ವಿಜಯಪುರ: ನಿರೀಕ್ಷೆಯಂತೆಯೇ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹ್ಯಾಟ್ರಿಕ್ ಬಾರಿಸಿದ್ದಾರೆ. ಚಿಕ್ಕೋಡಿಯಿಂದ ಹ್ಯಾಟ್ರಿಕ್ ಬಾರಿಸಿದ್ದ ರಮೇಶ್, ವಿಜಯಪುರದಲ್ಲೂ ಅದೇ ಕಮಾಲ್ ಮುಂದುವರೆಸಿದ್ದಾರೆ. ಬರೋಬ್ಬರಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿ, ಇತಿಹಾಸ ಬರೆದಿದ್ದಾರೆ.
ಸತತ 6ನೇ ಬಾರಿ ಗೆದ್ದು ಬೀಗಿದ ರಮೇಶ್
ಬಿಜಾಪುರ ಮೀಸಲು ಕ್ಷೇತ್ರದಿಂದ ಹಾಲಿ ಸಂಸದ ರಮೇಶ ಜಿಗಜಿಣಗಿ ನೀರಿಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮೂರನೇ ಬಾರಿ ಕಣಕ್ಕೆ ಇಳಿದಿದ್ದ ಜಿಗಜಿಣಗಿ ಜೆಡಿಎಸ್ ಅಭ್ಯರ್ಥಿ ಡಾ.ಸುನೀತಾ ಚವ್ಹಾಣ ಎದುರು ಸುಲಭವಾಗಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ.
ಸತತ 6ನೇ ಬಾರಿ ಗೆದ್ದು ಬೀಗಿದ ರಮೇಶ್ ಅದೃಷ್ಟದ ಬಲದಿಂದಲೇ ಗೆದ್ದು ಬೀಗಿದ ಜಿಗಜಿಣಗಿ ಜಿಗಜಿಣಗಿ ಅದೃಷ್ಟದಲ್ಲಿ ಜಯಗಳಿಸಿದ ಅಭ್ಯರ್ಥಿ ಎಂದೇ ಬಿಂಬಿಸಲಾಗಿದೆ. ಮೊದಲು ಬಾರಿ ಸಂಸದರಾದಾಗ ಯಡಿಯೂರಪ್ಪ ನಾಮಬಲ, ಎರಡನೇ ಬಾರಿ ನರೇಂದ್ರ ಮೋದಿ ನಾಮಬಲ, ಈಗ ಮತ್ತೆ ಮೋದಿ ಹೆಸರು ಅವರ ಗೆಲುವಿಗೆ ಕಾರಣವಾಗಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಜನಜನಿತ.
ಅಸಮಾಧಾನದ ನಡುವೆಯೂ ಮತ ಹಾಕಿ ಜೈ ಎಂದ ಮತದಾರ
ಕಳೆದ. 10 ವರ್ಷದಿಂದ ವಿಜಯಪುರ ಲೋಕಸಭೆ ಸಂಸದರಾಗಿದ್ದ ರಮೇಶ ಜಿಗಜಿಣಗಿ ಅಭಿವೃದ್ಧಿ ವಿಚಾರದಲ್ಲಿ ಏನು ಕೆಲಸ ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಾರಿ ಗೆಲುವು ಕಷ್ಟಕರ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಮೈತ್ರಿ ಸರ್ಕಾರದ ಬಲದಿಂದ ಜೆಡಿಎಸ್ ಗೆ ಸೀಟು ಬಿಟ್ಟು ಕೊಟ್ಟಿದ್ದೇ ಬಿಜೆಪಿ ಗೆ ವರದಾನವಾಯಿತು. ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆ ಸಮಬಲ ಹೋರಾಟ ನೀಡಲು ಕಾಂಗ್ರೆಸ್ ಸಶಕ್ತವಾಗಿತ್ತು. ಆದರೆ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಕ್ಷೇತ್ರದ ತನ್ನ ವಶಪಡಿಸಿಕೊಂಡ ಮೇಲೆ ಬಿಜೆಪಿಗೆ ಗೆಲುವು ಸುಲಭದ ತುತ್ತಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಾಗಲೇ ನಿರ್ಧಾರವಾಗಿತ್ತಂತೆ ಗೆಲುವು!
ಅದರಲ್ಲಿಯೂ ಜೆಡಿಎಸ್ ನಿಂದ ಮಹಿಳೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಾಗಲೇ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲವು ನಿಶ್ವಿತವಾಗಿತ್ತು. ಅದೇ ರೀತಿ ರಮೇಶ ಜಿಗಜಿಣಗಿ ಗೆಲುವು ಸುಲಭವಾಗಿ ಲಭಿಸಿದೆ. ಆದರೀಗ ಅವರ ಮೇಲೆ ಕ್ಷೇತ್ರದ ಅಭಿವೃದ್ಧಿ ಮಾಡುವ ಜವಾಬ್ದಾರಿ ಇದೆ. ಈಗಲಾದರೂ ಅವರು ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂಬುದು ಮತದಾರನ ಒತ್ತಾಸೆಯಾಗಿದೆ.