ಜೈಪುರ: 12 ನೇ ಆವೃತ್ತಿಯಲ್ಲಿ ಗೆಲುವನ್ನೇ ಕಾಣದ ಎರಡು ನತದೃಷ್ಟ ತಂಡಗಳಾದ ಆರ್ಸಿಬಿ ಹಾಗೂ ಆರ್ಆರ್ ಇಂದು ಜೈಪುರದಲ್ಲಿ ಕಣಕ್ಕಿಳಿಯುತ್ತಿದ್ದು, ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ಬೌಲಿಂಗ್ಆಯ್ದಕೊಂಡಿದೆ.
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊನೆಯ ಓವರ್ನತನಕ ಪಂದ್ಯವನ್ನು ತೆಗೆದುಕೊಂಡು ಹೋಗಿದ್ದ ರಾಜಸ್ಥಾನ್ ಬ್ರಾವೋ ಎಸೆದ 20ನೇಓವರ್ನಲ್ಲಿ 12 ರನ್ಗಳಿಸಲಾಗದೆ 8 ರನ್ಗಳಿಂದ ಸೋಲನುಭವಿಸಿತ್ತು. ರಾಯಲ್ಸ್ ತಂಡ ಬೌಲಿಂಗ್ನಲ್ಲಿ ಬಲಿಷ್ಟವಾಗಿದ್ದರು ಬ್ಯಾಟಿಂಗ್ನಲ್ಲಿ ಮಾತ್ರ ಅಸ್ಥಿರ ಪ್ರದರ್ಶನ ಕಂಡುಬರುತ್ತಿದೆ. ಕಳೆದ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್ ಈ ಸೀಸನ್ನಲ್ಲಿ ಮೊದಲ ಪಂದ್ಯದ ನಂತರ ವಿಫಲರಾಗುತ್ತಿರುವುದು ರಾಯಲ್ಸ್ಗೆ ತಲೆನೋವು ತಂದಿದೆ. ಒಟ್ಟಾರೆ ತನ್ನ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿಕೊಂಡು ಇಂದು ಆರ್ಸಿಬಿ ವಿರುದ್ಧ ಗೆಲುವು ಪಡೆಯುವ ವಿಶ್ವಾಸದಲ್ಲಿ ರಹಾನೆ ಪಡೆಯಿದೆ.
Here's the Playing XI for #RRvRCB
— IndianPremierLeague (@IPL) April 2, 2019 " class="align-text-top noRightClick twitterSection" data="
Live - https://t.co/O45uyAtahT pic.twitter.com/an96EXVdwe
">Here's the Playing XI for #RRvRCB
— IndianPremierLeague (@IPL) April 2, 2019
Live - https://t.co/O45uyAtahT pic.twitter.com/an96EXVdweHere's the Playing XI for #RRvRCB
— IndianPremierLeague (@IPL) April 2, 2019
Live - https://t.co/O45uyAtahT pic.twitter.com/an96EXVdwe
ಇಂದು ಆಲ್ರೌಂಡರ್ ಸ್ಟುವರ್ಟ್ ಬಿನ್ನಿ,ವರೂನ್ ಅ್ಯರೋನ್ ಇಂದು ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಇನ್ನು ಆರ್ಸಿಬಿ ತಂಡ ಸನ್ರೈಸ್ರ್ಸ್ ವಿರುದ್ದ ಹೈದರಾಬಾದಿನಲ್ಲಿ ನಡೆದ ಪಂದ್ಯದಲ್ಲಿ 118 ರನ್ಗಳ ಹಿನಾಯ ಸೋಲುಕಂಡಿದೆ. ಬ್ಯಾಟಿಂಗ್ ,ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ದಯನೀಯ ವೈಫಲ್ಯ ಅನುಭವಿಸುತ್ತಿರುವ ಕೊಹ್ಲಿ ಪಡೆ ಇಂದು ಹಲವು ಬದಲಾವಣೆಗಳೊಡನೆ ಕಣಕ್ಕಿಳಿಯುತ್ತಿದೆ.
ಆಸ್ಟ್ರೇಲಿಯಾಮಾರ್ಕಸ್ ಸ್ಟೋನಿಸ್, ಹಾಗೂ ಅಕಾಶ್ದೀಪ್ ನಾಥ್ ತಂಡಕ್ಕೆ ಸೇರ್ಪಡೆಗೊಂಡಿದ್ದು, ನವದೀಪ್ ಸೈನಿ ತಂಡಕ್ಕೆ ವಾಪಸ್ ಆಗಿದ್ದಾರೆ.