆದರೂ ಬ್ರೌನ್ ಮತ್ತೆ ಮತ್ತೆ ಕ್ರೀಸ್ ಬಿಟ್ಟು ಹೋಗುತ್ತಿದ್ದರಿಂದ ಮಂಕಡ್ ರನ್ ಔಟ್ ಮಾಡಿದ್ದರು. ಈ ರೀತಿ ಔಟ್ ಮಾಡಿದ್ದನ್ನು ಎದುರಾಳಿ ನಾಯಕ ಡಾನ್ ಬ್ರಾಡ್‌ಮನ್ ಸಹ ಮಂಕಡ್ ಅವರನ್ನು ಸಮರ್ಥಿಸಿಕೊಂಡಿದ್ದರು.